ಕೆಲವು ಮಧ್ಯವರ್ತಿಗಳು ಮೈಕ್ರೋ ಫೈನಾನ್ಸ್‌ ಕೆಲಸಕ್ಕೆ ಅಡ್ಡಿ: ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಮನವಿ

ಹಾವೇರಿ 05: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ಆರ್‌.ಬಿ.ಐ ಮಾರ್ಗದರ್ಶನದಡಿಯಲ್ಲಿ ಕೆಲಸ ಮಾಡುತ್ತಿವೆ, ನಿಜವಾದ ಗ್ರಾಹಕರಿಗೆ ಯಾವುದೇ ರೀತಿ ತೊಂದರೆಯುಂಟಾಗದಂತೆ ಕೋಡ್ ಆಪ್ ಕಂಡಕ್ಟ್‌ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.ಆದರೆ ಕೆಲವು ಮಧ್ಯವರ್ತಿಗಳು ಗ್ರಾಹಕರಲ್ಲಿ ಗೊಂದಲ ಮೂಡಿಸಿ ದಿಕ್ಕುತಪ್ಪಿಸಿ ಮೈಕ್ರೋ ಫೈನಾನ್ಸ್‌ ಕೆಲಸಕ್ಕೆ ಅಡ್ಡಿಪಡಿಸಿತ್ತಿದ್ದಾರೆ.ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲೆಯ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಮುಖ್ಯಸ್ಥರು ಮನವಿ ಮಾಡಿದರು. 

ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳನ್ನು  ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಮುಖ್ಯಸ್ಥರ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ಸಂಸ್ಥೆಗಳು ರಾಷ್ಟ್ರೀಕೃತ ಬ್ಯಾಂಕಗಳಿಂದ ಸೌಲಭ್ಯ ವಂಚಿತ ಬಡಕುಟುಂಬಗಳಿಗೆ ಯಾವುದೇ ಅಡಮಾನ ತೆಗೆದುಕೊಳ್ಳದೆ, ವಿಳಾಸಕೊಸ್ಕರ ಮೇವಲ ಒಂದು ಆಧಾರ್ ಕಾರ್ಡ್‌ ತೆಗೆದು ಕೊಂಡು ಒಂದು ಗುಂಪಿನ ಆಧಾರದ ಮೇಲೆ ಸಾಲ ಮಂಜೂರಾತಿ ಮಾಡುತ್ತಿವೆ. ನಮ್ಮ ಭಾರತ ದೇಶದಲ್ಲಿ ಅತೀ ಹೆಚ್ಚು ಬಡತನ ಎದ್ದು ಕಾಣುತ್ತಿದ್ದು, ಬಡತನ ಕಡಿಮೆ ಮಾಡಿ ಅವರ ಆರ್ಥಿಕ ಪರಿಸ್ಥಿತಿ ಸುಧಾರಣೆಯ ಉದ್ದೇಶ ದಿಂದ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ಗ್ರಾಹಕರ ಮನೆಗೆ ಹೋಗಿ ಅವರ ಆರ್ಥಿಕ ಪರಿಸ್ಥಿತಿಗೆ  ತಕ್ಕಂತೆ ಹೈ ಮಾರ್ಕ್‌ ಪರೀಶೀಲನೆ ಮಾಡಿ ಗ್ರಾಹಕರು ಸಾಲವನ್ನು ತೆಗೆದುಕೊಳ್ಳಲು ಎಷ್ಟು ಅರ್ಹರು? ಎಷ್ಟು ಮೊತ್ತದ ಸಾಲ ನೀಡಬಹುದು ಎಂಬುದನ್ನು ಪರೀಶೀಲಿಸಿ ಗ್ರಾಹಕರಿಗೆ ಹೆಚ್ಚು ಹೊರೆಯಾಗದಂತೆ ಸಾಲವನ್ನು ಅಧಿಕೃತ ವಾಗಿ ಮಂಜೂರು ಮಾಡುತ್ತಿವೆ.  ಆದರೆ ಇದನ್ನೆಲ್ಲಾ ಮಧ್ಯವರ್ತಿಗಳು ಕೆಲ ಆಮಿಷಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿರುವುದರಿಂದ ನೈಜ ಗ್ರಾಹಕರಿಗೆ ತೊಂದರೆಯುಂಟಾಗುತ್ತದೆ.     ನಿಜವಾದ ಗ್ರಾಹಕರು ಈ ಸಾಲದ ಸದುಪಯೋಗಪಡಿಸಿಕೊಂಡು ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿದ ಸಾಕಷ್ಟು ಕುಟುಂಬಗಳಿವೆ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳು ಮಾಡದ ಕೆಲಸವನ್ನು ಮೈಕ್ರೋ ಫೈನಾನ್ಸ್‌ ಸಂಸ್ಥೆ ಗಳು ಮಾಡುತ್ತಿವೆ. ಇದರಿಂದ ಬಡ ಕುಟುಂಬದಿಂದ ಬಂದ ಲಕ್ಷಾಂತರ ನಿರುದ್ಯೋಗಿ ಯುವಕ ಯುವತಿಯರಿಗೆ ಕೆಲಸ ಕೊಟ್ಟು ಸರ್ಕಾರ ಕ್ಕೆ 25ಅ ನಿರುದ್ಯೋಗ ಸಮಸ್ಯೆ ಯನ್ನು ಕಡಿಮೆ ಮಾಡಿದೆ. ಇದನ್ನು  ಮೈಕ್ರೋ ಫೈನಾನ್ಸ್‌ ಸಿಬ್ಬಂದಿಯವರು ಮತ್ತು ಅವರ ಕುಟುಂಬ ದವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. 

ಬಡ ಕುಟುಂಬಗಳ ಆರ್ಥಿಕ ಸುಧಾರಣೆ ಮಾಡುವುದು ಮತ್ತು ನಿರುದ್ಯೋಗ ಸಮಸ್ಯೆ ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಹಾಗಾಗಿ ಜಿಲ್ಲಾಧಿಕಾರಿಗಳು ದಯಮಾಡಿ ಇಂತಹ ಮಧ್ಯವರ್ತಿಗಳು ತೊಂದರೆ ಕೊಡುತ್ತಿರುವುದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. 

 ಈ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ ಮೈಕ್ರೋ ಫೈನಾನ್ಸ್‌ ಗಳನ್ನು ಲೀಡ್ ಮಾಡುವ ನವಚೇತನ ಮೈಕ್ರೋ ಫೈನಾನ್ಸ್‌ ಮುಖ್ಯಸ್ಥರಾದ ಕೊಟ್ರಗೌಡ ಸಿ,ತಿಪ್ಪೇಸ್ವಾಮಿ ಸಿ ನೇತೃತ್ವದಲ್ಲಿ ಎಲ್ಘ್‌ಟಿ ಫೈನಾನ್ಸ್‌ ನ ಗಂಗಾಧರ, ಗ್ರಾಮೀಣ ಕೂಟ ಫೈನಾನ್ಸ್‌ ನ ವಿಶ್ವನಾಥ್, ಚೈತನ್ಯ ಫೈನಾನ್ಸ್‌ ನ ಮುತ್ತಣ್ಣ, ಫ್ಯೂಷನ್ ಫೈನಾನ್ಸ್‌ ನ ಝಾಕೀರ್, ಇಕ್ವಿಟಾಸ್ ನದಾಫ್ ಸೇರಿದಂತೆ ಜಿಲ್ಲೆಯ ಎಲ್ಲಾ ಮೈಕ್ರೋಫೈನಾನ್ಸ್‌ ಗ ಸಿಬ್ಬಂದಿಗಳು ಉಪಸ್ಥಿತರಿದ್ದರು.