ಲೋಕದರ್ಶನ ವರದಿ
ಗದಗ: ಭಾತರ ದೇಶದಲ್ಲಿ ಹಿಂದಿನಿಂದಲೂ ಜಾತಿ ಆಧಾರಿತ ಸಮಾಜ ವ್ಯವಸ್ಥೆಯಲ್ಲಿ ಶತಮಾನಗಳಿಂದಲು ಶೋಷಣೆಗೆ ಒಳಗಾದ ಸಮುದಾಯಗಳಿಗೆ ಸಂವಿಧಾನದ ಪ್ರಕಾರ ದೇಶದ ಪ್ರತಿಯೂಬ್ಬ ಪ್ರಜೆಗೂ ಒಂದೇ ರೀತಯಾದ ನಾಗರಿಕ ಹಕ್ಕು ಇರಬೇಕೆಂಬ ಉದ್ದೇಶದಿಂದ ಹಾಗೂ ಸಾಮಾಜಿಕ ಅಸಮತೋಲನವನ್ನು ಹೊಗಲಾಡಿಸಲು ಸರ್ಕಾರಗಳು ಶೋಷಿತ ಸಮುದಾಯಗಳಿಗಾಗಿ ವಿಶೇಷ ಘಟಕದ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್.ಎಂ.ಹೆಬ್ಬಳ್ಳಿ ಅವರು ಹೇಳಿದರು.
ಅವರು ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಶಾಖೆ ಸಮಿತಿ ಪದಾಧಿಕಾರಿಗಳಿಗೆ ಹಾಗೂ ಅಸಂಘಟಿತ ಕಾಮರ್ಿಕರಿಗಾಗಿ ಹಮ್ಮಿಕೊಂಡಿದ್ದ ಮಾಹಿತಿ ಶಿಬಿರ್ವನ್ನು ಉದ್ಘಾಟಿಸಿ ಮಾತನಾಡುತ್ತ ಶೋಷಿತ ಸಮುದಾಯಗಳು ಸಮಾಜದ ಇತರೇ ಜನ ಸಮುದಾಯದಲ್ಲಿ ಬೆರೆತು ಅವರಿಗೆ ಸರಿಸಮಾನಾಗಿ ತಮ್ಮ ಬದುಕು ರೂಪಿಸಿಕೊಳ್ಳಲು ಸಾಮಾಜಿಕವಾಗಿ, ಆಥರ್ಿಕವಾಗಿ ಹಾಗೂ ಶೈಕ್ಷಣಿಕವಾಗಿ ಬೆಳೆಯಲು ಸಮಾಜ ಕಲ್ಯಾಣ ಇಲಾಖೆಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ, ಅಸ್ಪಸೃಶ್ಯತೆ, ಜಾತೀಯತೆ ಮುಂತಾದ ಅಮಾನವೀಯ ಆಚರಣೆಯಿಂದ ಶೋಷಿಸಲ್ಪಡುವ ಜನರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ, ಸರಕಾರಿ ಮೇಟ್ರಿಕ್ ಪೂರ್ವ ವಿಧ್ಯಾಥರ್ಿಗಳಿಗಾಗಿ ವಸತಿ ನಿಲಯಗಳು, ಸರಕಾರಿ ವಸತಿ ಶಾಲೆಗಳು, ಮೆಟ್ರಿಕ್ ನಂತರದ ವಿಧ್ಯಾಥರ್ಿ ನಿಲಯಗಳು, ಶಾಲಾ ಕಾಲೇಜುಗಳ ವಿಧ್ಯಾಥರ್ಿಗಳಿಗೆ ವೇತನ ಇನ್ನು ಹಲವಾರು ಶೈಕ್ಷಣಿ ಯೋಜನೆಗಳ ಮೂಲಕ ಶೋಷಿತ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗುತ್ತಿದೆ.
ಇದೇ ರೀತಿಯಾಗಿ ಅಂತರ ಜಾತಿ ವಿವಾಹವಾದ ದಂಪತಿಗಳಿಗೆ ಪ್ರೋತ್ಸಾಹ ಧನ, ದೇವದಾಸಿ ಮಕ್ಕಳ ಮದುವೆಗಾಗಿ ಪ್ರೋತ್ಸಾಹ ಧನ, ವಿಧವಾ ಮರು ವಿವಾಹಕ್ಕೆ ಪ್ರೋತ್ಸಾಹ ಧನ, ಭೂ ಮಂಜೂರಾತಿ ಹಾಗೂ ನಿವೇಶನ ಖರೀದಿಗಾಗಿ ಪ್ರೋತ್ಸಾಹ ಧನ, ದೌರ್ಜನ್ಯ ಪ್ರಕರಣಗಳಿಗೆ ಪರಿಹಾರ ಹೀಗೆ ಹಲವಾರು ಕಾರ್ಯಕ್ರಮಗಳ ಅನುಷ್ಠಾನದ ಮೂಲಕ ಶೋಷಿತ ಸಮುದಾಯಗಳು ಸಾಮಾಜಿಕವಾಗಿ, ಆಥರ್ಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದಾಗಲು ವಿಶೇಷ ಘಟದಕ ಯೋಜನೆಗಳಿಂದ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರೋತ್ಸಾಹಿಸಲಾಗುತ್ತಿದೆ, ಆದ್ದರಿಂದ ಇದರ ಸದಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಜಿಲ್ಲಾ ಕಾಮರ್ಿಕ ಇಲಾಖೆ ಯೋಜನಾ ನಿದರ್ೇಶಕರಾದ ಫಕೀರಪ್ಪ ಹಡಗ್ಲಿ ಮಾತನಾಡಿ ಕಾಮರ್ಿಕ ಇಲಾಖೆಯಲ್ಲಿ ನೋಂದಣೆ ಮಾಡಿಸಿಕೊಂಡಿರುವ ಕಾಮರ್ಿಕರಿಗೆ ಮದುವೆ ಸಹಾಯಧನ ಗೃಹ ಲಕ್ಷ್ಮೀ ಭಾಂಡ್ ಫಲಾನುಭವಿ ಹಾಗೂ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ 50 ಸಾವಿರಗಳನ್ನು ಸಹಾಯಧನವನ್ನು ಮಂಜೂರ ಮಾಡಲಾಗುತ್ತದೆ, ಕಾಮರ್ಿಕ ಆರೋಗ್ಯ ಭಾಗ್ಯ ಯೋಜಡಿಯಲ್ಲಿ ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಬಿತರಿಗೆ 300 ರಿಂದ 10 ಸಾವಿರ ವರೆಗೊ ಚಿಕ್ಷಿತೆಗಾಗಿ ಅನುದಾನ ನೀಡಲಾಗುತ್ತದೆ, ಸಾಮಾನ್ಯ ಶಸ್ತ್ರಚಿಕಿತ್ಸೆಗಾಗಿ ಎರಡು ಲಕ್ಷದವರೆಗೊ ಸಹಾಯಧನವನ್ನು ಇಲಾಖೆಯಿಂದ ನೀಡಲಾಗುತ್ತಿದೆ, ಕಲಿಕ ಭಾಗ್ಯ ಯೋಜನೆಡಿಯಲ್ಲಿ ನೋಂದಾಯಿತ ಫಲಾನುಭವಿಗಳ ಇಬ್ಬರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಸಹಾಯಧನ ರೂಪದಲ್ಲಿ 2 ಸಾವಿರನಿಂದ 20 ಸಾವಿರ ವರೆಗೊ ನೀಡಲಾಗುತ್ತಿದೆ, ಇನ್ನು ಹಲವಾರು ಯೋಜನೆಗಳು ಕಾಮರ್ಿಕ ಇಲಾಖೆಯಿಂದ ಮಂಜೂರು ಮಾಡಲಾಗುತ್ತಿದೆ ಇದನ್ನು ತಿಳಿದು ಕೊಂಡು ಯೋಜನೆಗಳ ಲಾಭ ಪಡೆದುಕೊಳ್ಳಲು ಪ್ರತಿಯೂಬ್ಬ ಕಾಮಿಕರು ಕಡ್ಡಾಯವಾಗಿ ಇಲಾಖೆಯಲ್ಲಿ ನೋಂದಣೆ ಮಾಡಿಸಿಕೊಳ್ಳಬೇಕೆಂದು ಹೇಳಿದರು.
ಗದಗ-ಬೆಟಗೇರಿ ನಗರಸಭೆಯ ಸಮುದಾಯ ಸಂಘಟನಾ ಅಧಿಕಾರಿಗಳಾದ ಆರ್.ಎ.ಹೊಸಮನಿ ಮಾತನಾಡಿ ದೀನ ದಯಾಳ ಅಂತ್ಯೋದಯ ಯೋಜನೆಯನ್ನು ಮಾಪರ್ಾಡಾಗಿರುವ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಡಿ-ನಲ್ಮ್ ಯೋಜನೆಡಿಯಲ್ಲಿ ನಗರ ಬಡಜನರ ಆಥರ್ಿಕ ಸಾಮಾಥ್ರ್ಯ ಹೆಚ್ಚಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ, ನಗರದ ಬಡನರಿಗಾಗಿ ಅಗತ್ಯ ಕೌಶಲ್ಯ ತರಬೇತಿ ನೀಡುವುದು, ಸ್ವ-ಉದ್ಯೋಗ ಕೈಗೊಳ್ಳಲು ರೀಯಾತಿಯಲ್ಲಿ ನಗರದ ಬಡ ಮಹಿಳೆಯರಿಗಾಗಿ ಹಾಗೂ ಗುಂಪುಗಳಿಗೆ ಸಾಲ ಸೌಲಭ್ಯಗಳನ್ನು ನೀಡಿ ನಿರುದ್ಯೋಗ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲು ಡಿ-ನಲ್ಮ್ ಯೋಜನೆಯನ್ನು ಜಾರಿಗೆ ತರಲಾಗಿದೆ, ಸಾಮಾಜಿಕ ಸಂಘಟನೆ, ಸಾಂಸ್ಥಿಕ ಅಭಿವೃದ್ಧಿ, ಸ್ವ-ಉದ್ಯೋಗ, ಕೌಶಲ್ಯ ಅಭಿವೃದ್ಧಿ ತರಬೇತಿ. ವಸತಿ ಹೀನರಿಗೆ ಆಶ್ರಯ ಹಾಗೂ ಬೀದಿ ವ್ಯಾಪಾರಸ್ಥರಿಗೆ ವಿಶೇಷ ವಲಯವನ್ನು ಗುರುತಿಸಿ ಶಾಶ್ವತ ಪರಿಹಾರ ಕಲ್ಪಿಸಲು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ( ಡಿ-ನಲ್ಮ್ ) ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ ಮಾತನಾಡಿ ನಗರದ ನಮ್ಮ ಕೊಳಗೇರಿಗಳಲ್ಲಿ ವಾಸಿಸುತ್ತಿರುವ ನಿವಾಸಿಗಳು ಸಕರ್ಾರದ ಯೋಜನೆಗಳಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸಂಘಟನೆಯಿಂದ ಇಂತಹ ಮಾಹಿತಿ ಶಿಬಿರಗಳನ್ನು ನಡೆಸಲಾಗುತ್ತಿದೆ, ಆದ್ದರಿಂದ ನಮ್ಮ ಸ್ಲಂ ಪ್ರದೇಶದ ಜನರು ಇದರ ಸದಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಪ್ರಗತಿಪರ ಚಿಂತಕರಾದ ಬಸವರಾಜ ಪೂಜಾರ, ಸ್ಲಂ ಬೋರ್ಡ ವ್ಯವಸ್ಥಾಪಕರಾದ ಗೋಪಿ ಮಾಳಗಿ, ಶಿಕ್ಷಕರಾದ ಸಂತೋಷ ಭಜಂತ್ರಿ, ಸ್ಲಂ ಸಮಿತಿ ಉಪಾಧ್ಯಕ್ಷರಾದ ರವಿಕುಮಾರ ಬೆಳಮಕರ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮೆಹರುನಿಸಾ ಡಾಲಾಯತ, ಯುವ ಸಮಿತಿ ಸಂಚಾಲಕ ಉಸ್ಮಾನ ಚಿತ್ತಾಪೂರ, ಜಿಲ್ಲಾ ಸಮಿತಿ ಸದಸ್ಯರಾದ ಇಬ್ರಾಹಿಮ ಮುಲ್ಲಾ, ಅಬುಬಕರ ಮಕಾನದಾರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಸ್ಲಂ ಸಮಿತಿ ಉಪಾಧ್ಯಕ್ಷರಾದ ರವಿಕುಮಾರ ಬೆಳಮಕರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು, ಗದಗ-ಬೆಟಗೇರಿ ನಗರದ ವಿವಿಧ ಸ್ಲಂ ಪ್ರದೇಶದ ನೂರಾರು ಸ್ಲಂ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.