ಎಂಜಲು ಬಳಕೆಯನ್ನು ತಪ್ಪಿಸಲು ವಿಶೇಷ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು: ಇಶಾಂತ್

ನವದೆಹಲಿ, ಜೂನ್ 12, ಕ್ರಿಕೆಟ್ ಮತ್ತೆ ಪ್ರಾರಂಭವಾದಾಗ, ಚೆಂಡಿನ ಮೇಲೆ ಎಂಜಲು ಬಳಸುವುದನ್ನು ತಪ್ಪಿಸಲು ಬೌಲರ್‌ಗಳು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ ಎಂದು ಭಾರತೀಯ ತಂಡದ ವೇಗದ ಬೌಲರ್ ಇಶಾಂತ್ ಶರ್ಮಾ ಹೇಳಿದ್ದಾರೆ.ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ನೇತೃತ್ವದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಾಂತ್ರಿಕ ಸಮಿತಿಯು ಕೊರೊನಾ ವೈರಸ್‌ ಭೀತಿಯಿಂದಾಗಿ ಚೆಂಡಿನ ಮೇಲೆ ಜೊಲ್ಲು ಬಳಸುವುದನ್ನು ನಿಷೇಧಿಸಲು ಪ್ರಸ್ತಾಪಿಸಿತ್ತು, ಇದನ್ನು ಇತ್ತೀಚೆಗೆ ಐಸಿಸಿ ಅಂಗೀಕರಿಸಿತು.

ಸ್ಟಾರ್ ಸ್ಪೋರ್ಟ್ಸ್ ಶೋ ಕ್ರಿಕೆಟ್ ಕನೆಕ್ಟೆಡ್ ನಲ್ಲಿ ಇಶಾಂತ್, "ಕ್ರಿಕೆಟ್ ಪ್ರಾರಂಭವಾದಾಗ ಚೆಂಡಿನ ಮೇಲೆ ಎಂಜಿಲಿ ಬಳಕೆಯನ್ನು ನಿರ್ಲಕ್ಷಿಸುವುದು ನಮಗೆ ಸವಾಲಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ಮೊದಲಿನಿಂದಲೂ, ವಿಶೇಷವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಇದನ್ನು ಬಳಸುತ್ತಿರುವುದರಿಂದ ಅದರ ಬಳಕೆಯನ್ನು ತಪ್ಪಿಸಲು ನಾವು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಿದೆ” ಎಂದು ತಿಳಿಸಿದ್ದಾರೆ. "ಟೆಸ್ಟ್ ಕ್ರಿಕೆಟ್‌ನಲ್ಲಿ ಚೆಂಡು ಹೊಳೆಯದಿದ್ದರೆ, ಚೆಂಡು ಸ್ವಿಂಗ್ ಆಗುವುದಿಲ್ಲ ಮತ್ತು ಬ್ಯಾಟ್ಸ್‌ಮನ್‌ಗಳಿಗೆ ಆಡಲು ಸುಲಭವಾಗುತ್ತದೆ" ಎಂದು ಅವರು ಹೇಳಿದರು. ಪಂದ್ಯವು ಸಮನಾಗಿರಬೇಕು ಎಂದು ನಾನು ಭಾವಿಸುತ್ತೇನೆ. ಆದರೆ ಇದರ ಬಳಕೆಯ ಮೇಲಿನ ನಿಷೇಧದಿಂದ ಬ್ಯಾಟ್ಸ್‌ಮನ್‌ಗಳಿಗೆ ನೆರವಾಗುತ್ತದೆ” ಎಂದು ತಿಳಿಸಿದ್ದಾರೆ.