ಮಾನಸಿಕ-ದೈಹಿಕ ಬೆಳವಣಿಗೆಗೆ ಕ್ರೀಡೆಗಳು ಅಗತ್ಯ-ಚಿತ್ರಶೇಖರ ಶ್ರೀಗಳು.

ರಾಣೇಬೆನ್ನೂರು15: ಕ್ರೀಡೆಗಳಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯಕರ ಬೆಳವಣಿಗೆಯಿಂದ ಇರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿ ಕ್ರೀಡಾಸ್ಪೂತರ್ಿ ಮೆರೆಯುವುದರ ಜೊತೆಗೆ ಆರೋಗ್ಯಕರವಾದ ಬೆಳವಣಿಗೆಯ ಮೂಲಕ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಎಂದು ಶ್ರೀ ಒಡೆಯರ ಚಿತ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

  ಶ್ರೀ ಸದಾಶಿವ ಒಡೆಯರ ಹಾಗೂ ವಿಜಯಲಕ್ಷ್ಮಿ ಸೋಮಶೇಖರ ಒಡೆಯರ ಇವರ ಸ್ಮರಣಾರ್ಥವಾಗಿ ಶ್ರೀ ಶಿವದೇವ ಯುವಕ ಮಂಡಳ ಹಾಗೂ ಯಂಗ್ ಪೈಟಸರ್್ ಕ್ರಿಕೇಟ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಚೌಡಯ್ಯದನಪುರ ಗ್ರಾಮದಲ್ಲಿ ನಡೆದ 15ನೇ ಅಂತರ್ ಜಿಲ್ಲಾ ಗ್ರಾಮೀಣ ಮಟ್ಟದ ಹಾಡರ್್ ಟೆನ್ನಿಸ್ ಬಾಲ್ ಕ್ರಿಕೇಟ್ ಟೂನರ್ಾಮೆಂಟ್ನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

  ಕ್ರೀಡೆಗಳಿಂದ ಮಾತ್ರ ಸದೃಢರಾಗಲು ಸಾಧ್ಯ. ಇಂದಿನ ಯುವಕರು ಹೆಚ್ಚಾಗಿ ಮೋಬೈಲ್ಗಳಲ್ಲಿ ಪಬ್ಜಿ ಸೇರಿದಂತೆ ಹಲವಾರು ಗೇಮ್ಗಳನ್ನು ಆಡಿ ಮಾನಸಿಕವಾಗಿ ಕುಗ್ಗುವುದರ ಮೂಲಕ ತಮ್ಮ ಜೀವನವನ್ನೇ ಅಧೋಗತಿಗೆ ಕೊಂಡೊಯ್ಯುವಂತಾಗಿದೆ. ಮೋಬೈಲ್ ಗೇಮ್ಗಳು ಜೀವನಕ್ಕೆ ಅಪಾಯಕಾರಿ ಹೊರತು ಆರೋಗ್ಯಕ್ಕೆ ಒಳ್ಳೆಯದಲ್ಲ. ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಂಡು ಜೀವನದಲ್ಲಿ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಿರಿ ಎಂದರು.

  ಶ್ರೀಶೈಲ ಚೌಗಲಾ ಮಾತನಾಡಿ, ಯುವಕರು ದುಶ್ಚಟಗಳಿಂದ ದೂರವಿದ್ದು, ಸಮಾಜಮುಖಿಯಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಮಾಜದಲ್ಲಿ ಆದರ್ಶರಾಗಿ ಬಾಳಬೇಕು. ಕ್ರೀಡೆಗಳು ನಮ್ಮ ಅವಿಭಾಜ್ಯ ಅಂಗವಾಗಿವೆ. ಕೇವಲ ಕ್ರಿಕೇಟ್ಗೆ ಹೆಚ್ಚಿನ ಆಧ್ಯತೆ ನೀಡದೆ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿ ಅವುಗಳನ್ನು ಉಳಿಸಿಬೆಳೆಸುವ ಪ್ರಾಮಾಣಿಕ ಪ್ರಯತ್ನವನ್ನು ಇಂದಿನ ಯುವಕರು ಮಾಡಬೇಕಾಗಿದೆ ಎಂದರು.

   ನಿಖಿಲ್ ವಿದ್ಯಾಧರ ಒಡೆಯರ ಅಧ್ಯಕ್ಷತೆವಹಿಸಿದ್ದರು, ಏಕನಾಥ ಭಾನುವಳ್ಳಿ, ಲಕ್ಷ್ಮಣ ದೀಪಾವಳಿ, ಸಂಕಪ್ಪ ಅರಸಪ್ಪನವರ, ಬಸಯ್ಯ ಪೂಜಾರ, ಸೋಮಪ್ಪ ಬಾಡಿನ, ಅಡಿವೆಪ್ಪ ಗಿಂಡಿ, ಎಸ್.ಸಿ.ಸಣ್ಣಗೌಡ್ರ, ಎಂ.ಚಿರಂಜೀವಿ, ರತ್ನವ್ವ ಕರಿಗಾರ, ವಿಜಯಲಕ್ಷ್ಮಿ ಮಲ್ಲಾಡದ, ಶಿವಪ್ಪ ಕುರವತ್ತಿ, ಮೈಲಾರೆಪ್ಪ ಬನ್ನಿಮಟ್ಟಿ, ವಿರೇಶ ಗುತ್ತಲ, ವಸಂತ ಕುರವತ್ತಿ, ಮುತ್ತಣ್ಣ ಯಲಿಗಾರ, ಗಂಗಾಧರಪ್ಪ ದೀಪಾವಳಿ, ಶರಣಯ್ಯ ಪೂಜಾರ, ಜಗದೀಶ ಭತ್ತದ, ವಿಠ್ಠಲ ಪುಠಾಣಿಕರ, ಸುರೇಶ ದಳವಾಯಿ, ದೇವರಾಜ ಭತ್ತದ, ಮೌನೇಶ ಬಡಿಗೇರ, ಚಂದ್ರಪ್ಪ ದಳವಾಯಿ, ಸೋಮಶೇಖರ ಚಂದಾಪುರ ಸೇರಿದಂತೆ ಮತ್ತಿತರರು ಇದ್ದರು.