ಕೋವಿಡ್-19 ತಡೆಗೆ ಕೇರಳದ ದೇಗುಲಗಳಲ್ಲಿ ವಿಶೇಷ ಪೂಜೆ; ಭಕ್ತರಿಂದ ಆನ್ ಲೈನ್ ಪಾವತಿ

ಕೊಚ್ಚಿ, ಏ 2, ಲಾಕ್ ಡೌನ್ ಹಿನ್ನೆಲೆಯಲ್ಲಿ ಕೇರಳದ ದೇಗುಲಗಳ ಬಾಗಿಲು ಮುಚ್ಚಿರುವುದರಿಂದ ಭಕ್ತರು,  ಆನ್ ಲೈನ್ ಮೂಲಕವೇ ಹಣ ಪಾವತಿಸಿ, ವಿಶೇಷ ಪೂಜೆ ನಡೆಸುವಂತೆ ಅರ್ಚಕರಿಗೆ ಮನವಿ ಮಾಡುತ್ತಿದ್ದಾರೆ, ದೇಗುಲದ ಆಡಳಿತ ಮಂಡಳಿಗೆ ಹಲವು ದೂರವಾಣಿ ಕರೆಗಳು ಹಾಗೂ ವಾಟ್ಸ್  ಆ್ಯಪ್ ಸಂದೇಶಗಳು ದೊರೆತಿದ್ದು, ಗಣಪರಿಹಾರಹೋಮ ಹಾಗೂ ಶನಿದೋಷಪರಿಹಾರ ಪೂಜೆ ನಡೆಸುವಂತೆ ಮನವಿ ಸಲ್ಲಿಸಿದ್ದಾರೆ. ಇದಕ್ಕಾಗಿ ಆನ್ ಲೈನ್ ಪಾವತಿಯನ್ನು ಕೂಡ ಮಾಡಿದ್ದಾರೆ. ದೇಗುಲಗಳಲ್ಲಿ ಭಕ್ತರ ಅನುಪಸ್ಥಿತಿಯಲ್ಲಿ ಕೂಡ ಕಠಿಣ ನಿಯಮಗಳನ್ನು ಪಾಲಿಸಲಾಗುತ್ತಿದೆ. ಭಕ್ತರ ಬೇಡಿಕೆ ಮೇರೆಗೆ ಶಿವನಿಗೆ ಮೃತ್ಯುಂಜಯ ಹೋಮ ಮಾಡಲಾಗಿದೆ ಎಂದು ಅರ್ಚಕರು ತಿಳಿಸಿದ್ದಾರೆ.