ರನ್ನ ಬೆಳಗಲಿ 6: ಪಟ್ಟಣದ ಸಮೀಪದ ಗ್ರಾಮ ನಾಗರಾಳ ಮಾಧವಾನಂದ ಕನ್ನಡ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರದಂದು ಸನ್ 2024-25ನೇ ಸಾಲಿನ ಶಾಲಾ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ ಸಮಾರಂಭ ಜರಗಿತು.
ಸಂಸ್ಥೆಯ ಅಧ್ಯಕ್ಷ ಆರ್ ಟಿ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಅವರು ಕ್ರೀಡೆಗಳು ಆರೋಗ್ಯಕ್ಕೆ ವರದಾನವಾಗಿವೆ ದಿನನಿತ್ಯದ ಪಠ್ಯ ಪುಸ್ತಕಗಳ ಅಭ್ಯಾಸಗಳ ಜೊತೆಗೆ ಆಟೋಟಗಲಿ ಭಾಗವಹಿಸಿ ಮೊಬೈಲ್ ನಿಂದ ದೂರ ಇರಬೇಕೆಂದು ತಿಳಿಸಿದರು.ಸಂಸ್ಥೆಯ ಉಪಾಧ್ಯಕ್ಷ ವೆಂಕಪ್ಪ ಬಿ ಪಾಟೀಲ ಸಂಸ್ಥೆಯ ಕಾರ್ಯದರ್ಶಿ ಆಯ್ ಅರ ಗಂಜಿ ಊರಿನ ಪ್ರಮುಖರಾದ ದುಂಡಪ್ಪ ಜೈನಾಪುರ, ಯಲ್ಲಪ್ಪ ಚನ್ನಾಪುರ, ಭೀಮಶಿ ನೇಗಿ, ಮಾನಿಂಗ ಭಜಂತ್ರಿ, ಸಿದ್ದಲಿಂಗಪ್ಪ ಪಾಟೀಲ, ಹರೀಶಗೌಡ ಪಾಟೀಲ, ಸಂಸ್ಥೆಯ ಮುಖ್ಯ ಗುರು ಅಶೋಕ್ ಯಡಹಳ್ಳಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ನಿರೂಪಣೆಯನ್ನು ಕೃಷ್ಣಾ ಹೊಸಮನಿ, ಕ್ರೀಡಾ ಜ್ಯೋತಿ ಕಾರ್ಯಕ್ರಮ ಗೋವಿಂದ ಹಾದಿಮನಿ ಮತ್ತು ವಂದನಾರೆ್ಣಯನ್ನು ರಾಚಪ್ಪ ಮಾದರ, ಪ್ರತಿಜ್ಞಾವಿಧಿಯನ್ನು ಗದಿಗೆಪ್ಪ ನೇಸೂರ ಬೋಧಿಸಿದರು.
ಕ್ರೀಡಾಕೂಟದ ಉಸ್ತುವಾರಿಯನ್ನು ದೈ ಶಿ. ಮಲ್ಲಪ್ಪ ಹಸಬಿ ಮತ್ತು ವಿನೋದ ಕಾಂಬ್ಳೆ ವಹಿಸಿದ್ದರು.