ಲೋಕದರ್ಶನ ವರದಿ
ಮೂಡಲಗಿ 11: ಸಮಾಜಮುಖಿಯಾಗಲು ದಾನ ಧರ್ಮ ಮಾಡುವುದು ಅವಶ್ಯ. ಕಳೆದ 7 ವರ್ಷಗಳಿಂದ ರಕ್ತದಾನ ಶಿಬಿರವನ್ನು ಏರ್ಪಡಿಸುತ್ತಿರುವ ಕೆ.ಎಚ್.ಸೋನವಾಲ್ಕರ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವಾಗಿದೆ ಎಂದು ನಿರಾಣಿ ಸಮೂಹ ಸಂಸ್ಥೆಯ ಕಾರ್ಯ ನಿವರ್ಾಹಕ ನಿದರ್ೇಶಕ ಸಂಗಮೇಶ ನಿರಾಣಿ ಪ್ರಶಂಶೆ ವ್ಯಕ್ತಪಡಿಸಿದರು.
ಇಲ್ಲಿಯ ಕೆ.ಎಚ್.ಸೋನವಾಲ್ಕರ ಸಕರ್ಾರಿ ಪ್ರೌಢ ಶಾಲೆಯಲ್ಲಿ ದಿ. ಕೃಷ್ಣಪ್ಪ ಸೋನವಾಲ್ಕರ ಅವರ 76ನೇ ಜನ್ಮದಿನಾಚರಣೆ ಅಂಗವಾಗಿ ಸೋಮವಾರದಂದು ಕೆ.ಎಚ್.ಸೋನವಾಲ್ಕರ ಪ್ರತಿಷ್ಠಾನ ಹಾಗೂ ವಿವಿಧ ಸಂಘ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಐಚ್ಛಿಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಅನ್ನದಾನ, ವಿದ್ಯಾದಾನ ಹಾಗೂ ರಕ್ತದಾನ ಶ್ರೇಷ್ಠವಾದ ಕಾರ್ಯಗಳು. ರಕ್ತದಾನದಂತಹ ಶಿಬಿರಗಳು ಗ್ರಾಮೀಣ ಪ್ರದೇಶದಲ್ಲಿಯೂ ನಡೆಯುತ್ತಿರುವುದು ಸಂತಸದ ವಿಷಯವಾಗಿದೆ. ಇತ್ತಿಚಿನ ದಿನಗಳಲ್ಲಿ ಹುಟ್ಟು ಹಬ್ಬಗಳನ್ನು ಕೆಲವೂ ಅಡಂಬರದಿಂದ ಆಚರಿಸಿಕೊಳ್ಳುತ್ತಿದ್ದರೆ ಆದರೆ ಕೆ.ಎಚ್. ಸೋನವಾಲ್ಕರ ಅವರ ಜನ್ಮದಿನದ ನಿಮಿತ್ಯ ಸೋನವಾಲ್ಕರ ಕುಟುಂಬದಿಂದ ಇಂತಹ ಬೃಹತ್ ಐಚ್ಛಿಕ ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಬರುತ್ತಿರುವ ಕಾರ್ಯ ಸಮಾಜಕ್ಕೆ ಮಾದರಿಯಾಗುವುದರ ಜೊತೆಗೆ ಈ ಪ್ರತಿಷ್ಠಾನದ ಸೇವಾ ಮನೋಭಾವವನ್ನು ಎತ್ತಿ ತೋರಿಸುತ್ತದೆ. ನಾನು, ನಮ್ಮವರು ಎನ್ನುವ ಸ್ವಾರ್ಥಕ ಬದುಕನ್ನು ಬಿಟ್ಟು ಜೀವನದಲ್ಲಿ ದಾನ ಧರ್ಮಗಳನ್ನು ಮಾಡಿ ಬದುಕನ್ನು ಪುಣ್ಯದ ಕಾರ್ಯದಲ್ಲಿ ತೊಡಸಿಕೊಳ್ಳಬೇಕು. ಈ ಭಾಗದಲ್ಲಿ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹಾಗೂ ಶಿಕ್ಷಣಪ್ರೇಮಿ ಸಂತೋಷ ಸೋನವಾಲ್ಕರ ಅವರು ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಜೋಡೆತ್ತುಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪ್ರತಿಷ್ಠಾನದ ಅನುಪಮ ಸೇವೆ ಹೀಗೆ ಮುಂದುವರಿಯಲಿ ನಿರಾಣಿ ಸಮೂಹ ಸಂಸ್ಥೆಯೂ ಎಲ್ಲ ರೀತಿಯ ಸಹಾಯ ಹಸ್ತ ನೀಡಲಿದೆ ಎಂದು ಹೇಳಿದರು.
ವೃತ್ತ ನಿರೀಕ್ಷಕ ವೆಂಕಟೇಶ ಮುರನಾಳ ಮಾತನಾಡಿ, ಜೀವ ರಕ್ಷಣೆಗೆ ಕಾರಣವಾಗುವಂತಹ ಮಹತ್ತರ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ಸಾಮಾಜಿಕ ಕಾಳಜಿ ಬೆಳೆಸಿಕೊಳ್ಳಬೇಕು. ಇಂದು ಅನೇಕರು ಸಂಚಾರಿ ನಿಯಮಗಳನ್ನು ಪಾಲಿಸದೇ ಅಪಘಾತಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಬಹಳಷ್ಟು ಇದ್ದು ರಕ್ತದಾನ ಮಾಡುವ ಮೂಲಕ ಜೀವನ್ಮರಣದ ನಡುವೆ ಹೋರಾಡುವವರನ್ನು ಬದುಕಿಸಬಹುದಾಗಿದೆ. ರಕ್ತದಾನದಿಂದ ಆರೋಗ್ಯ ವೃದ್ದಿಯಾಗುತ್ತದೆ ವಿನಃ ತೊಂದರೆಯಾಗುವುದಿಲ್ಲ ರಕ್ತದಾನ ಮಾಡಿ, ಜೀವದಾನ ನೀಡಿ ಎಂದು ಕರೆ ನೀಡಿದರು.
ಗೋಕಾಕ ರೋಟರಿ ರಕ್ತ ಭಂಡಾರದ ಅಧ್ಯಕ್ಷ ಸೋಮಶೇಖರ ಮಗದುಮ್ ಪ್ರಾಸ್ತವಿಕವಾಗಿ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಶಸ್ತ್ರ ಚಿಕಿತ್ಸೆ, ಅಪಘಾತ, ಕ್ಯಾನ್ಸರ್ ಇತ್ಯಾದಿ ಅವಶ್ಯಕ ತುತರ್ು ಸಂದರ್ಭದಲ್ಲಿ ರಕ್ತದ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಕೃತಕವಾಗಿ ರಕ್ತ ಉತ್ಪಾದಿಸಲೂ ಸಾಧ್ಯವಿಲ್ಲ. ರಕ್ತದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ರಕ್ತದಾನದ ಶಿಬಿರವನ್ನು ಹೆಚ್ಚಿಸುವುದರ ಜೊತೆಗೆ ಎಲ್ಲರೂ ರಕ್ತದಾನ ಕಾರ್ಯಕ್ರಮದಲ್ಲಿ ಪಾಲ್ಗೋಂಡು ರಕ್ತದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ಆರೋಗ್ಯ ಸಮಸ್ಯೆಯಾಗುತ್ತದೆ ಎಂಬುವುದು ತಪ್ಪು ಕಲ್ಪನೆಯಾಗಿದೆ. ರಕ್ತದಾನದಿಂದ ಯಾವೂದೇ ಸಮಸ್ಯೆ ಆಗುವುದಿಲ್ಲ. ಆರೋಗ್ಯವಂತ ವ್ಯಕ್ತಿ ವರ್ಷದಲ್ಲಿ 3 ಬಾರಿ ರಕ್ತದಾನ ಮಾಡಬಹುದು ಎಂದು ಹೇಳಿದರು.
ಮೂಡಲಗಿ ಪೋಲಿಸ್ ಠಾಣೆಯ ಪಿಎಸ್ಐ ಮಲ್ಲಿಕಾಜರ್ುನ ಸಿಂಧೂರ ಮಾತನಾಡಿ, ವಿದ್ಯಾಥರ್ಿಗಳೂ ರಕ್ತದಾನ ಮಾಡುವುದರ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದರು. ಪ್ರತಿಷ್ಠಾನದ ಅಧ್ಯಕ್ಷ ಗೋವಿಂದಪ್ಪ ಸೋನವಾಲ್ಕರ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಪುರಸಭೆ ಮುಖ್ಯಾಧಿಕಾರಿ ದೀಪಕ ಹದರ್ಿ, ತಮ್ಮಣ್ಣಪ್ಪಾ ಸೋನವಾಲ್ಕರ, ಲಕ್ಷ್ಮಿಬಾಯಿ ಸೋನವಾಲ್ಕರ, ಡಾ.ಗಿರೀಶ ಸೋನವಾಲ್ಕರ, ಡಾ. ಭಾರತಿ ಖೋಣಿ, ಡಾ. ವೀಣಾ ಕನಕರೆಡ್ಡಿ, ಡಾ. ಆರ್.ಜಿ ಬಸಪೂರ, ಶಂಕರ ತುಕ್ಕನ್ನವರ, ವೆಂಕಣ್ಣ ಗಿಡ್ಡನ್ನವರ, ಸಂತೋಷ ಸೋನವಾಲ್ಕರ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯ ಸೋನವಾಲ್ಕರ, ಎಸ್.ಎನ್ ನಾಡಗೌಡರ್, ಪ್ರೋ. ಎ.ಪಿ.ರೆಡ್ಡಿ, ಶಿವಾನಂದ ಚಂಡಕಿ, ಎಸ್.ಬಿ ನಾಡಗೌಡರ, ಸಿದ್ರಾಮ್ ಲೋಕನ್ನವರ ಉಪಸ್ಥಿತರಿದ್ದರು. ಪುರಸಭೆ ಆರೋಗ್ಯ ನೀರಿಕ್ಷಕ ಚಿದಾನಂದ ಮುಗಳಖೋಡ, ರವೀಂದ್ರ ಸೋನವಾಲ್ಕರ, ನಿಂಗಪ್ಪ ಫಿರೋಜಿ, ಆರ್.ಆರ್. ಪ್ಯಾಟಿಗೌಡರ, ಪ್ರಕಾಶ ಬಾಗೇವಾಡಿ, ಡಾ. ಅನೀಲ ಪಾಟೀಲ, ಡಾ. ಎಸ್.ಎಸ್ ಪಾಟೀಲ್, ಜಿಪಂ ಮಾಜಿ ಸದಸ್ಯ ಭೀಮಶಿ ಮಗದುಮ್ಮ, ಮೂಡಲಗಿ ಪುರಸಭೆ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೆ.ಎಚ್.ಸೋನವಾಲ್ಕರ ಸಕರ್ಾರಿ ಪ್ರೌಢ ಶಾಲೆಯ ಅಭಿವೃದ್ದಿಗಾಗಿ ನಿರಾಣಿ ಸಮೂಹ ಸಂಸ್ಥೆಯ ಕಾರ್ಯ ನಿವರ್ಾಹಕ ನಿದರ್ೇಶಕ ಸಂಗಮೇಶ ನಿರಾಣಿಯವರು 50ಸಾವಿರ ರೂ. ಹಾಗೂ ಡಾ. ವೀಣಾ ಕನಕರೆಡ್ಡಿ ಅವರು ಶಾಲಾ ಕ್ರೀಡಾಪಟುಗಳಿಗೆ 10ಸಾವಿರ ರೂ ಗಳನ್ನು ದೇಣಿಗೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ಕ್ರೀಡಾ ಸಾಧಕರನ್ನು ಹಾಗೂ ನಿವೃತ್ತ ಎಫ್ಡಿಸಿ ಬಿ.ಎ.ಕಮತ ಇವರನ್ನು ಸತ್ಕಾರಿಸಲಾಯಿತು. ಕೆ.ಎಚ್.ಸೋನವಾಲ್ಕರ ಪ್ರತಿಷ್ಠಾನ ಹಾಗೂ ವಿವಿಧ ಸಂಘ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಐಚ್ಛಿಕ ರಕ್ತದಾನ ಶಿಬಿರದಲ್ಲಿ 342 ಯುನಿಟ್ ರಕ್ತವನ್ನು ದಾನಿಗಳಿಂದ ಪಡೆದುಕೊಳ್ಳಲಾಯಿತು.
ಮೂಡಲಗಿಯ ಕೆ.ಎಚ್.ಸೋನವಾಲ್ಕರ ಪ್ರತಿಷ್ಠಾನ, ಕೆ.ಎಚ್.ಸೋನವಾಲ್ಕರ ಸಕರ್ಾರಿ ಪ್ರೌಢ ಶಾಲೆ, ಲಕ್ಷ್ಮೀ ಶಿಕ್ಷಣ ಸಂಸ್ಥೆ, ಸ್ಪೋಟ್ಸರ್್ ಅಸೋಸಿಯೇಷನ್, ಸಮುದಾಯ ಆರೋಗ್ಯ ಕೇಂದ್ರ, ಮೂಡಲಗಿ ಶಿಕ್ಷಣ ಸಂಸ್ಥೆಯ ಯುವ ರೆಡ್ ಕ್ರಾಸ್ ಘಟಕ, ಆರೋಗ್ಯ ಘಟಕ ರಾಷ್ಟ್ರೀಯ ಸೇವಾ ಯೋಜನೆ, ಶ್ರೀಪಾದಬೋಧ ಸ್ವಾಮೀಜಿ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಹಾಗೂ ಗೋಕಾಕದ ರೋಟರಿ ರಕ್ತ ಬಂಢಾರ, ಕರುನಾಡ ಸೈನಿಕ ತರಭೇತಿ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಶಿಬಿರ ಜರುಗಿತು. ಕಾರ್ಯಕ್ರಮವನ್ನು ಶಿಕ್ಷಣ ಸಂಯೋಜಕ ಕರಿಬಸವರಾಜ ನಿರೂಪಿಸಿದರು. ಪ್ರೋ. ಸಂಗಮೇಶ ಗುಜಗೊಂಡ ಸ್ವಾಗತಿಸಿದರು. ನಿವೃತ್ತ ಗ್ರಂಥಪಾಲಕ ಬಿ.ಪಿ ಬಂದಿ ವಂದಿಸಿದರು.