ಲೋಕದರ್ಶನವರದಿ
ಶಿಗ್ಗಾವಿ 12ಃ ಮಾನಸಿಕ ಕಾಯಿಲೆ ಬಾರದಂತೆ ತಡೆಯಲು ಜೀವನದಲ್ಲಿ ಕೆಲವು ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು ಅವುಗಳಲ್ಲಿ ಮುಖ್ಯವಾಗಿ ಯೋಗ, ಸಂಗೀತ, ಆಟಗಳನ್ನು ರೂಢಿಸಿಕೊಂಡು ಒಂಟಿತನ ಬಿಟ್ಟು ಸ್ನೇಹತರು, ಆತ್ಮೀಯತೆಯರ ಜೊತೆ ಬೆರೆತು ದೈಹಿಕತೆಯೊಂದಿಗೆ ಮಾನಸಿಕವಾಗಿ ಸದೃಢವಾಗಿರಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ವಿಜಯಕುಮಾರ ಕನ್ನೂರ ಸಲಹೆ ನೀಡಿದರು.
ಪಟ್ಟಣದ ಜೆ.ಎಮ್.ಎಪ್.ಸಿ. ನ್ಯಾಯಾಲಯದ ಆವರಣದಲ್ಲಿ ಗುರುವಾರ ತಾಲೂಕ ಕಾನೂನೂ ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಆರೋಗ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ, ಮಾನಸಿಕ ಅಸ್ವಸ್ಥರ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು, ಮಾನಸಿಕ ಆರೋಗ್ಯದ ಕ್ಷಿಣತೆಯಿಂದ ಆತ್ಮ ಹತ್ಯೆಗಳು ಹೆಚ್ಚಾಗುತ್ತಿವೆ.
ಮನೋ ಸದೃಡತೆ ಹೊಂದಲು ನಾವು ಇತರರ ಮೇಲೆ ಅವಲಂಬನೆಯಾಗಬಾರದು, ನಮ್ಮಲ್ಲಿರುವ ಭಾವನೆಗಳನ್ನು ಸ್ನೇಹಿತರು, ಆತ್ಮೀಯರೊಂದಿಗೆ ಹಂಚಿಕೊಳ್ಳಬೇಕು, ವಾಸ್ತವತೆಯನ್ನು ಒಪ್ಪಿಕೊಂಡು ಸದೃಡ ಮನಸ್ಸಿನೊಂದಿಗೆ ಸಮಾಜಮುಖಿಯಾಗಿ ಬದುಕಬೇಕು ಎಂದರು.
ಡಾ|| ವಿವೇಕ ಜೈನಕೇರಿ ಉಪನ್ಯಾಸಕರಾಗಿ ಮಾತನಾಡಿ, ಒಂಟಿತನ ವ್ಯಸನಗಳಿಗೆ ಕಾರಣ ವ್ಯಸನ ಅನಾರೋಗ್ಯಕ್ಕೆ ಕಾರಣ ಹಾಗಾಗಿ ಒಂಟಿತನಬಿಟ್ಟು ಸಂಘಜೀವಿಯಾಗಿ ಬದುಕಬೇಕು. ತಂದೆ ತಾಯಿಯರು ಮಕ್ಕಳ ಎಲ್ಲ ಆಸೆಗಳನ್ನು ಪೂರೈಸಿದಾಗ ಮಕ್ಕಳಲ್ಲಿ ಆಸೆ ಮತ್ತು ಗುರಿ ಇಲ್ಲದಂತಾಗುತ್ತದೆ, ಹಾಗಾಗಿ ಮಕ್ಕಳ ಅವಷ್ಯಕತೆ ಮಾತ್ರ ಪೂರೈಸಿ ಮಕ್ಕಳಲ್ಲಿ ಚಲ, ಗುರಿ ರೂಪಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಬಿ.ಲಕ್ಕಣ್ಣವರ ವಹಿಸಿದ್ದರು. ಸಹಾಯಕ ಸಕರ್ಾರಿ ಅಭಿಯೋಜಕರಾದ ಜಿ.ಕೆ. ಕುಡರ್ಿಕೇರಿ, ಹಿರಿಯ ನ್ಯಾಯವಾದಿಗಳಾದ ಎಸ್.ಕೆ.ಅಕ್ಕಿ, ಎಮ್.ಜಿ.ವಿಜಾಪೂರ ಮಾತನಾಡಿದರು.
ಹಿರಿಯ ನ್ಯಾಯವಾದಿಗಳಾದ ಜಿ.ಎಸ್.ಅಂಕಲಕೋಟಿ, ಕೆ.ಎಸ್.ಪಾಟೀಲ, ಎಪ್.ಎಸ್.ಕೋಣನವರ, ಪಿ.ಆಯ್.ಮಾದರ(ಕಲ್ಯಾಣಿ) ಮಹಿಳಾ ನ್ಯಾಯವಾದಿಗಳಾದ ಸಿ.ಎನ್.ಬಡ್ಡಿ, ಕೆ.ಎನ್.ಭಾರತಿ, ವಸಂತಾ ಭಾಗೂರ ನ್ಯಾಯವಾದಿಗಳ ಸಂಘದ ಸದಸ್ಯರು, ನ್ಯಾಯಾಲಯ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಎಮ್.ಆರ್.ಗೋಣೆಪ್ಪನವರ ಸ್ವಾಗತಿಸಿದರು. ಬಿ.ಪಿ.ಗುಂಡಣ್ಣವರ ಕಾರ್ಯಕ್ರಮ ನಿರ್ವಹಿಸಿದರು.