ವಿಶೇಷ ಉಪನ್ಯಾಸ ಕಾರ್ಯಕ್ರಮ

ಲೋಕದರ್ಶನ ವರದಿ

ಬೆಳಗಾವಿ, 20: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ಸಮಾಜಶಾಸ್ತ್ರ ವಿಭಾಗದ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪ್ರೊ. ಶೌಕತ್ ಅಝೀಮ್, ಸಮಾಜಶಾಸ್ತ್ರ ವಿಭಾಗ, ಕನರ್ಾಟಕ ವಿಶ್ವವಿದ್ಯಾಲಯ, ಧಾರವಾಡ ಇವರು "ಖಜಜಚಿಡಿಛಿ ಆಜರಟಿ"  ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. 

ಇವರು ಮಾತನಾಡಿ ವಿದ್ಯಾಥರ್ಿಗಳ ಭವಿಷ್ಯವನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ಯುಜಿಸಿ ನೆಟ್/ಸ್ಲೆಟ್ ಪರೀಕ್ಷೆಗಳ ಬಗ್ಗೆ ಯಾವ ರೀತಿ ಮಾಹಿತಿಗಳನ್ನು ಕಲೆ ಹಾಕಬಹುದೆಂದು ಮಾಹಿತಿಯನ್ನು ನೀಡಿದರು. ಯುಜಿಸಿ ಅಂತಜರ್ಾಲದ ಇಪಿಜಿ ಪಾಠಶಾಲದಲ್ಲಿ  ಸಾಮಾನ್ಯ ಜ್ಞಾನ ಮತ್ತು ನೆಟ್/ಸ್ಲೆಟ್ ಐಚ್ಛಿಕ ವಿಷಯಗಳ ಕುರಿತು ಮ್ಯಾನಿಸಿಕರವರ ಹತ್ತು ಘಟಕಗಳ ವಿಡಿಯೋ ಮತ್ತು ಅಧ್ಯಯನ ವಿಷಯಗಳ ಬಗ್ಗೆ ಸವಿವರವಾದ ಮಾಹಿತಿಯನ್ನು  ವಿದ್ಯಾಥರ್ಿಗಳಿಗೆ ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ. ಚಂದ್ರಿಕಾ ಕೆ.ಬಿ., ಮುಖ್ಯಸ್ಥರು, ಸಮಾಜಶಾಸ್ತ್ರ ವಿಭಾಗ, ರಾ.ಚ.ವಿ., ಬೆಳಗಾವಿ ಇವರು ಮಾತನಾಡಿ, ವಿದ್ಯಾಥರ್ಿಗಳು ಸತತ ಪ್ರಯತ್ನದಿಂದಾಗಿ ಯಶಸ್ಸನ್ನು ಸಾಧಿಸಲು ಸಾಧ್ಯ ಮತ್ತು ವಿದ್ಯಾಥರ್ಿಗಳಿಗೆ ಸಂಶೋಧನಾ ವಿನ್ಯಾಸದ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು.   

ಗೌರವಾನ್ವಿತ ಅತಿಥಿಗಳಾಗಿ ಪ್ರೊ. ದಶರಥ ಆರ್. ಅಲಬಾಳ, ಸಮಾಜಶಾಸ್ತ್ರ ವಿಭಾಗ, ರಾಚವಿ, ಬೆಳಗಾವಿ ಇವರು ಭಾಗವಹಿಸಿದ್ದರು. ಡಾ. ರವಿ ಎಸ್ ದಳವಾಯಿ, ಸಮಾಜ ಶಾಸ್ತ್ರ ಸಂಘದ ಅಧ್ಯಕ್ಷರು, ರಾಚವಿ, ಬೆಳಗಾವಿ ಇವರು ಸ್ವಾಗತ ಭಾಷಣವನ್ನು ಮತ್ತು ಕಾರ್ಯಕ್ರಮವನ್ನು ನಿರೂಪಿಸಿದರು. ಗೋಪಾಲ ದಳವಾಯಿ ಪ್ರಥಮ ವರ್ಷದ ವಿದ್ಯಾಥರ್ಿ ಇವರು ವಂದನಾರ್ಪಣೆ ಮಾಡಿದರು.  ಸಮಾಜಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಸುಮಂತ್ ಎಸ್. ಹೀರೆಮಠ ಮತ್ತು ಮಂಜುಳಾ ಜಿ.ಕೆ. ಮತ್ತು ವಿದ್ಯಾಥರ್ಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.