ಕಾರವಾರ 03: ಸಾಮಾನ್ಯ ಜೀವನ ನಡೆಸಬಹುದಾದ ಎಚ್ಐವಿ ಏಡ್ಸ್ ರೋಗ ಪೀಡಿತರ ಬಗ್ಗೆ ಸಮಾಜದ ಮನೋಭಾವ ಬದಲಾಗಬೇಕಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಹಾಗೂ ಹಿರಿಯ ನ್ಯಾಯಾಧೀಶ ಟಿ.ಗೋವಿಂದಯ್ಯ ಹೇಳಿದರು.
ಅವರು ಇಲ್ಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾ ಭವನದಲ್ಲಿ ಶನಿವಾರ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಕನರ್ಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ, ಜಿಲ್ಲಾಡಳಿತ,ಜಿ.ಪಂ.,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಛತ್ರಪತಿ ಶಿವಾಜಿ ನಸರ್ಿಂಗ್ ಸ್ಕೂಲ್, ಆಜಾದ್ ಯುತ್ಕ್ಲಬ್,ರೆಡ್ಕ್ರಾಸ್ ಸಂಸ್ಥೆ, ಸಂರಕ್ಷ ಮತ್ತು ಕೂರ್ ಹಾಗೂ ಬದುಕು ಸ್ವಯಂ ಸೇವಾ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಎಚ್ಐವಿ ಏಡ್ಸ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಏಡ್ಸ್ ರೋಗಿಗೆ ಮುಟ್ಟುವುದರಿಂದಾಗಲಿ ಅವರೊಂದಿಗೆ ಮಾತನಾಡುವುದರಿಂದಾಗಲಿ ಅಥವಾ ಜೊತೆಯಲ್ಲಿ ಕುಳಿತು ಊಟ ಮಾಡುವುದರಿಂದ ಸೊಂಕು ತಗಲುವುದಿಲ್ಲ. ಈ ವಿಚಾರದಿಂದ ಜನರು ಹೊರ ಬರಬೇಕು. ಅವರಿಗೂ ಉತ್ತಮ ಜೀವನ ನಡೆಸಲು ಅವಕಾಶ ನೀಡಬೇಕು.ಏಡ್ಸ್ ದಿನಾಚರಣೆ ಕೇವಲ ಡಿ.1 ಕ್ಕೆ ಮಾತ್ರ ಸೀಮಿತಗೊಳಿಸದೇ,ವರ್ಷವೀಡಿ ರೋಗದ ಬಗ್ಗೆ ಜಾಗೃತಿ ಮೂಡಿಸಿ ಸಂಪೂರ್ಣವಾಗಿ ತಡೆಗಟ್ಟಲು ಪ್ರಯತ್ನಿಸಬೇಕು. ಏಡ್ಸ್ ರೋಗ ಪೀಡಿತರು ಕೀಳರಿಮೆಯಿಂದ ಚಿಕಿತ್ಸೆ ಪಡೆಯಲು ಮುಂದಾಗುತ್ತಿಲ್ಲ. ಏಡ್ಸ್ ರೋಗಿ ಎಂದು ಎಲ್ಲಿ ತಮ್ಮನ್ನು ಸಮಾಜದಿಂದ ಬಹಿಷ್ಕರಿಸಿ ಬಿಡುತ್ತಾರೋ? ಎಂಬ ಆತಂಕದಲ್ಲಿಯೇ ಬದುಕುವ ಅಂತಹ ರೋಗಿಗಳಿಗೆ ಧೈರ್ಯ ತುಂಬಿ ಸಾಂತ್ವನ ಹೇಳಬೇಕು. ಮುಖ್ಯವಾಗಿ ಆರೋಗ್ಯ ಕಾರ್ಯಕರ್ತರು, ಪ್ರತಿ ಹಳ್ಳಿಗಳಿಗೆ ಹೋಗಿ ಅನಕ್ಷರಸ್ಥ ಜನರಲ್ಲಿನ ಏಡ್ಸ್ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸಲು ಪ್ರಮುಖ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಕಾರವಾರ ಮೆಡಿಕಲ್ ಕಾಲೇಜಿನ ಏಡ್ಸ್ ನಿಯಂತ್ರಣ ವಿಭಾಗದ ವೈದ್ಯಾಧಿಕಾರಿ ಡಾ.ನವೀನ್ ನವಲೆ ವಿಶೇಷ ಉಪನ್ಯಾಸ ನೀಡಿ, ಜಗತ್ತಿನಲ್ಲಿಯೇ ಸುಮಾರು 4 ಕೋಟಿ ಜನರು ಏಡ್ಸ್ ರೋಗಕ್ಕೆ ತುತ್ತಾಗಿದ್ದಾರೆ. ಆಫ್ರಿಕಾ ಮತ್ತು ದಕ್ಷಿಣ ಈಶಾನ್ಯ ಏಷಿಯಾದಲ್ಲಿ ಎಚ್ಐವಿ1 ಮತ್ತು ಎಚ್ಐವಿ2 ಎರಡು ರೀತಿಯ ರೋಗ ಹೆಚ್ಚಾಗಿ ಕಂಡು ಬಂದಿದೆ. ಈ ರೋಗ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಉತ್ತಮ ಔಷಧೋಪಚಾರದಿಂದ ರೋಗ ಉಲ್ಭಣವಾಗದಂತೆ ಸೂಕ್ತ ಚಿಕಿತ್ಸೆ ಮೂಲಕ ನಿಯಂತ್ರಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಆಪ್ತಸಮಾಲೋಚನಾ ಕೇಂದ್ರಗಳ ಮೂಲಕ ನಿಮ್ಮ ಎಚ್ಐವಿ ಸ್ಥಿತಿಯನ್ನು ತಿಳಿಯಿರಿ ಎಂಬುದು ಪ್ರಸಕ್ತ ವರ್ಷದ ಘೋಷ ವಾಕ್ಯವಾಗಿದೆ ಎಂದರು.
ನ್ಯಾಯವಾದಿ ನಿತೀನ್ ರಾಯ್ಕರ್ ಮಾತನಾಡಿ, ಏಡ್ಸ್ರೋಗಿಗಳ ಸ್ವಾವಲಂಬಿ ಜೀವನ ಹಾಗೂ ಅವರಿಗೆ ಸಾಮಾಜಿಕ ಭದ್ರತೆ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ 2017 ರಲ್ಲಿ ಎಚ್ಐವಿ ಪ್ರಿವೆನ್ಶನ್ ಎಕ್ಟ್ ಜಾರಿಗೆ ತಂದಿತು. ಈ ಕಾಯಿದೆಯ ಭಾಗ-13 ರ ಪ್ರಕಾರ ರೋಗಿಗಳ ತಾರತಮ್ಯ,ಸಾಮಾಜಿಕ ಬಹಿಷ್ಕಾರ,ಉದ್ಯೋಗದಿಂದ ವಜಾ ಮಾಡುವುದು,ಸಾರ್ವಜನಿಕ ಸ್ಥಳ ಪ್ರವೇಶಿಸದಂತೆ ತಡೆ ಒಡ್ಡುವುದು ಮುಂತಾದ ಅಮಾನವೀಯ ವರ್ತನೆ ದಂಡನಾರ್ಹ ಅಪರಾಧವಾಗಿದೆ.ಒಟ್ಟಾರೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಯೋಗದಲ್ಲಿ ರೋಗಿಗಳ ಮಾನವ ಹಕ್ಕು ಕಾಪಾಡಿ, ಸ್ವತಂತ್ರ, ಸ್ವಾವಲಂಬಿ ಬದುಕು ನಡೆಸಲು ಈ ಕಾಯಿದೆಯು ಉತ್ತೇಜನ ನೀಡುತ್ತದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಎನ್.ಅಶೋಕ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಜಿ.ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ,ಕಾರ್ಯಕ್ರಮ ನಿರ್ವಹಿಸಿದರು. ಫಲಾನುಭವಿಗಳಾದ ಸರೋಜಾ ಹಾಗೂ ಜಯಲಕ್ಷ್ಮಿ ಅನಿಸಿಕೆ ಹಂಚಿಕೊಳ್ಳುತ್ತಾ, ಸಮಾಜ,ಕುಟುಂಬವರ್ಗ ಕೈಬಿಟ್ಟಾಗ ಸರಕಾರ ನಮ್ಮನ್ನು ಕೈಹಿಡಿದು ಕಾಪಾಡಿ,ಹೊಸ ಬಾಳು ಕೊಟ್ಟಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಏಡ್ಸ್ ರೋಗಿಗಳಿಗೋಸ್ಕರ ಸೇವೆ ಮುಡಿಪಾಗಿಟ್ಟಿರುವ ಜಿಲ್ಲೆಯ ಮೂರು ಪ್ರಮುಖ ಎನ್ಜಿಓ ಹಾಗೂ ಸಮಾಜಸೇವಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಮಹಾಬಲೇಶ್ವರ ಹೆಗಡೆ,ಡಾ.ರಮೇಶ ರಾವ್,ಡಾ.ಸೂರಜಾ ನಾಯಕ ಸೇರಿದಂತೆ,ಆರೋಗ್ಯ ಇಲಾಖೆಯ ಸಿಬ್ಬಂದಿವರ್ಗ,ಆಶಾ ಕಾರ್ಯತರ್ೆಯರು,ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.