ಅಥಣಿ 28: ಖ್ಯಾತ ಚಿಕ್ಕ ಮಕ್ಕಳ ವೈದ್ಯ ಡಾ.ಪಿ.ಪಿ ಮೀರಜ ಮತ್ತು ಡಾ.ಸಚೀನ್ ಮೀರಜ ನೇತೃತ್ವದ ಸ್ಪಾರ್ಕಲಿಂಗ ಕಿಡ್ಸ ಮಾಂಟೇಸ್ಸರಿ ಶಾಲೆಯ ವಾರ್ಷಿಕೋತ್ಸವ ಮಕ್ಕಳ ನೃತ್ಯ, ಹಾಡು ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಡಾ.ವ್ಹಿ.ಎಸ್.ಮಾಳಿ, ಮಕ್ಕಳು ಅತೀ ಕಡಿಮೆ ವಯಸ್ಸಿನಲ್ಲಿಯೇ ಮಾಂಟೇಸ್ಸರಿ ಮೂಲಕ ಸರ್ವಾಂಗೀಣ ವಿಕಾಸಕ್ಕಾಗಿ ಡಾ.ಪಿ.ಪಿ.ಮೀರಜ ಮಾಂಟೇಸ್ಸರಿ ಪ್ರಾರಂಭಿಸಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ ಎಂದರು. ಅತಿಥಿಗಳಾಗಿ ಆಗಮಿಸಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಅರುಣ ಸೌದಾಗರ, ಡಾ.ಪಿ.ಪಿ.ಮೀರಜ್ ಅವರ ಈ ಶೈಕ್ಷಣಿಕ ಕಾರ್ಯಕ್ಕೆ ರೋಟರಿ ಪರಿವಾರ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಂಟೇಸ್ಸರಿ ಸಂಸ್ಥಾಪಕ ಡಾ.ಪಿ.ಪಿ.ಮೀರಜ ವಹಿಸಿದ್ದರು. ಕಾರ್ಯಾಧ್ಯಕ್ಷ ಡಾ.ಸಚೀನ್ ಮುರಜ, ನಿರ್ದೇಶಕಿಯರಾದ ಡಾ.ನಿರಧಿ ಮೀರಜ, ಸುಮೇಧಾ ಮೀರಜ, ಮುಖ್ಯಾಧ್ಯಾಪಕಿ ಅನೀತಾ ಹಿರೇಮಠ ಸೇರಿದಂತೆ ಶಿಕ್ಷಕ, ಶಿಕ್ಷಕೀಯರು, ಮಕ್ಕಳು, ಪಾಲಕರು ಸೇರಿದಂತೆ ಶಾಲೆಯ ಹಿತೈಷಿಗಳು ಉಪಸ್ಥಿತರಿದ್ದರು.