ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೆಸರು ಪ್ರಸ್ತಾಪಿಸಿದ ಮೈಕೆಲ್: ಕೋಟರ್್ಗೆ ಇಡಿ ಮಾಹಿತಿ

ನವದೆಹಲಿ,29: ಆಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಕ್ಯಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯವತರ್ಿ ಕ್ರಿಶ್ಚಿಯನ್ ಮೈಕೆಲ್ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರು ಪ್ರಸ್ತಾಪಿಸಿರುವುದಾಗಿ ಜಾರಿ ನಿದರ್ೆಶನಾಲಯ(ಇಡಿ)  ದೆಹಲಿ ಪಟಿಯಾಲ ಹೌಸ್ ಕೋಟರ್್ಗೆ ತಿಳಿಸಿದೆ. 

 ಇಡಿ ವಶದಲ್ಲಿರುವ ಮೈಕೆಲ್, ಆಗಸ್ಟಾ ವೆಸ್ಟ್ ಲ್ಯಾಂಡ್ ಕ್ಯಾಪ್ಟರ್ ಖರೀದಿ ಒಪ್ಪಂದದಿಂದ ಎಚ್ಎಎಲ್ ಅನ್ನು ಕೈಬಿಟ್ಟಿದ್ದು ಹೇಗೆ ಮತ್ತು ಟಾಟಾಗೆ ಆಹ್ವಾನ ನೀಡಿದ ವಿಚಾರವನ್ನು ಬಾಯಿಬಿಟ್ಟಿರುವುದಾಗಿ ಇಡಿ ಅಧಿಕಾರಿಗಳು ಕೋಟರ್್ ಗೆ ತಿಳಿಸಿದ್ದಾರೆ. 

ಅಲ್ಲದೇ   ಣಜ ಠಟಿ ಠಜಿ ಣಜ ಣಚಿಟಚಿಟಿ ಟಚಿಜಥಿ (ಇಟಲಿ ಮಹಿಳೆಯ ಪುತ್ರ)" ಮತ್ತು ಅವರು ಹೇಗೆ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂಬ ಬಗ್ಗೆ ಮಿಶೆಲ್ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದ್ದು, ಈ ಪ್ರಸ್ತಾಪ ರಾಹುಲ್ ಗಾಂಧಿ ಅವರಿಗೇ ಸಂಬಂಧಿಸಿದ್ದು ಎಂದೂ ಜಾರಿ ನಿದರ್ೆಶನಾಲಯವು ಕೋಟರ್್ ಎದುರು ಅನುಮಾನ ವ್ಯಕ್ತಪಡಿಸಿದೆ. 

ಮೈಕೆಲ್ ತನಗೆ ಹೊರಗಿನಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಅವರ ವಕೀಲರ ಪ್ರವೇಶವನ್ನು ನಿಷೇಧಿಸಬೇಕು ಎಂದು ಇಡಿ ಅಧಿಕಾರಿಗಳು ಕೋಟರ್್ ಗೆ ಮನವಿ ಮಾಡಿದ್ದಾರೆ.  

ದೆಹಲಿ ಕೋಟರ್್ ಡಿಸೆಂಬರ್ 22ರಂದು ಆರೋಪಿ ಮೈಕೆಲ್ ನನ್ನು ಏಳು ದಿನಗಳ ಕಾಲ ಇಡಿ ವಶಕ್ಕೆ ನೀಡಿ ಆದೇಶಿಸಿತ್ತು. ಏಳು ದಿನಗಳ ಅವಧಿ ಇಂದು ಅಂತ್ಯಗೊಂಡಿದ್ದು, ಆರೋಪಿಯನ್ನು ಕೋಟರ್್ ಗೆ ಹಾಜರುಪಡಿಸಿದ್ದಾರೆ.  

12 ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿದರ್ೆಶನಾಲಯ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್ಪಿ ತ್ಯಾಗಿ ಸೇರಿದಂತೆ 9 ಆರೋಪಿಗಳ ವಿರುದ್ಧ ಚಾಜರ್್ ಶೀಟ್ ಸಲ್ಲಿಸಿದ್ದು, ಈ ಒಪ್ಪಂದದಿಂದ ಸಕರ್ಾರದ ಖಜಾನೆಗೆ 3,600 ಕೋಟಿ ರೂ ನಷ್ಟವಾಗಿದೆ ಎಂದು ಆರೋಪಿಸಿದೆ. 

ಒಪ್ಪಂದವು ಸಾಕಾರಗೊಳ್ಳಲು ನೆರವಾಗುವ ಕಾರ್ಯಕ್ಕೆ ಅಗಸ್ಟವೆಸ್ಟ್ಲ್ಯಾಂಡ್ ಸಂಸ್ಥೆಯಿಂದ ಕ್ರಿಶ್ಚಿಯನ್ ಮೈಕೆಲ್ ಸುಮಾರು 225 ಕೋಟಿ ರು. ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ.