ಶಿರಹಟ್ಟಿ 02: ತಾಲೂಕಿನ ಶ್ರೀಮಂತಗಡದ ಆದಿಶಕ್ತಿ ಶ್ರೀ ಹೊಳಲಮ್ಮದೇವಿಗೆ ಕಾರ್ತಿಕಮಾಸದ ಕೊನೆ ಮಂಗಳವಾರದಂದು ಕಮೀಟಿಯ ಸದಸ್ಯರಿಂದ ಕಾರ್ತಿಕೋತ್ಸವವನ್ನು ಆಚರಿಸಲಾಗುತ್ತಿದ್ದು, ದಿ.3 ಮಂಗಳವಾರವಾದ ಬೆಳಿಗ್ಗೆ6 ಗಂಟೆಗೆ ವಿಶೇಷವಾದ ಅಭಿಷೇಕ ಮತ್ತು ಪೂಜೆಯನ್ನು ಕೈಗೊಳ್ಳಲಾಗುವುದು ಮತ್ತು ಸಾಯಂಕಾಲ 7 ಗಂಟೆಗೆ ದೇವಸ್ಥಾನದ ಬಳಿ ದೀಪ ಹಚ್ಚುವ ಕಾರ್ಯಕ್ರಮ ಜರುಗುವುದು. ನಂತರ ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ನಂತರ ಮಹಾ ಪ್ರಸಾದ ಜರುಗುವುದು.ಆದ್ದರಿಂದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಕಮೀಟಿಯ ಅಧ್ಯಕ್ಷ ದಾಮೋಜಿ ತೆಗ್ಗಿಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಸೂಚನೆ: -ಶ್ರೀಮಂತಗಡದ ಹೊಳಲಮ್ಮದೇವಿಯ ಗರ್ಭಗುಡಿ ಸಿಥಿಲವಾಗಿದ್ದರಿಂದ ಪ್ರಾಚ್ಯವಸ್ತು ಇಲಾಖೆಯವರು ಅಭಿವೃದ್ದಿ ಕಾರ್ಯ ಕಾರ್ಯಕೈಗೊಳ್ಳಲಿದ್ದು, ಗರ್ಭ ಗುಡಿಯನ್ನು ಬುದವಾರದಿಂದ ದೇವಿ ಮೂರ್ತಿಯನ್ನು ನವದಾನ್ಯಗಳಿಂದ ಬರ್ತಿಮಾಡಿ ಗರ್ಬಗುಡಿ ನೂತನವಾಗುವವರೆಗೂ ಮೂರ್ತಿಯ ದರ್ಶನಭಾಗ್ಯವಿರುವುದಿಲ್ಲ.ಆದ್ದರಿಂದ ಕಾರ್ತಿಕ ಮಾಸದ ಕೊನೆಯ ಮಂಗಳವಾರದಂದ ಶ್ರೀ ಹೊಳಲಮ್ಮದೇವಿ ದರ್ಶನ ಪಡೆದು ಪುನಿತರಾಗಬೇಕೆಂದು ವಿನಂತಿಸಿದ್ದಾರೆ.