ಲೋಕದರ್ಶನ ವರದಿ
ತಲ್ಲೂರ : ಮನುಷ್ಯನಿಗೆ ಆರೋಗ್ಯಕ್ಕೆ ಪರೀಕ್ಷೆ ಎಷ್ಟು ಮುಖ್ಯವೋ ಹಾಗೆಯೆ ಬೆಳೆಗೆ ಮಣ್ಣಿನ ಸಮತೋಲನ ಕಾಯ್ದುಕೊಳಲು ಮಣ್ಣು ಪರೀಕ್ಷೆಯು ಅಷ್ಟೇ ಅವಶಕ ಎಂದು ಗೋಕಾಕ ಮಣ್ಣು ಆರೋಗ್ಯ ಕೇಂದ್ರದ ಶೈಲಜಾ ಬೆಳವಂಕಿಮಠ ಹೇಳಿದ್ದಾರೆ.
ಸಮೀಪದ ಶ್ರೀರಂಗಪುರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ದಿ 5 ರಂದು ಮಣ್ಣು ಆರೋಗ್ಯ ಕೇಂದ್ರ ಗೋಕಾಕ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಭೂಮಿಯಲ್ಲಿ ಒಂದು ಇಂಚು ಮಣ್ಣು ತಯಾರಾಗಲು ಎಂಟು ನೂರರಿಂದ ಒಂದೂ ಸಾವಿರ ವರ್ಷಗಳು ಬೇಕಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಮಣ್ಣಿನ ಸಂವರಕ್ಷಣೆ ಮಾಡಬೇಕು. ಮಣ್ಣು ಉತ್ತಮವಾಗಿದ್ದರೆ ನಾಗರಿಕ ಸಮಾಜದ ಆರೋಗ್ಯವಂತರಾಗಿರುವುದು.ಹಾಗೂ ಮಕ್ಕಳಿಗೆ ಮಣ್ಣಿನ ವಿಧಗಳಲ್ಲಿ ಯಾವುದು ಹೆಚ್ಚು ನೀರು ಹಿಡಿದಿಟ್ಟುಕೊಳ್ಳುವುದು ಎನ್ನುವದನ್ನು ಪ್ರಾಯೋಗಿಕವಾಗಿ ವಿವರಿಸಿದರು.
ರಾಜಸ್ಥಾನದ ಪಿಪ್ಲಾಂತ್ರಿ ಊರಿನ ಪರಿಸರ ಕಾಳಜಿಯನ್ನು ವಿವರಿಸಿದರು.ಬಳಿಕ ಮಣ್ಣು ಪರೀಕ್ಷೆಯ ಸಂಚಾರಿ ವಾಹನದ ಪ್ರಯೋಗಾಲಯವನ್ನು ಮಕ್ಕಳು ವೀಕ್ಷಿಸಿದರು.
ಮುಖ್ಯಗುರು ಬಿ.ಡಿ.ಪಾಟೀಲ, ಜಿ ಏನ್ ಮಲಕಣ್ಣವರ,ಎಸ್.ಎಚ್.ಪಚ್ಚಿನವರ,ವಿ.ಪಿ.ಸೂನೋನೆ,ವಿನೋದ ಪಾಟೀಲ ,ಸೋಮಲಿಂಗ ಸುಣಗಾರ ಹಾಗೂ ಶಿಕ್ಷಕರರು ವಿದ್ಯಾರ್ಥಿಗಳು ಸಿಬ್ಬಂದಿ ಹಾಜರಿದ್ದರು.