20ರಂದು ಬೆಳಗಾವಿಗೆ ಸಮಾಜವಾದಿ ವಿಚಾರ ಯಾತ್ರೆ: ದಳವಾಯಿ

ಬೆಳಗಾವಿ : ಮಾಹಾತ್ಮಾ ಗಾಂಧೀಜಿ ಅವರ 150ನೇ ಜಯಂತಿ ಅಂಗವಾಗಿ ಸಮಾಜವಾದಿ ಸಮಾಗಮ (ಭಾರತೀಯ ಸಮಾಜವಾದಿ ಆಂದೋಲನ)ದ ವತಿಯಿಂದ ದೇಶದಲ್ಲಿ ಸಮಾಜವಾದಿ ವಿಚಾರ ಯಾತ್ರೆಯನ್ನು ಆಯೋಜಿಸಲಾಗಿದ್ದು, ಯಾತ್ರೆಯು ಫೆ. 20ರಂದು ಬೆಳಗಾವಿ ಮೂಲಕ ಕನರ್ಾಟಕದ ವಿವಿಧ ಭಾಗಗಳಿಗೆ ತೆರಳಲಿದೆ ಎಂದು ಸಮಾಜವಾದಿ ಸಮಾಗಮದ ಸಂಯೋಜಕ ಅರವಿಂದ ದಳವಾಯಿ ಇಂದಿಲ್ಲಿ ಹೇಳಿದರು. 

ಶುಕ್ರವಾರದಂದು ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಭಾರತವನ್ನು ಒಂದುಗೂಡಿಸು, ಸಂವಿಧಾನವನ್ನು ರಕ್ಷಿಸು' ಎಂಬ ಧ್ಯೇಯವಾಕ್ಯದೊಂದಿದೆ ಹೋರಾಟಗಾತರ್ಿ ಮೇಧಾ ಪಾಟ್ಕರ ಸೇರಿದಂತೆ ಹಲವಾರು ಸಮಾಜವಾದಿ ಹಿನ್ನೆಲೆಯ ಹೋರಾಟಗಾರರಾದ ಅರುಣಕುಮಾರ ಶ್ರೀವಾಸ್ತವ, ಬಿ. ಜಿ. ಪಾರೀಖ, ಸುನೀಲಂ, ಗಣೇಶ ದೇವಿ, ಹರಭಜನಸಿಂಹ ಸಿದ್ದು, ಪ್ರೊ. ರಾಜಕುಮಾರ ಜೈನ್, ಪ್ರೊ. ಆನಂದಕುಮಾರ, ಸುಬೋಧಕಾಂತ ಸಹಾಯ ಮೊದಲಾದವರ ಯಾತ್ರೆಯ ನೇತೃತ್ವ ವಹಿಸಿದ್ದಾರೆ ಎಂದು ತಿಳಿಸಿದರು.  

ಕಳೆದ ಜನೆವರಿ 30ರಂದು ದೆಹಲಿಯ ರಾಜಘಾಟಲ್ಲಿರುವ ಮಹಾತ್ಮಾ ಗಾಂಧಿ ಅವರ ಸಮಾಧಿ ಸ್ಥಳದಿಂದ ಯಾತ್ರೆ ಆರಂಭಗೊಂಡಿದೆ. ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಸಂಚರಿಸಿರುವ ಯಾತ್ರೆಯೂ ಫೆ. 19ರಂದು ನೆರೆಯ ಗೋವಾಕ್ಕೆ ಆಗಮಿಸಲಿದೆ. ನಂತರ ಫೆ.20ರಂದು ಬೆಳಗಾವಿ ಮೂಲಕ ರಾಜ್ಯಕ್ಕೆ ಪ್ರವೇಶ ಮಾಡಲಿರುವ ಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುವುದು. ಅಂದು ನಗರದ ಟಿಳಕವಾಡಿಯಲ್ಲಿರುವ ಗಾಂಧಿ ವೀರಸೌಧದಕ್ಕೆ ಭೇಟಿ ನೀಡಿ ಮಹಾತ್ಮಾ ಗಾಂಧೀಜಿಗೆ ಗೌರವ ಸಲ್ಲಿಸುವರು. ನಂತರ ಬೆಳಿಗ್ಗೆ 11.30 ಗಂಟೆಗೆ ನಗರದ ಕುಮಾರ ಗಂಧರ್ವ ರಂಗ ಮಂದಿರಲ್ಲಿ ಮಹಾತ್ಮಾ ಗಾಂಧಿ 150ನೇ ಜಯಂತಿ ಕಾರ್ಯಕ್ರಮ, ರಾಷ್ಟ್ರೀಯ ಭಾವ್ಯಕ್ಯತೆ ಹಾಗೂ ಸಂವಿಧಾನದ ಕುರಿತು ವಿಚಾರ ಸಂಕಿರಣ ಮತ್ತು ಸಮಾವೇಶ ನಡೆಯಲಿದೆ. ಅಲ್ಲದೇ ಈ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಐದು ಜನ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು. 

ಮಧ್ಯಾಹ್ನದ ನಂತರ ಬೆಳಗಾವಿಯಿಂದ ಯಾತ್ರೆಯೂ ಧಾರವಾಡ, ಹುಬ್ಬಳಿಗೆ ಕಡೆಗೆ ಪ್ರಯಾಣ ಬೆಳಸಲಿದ್ದು, ಫೆ.20ರಂದು ಸಾಯಂಕಾಲ ಹುಬ್ಬಳ್ಳಿಯಲ್ಲಿ ವಿಚಾರ ಸಂಕಿರಣ ನಡೆಯಲಿದೆ. ಫೆ.21ರಂದು ಬೆಳಿಗ್ಗೆ ಹಾವೇರಿ, ಸಾಯಂಕಾಲ ದಾವಣಗೆರೆಯಲ್ಲಿ, ಫೆ.22ರಂದು ಬೆಳಿಗ್ಗೆ ಚಿತ್ರದುರ್ಗ, ಸಾಯಂಕಾಲ ತುಮಕೂರನಲ್ಲಿ ಹಾಗೂ ಫೆ.23ರಂದು ಬೆಂಗಳೂರಿನಲ್ಲಿ ವಿಚಾರ ಸಂಕಿರಣ ನಡೆಯಲಿದೆ. ನಂತರ ತಮಿಳುನಾಡಿ ಕಡೆಗೆ ಯಾತ್ರೆಯೂ ಪ್ರಯಾಣ ಬೆಳಸಲಿದೆ ಎಂದು ತಿಳಿಸಿದರು. 

ಈ ವಿಚಾರ ಸಂಕಿರಣದಲ್ಲಿ ಜಿಲ್ಲೆಯ ಚಿಂತಕರು, ನ್ಯಾಯವಾದಿಗಳು, ಪತ್ರಕರ್ತರು, ರೈತ ಹಾಗೂ ದಲಿತ ಸಂಘಟನೆಗಳ ಕಾರ್ಯಕರ್ತರು, ವಿದ್ಯಾಥರ್ಿ ಸಂಘಟನೆಗಳು ಮತ್ತು ಅಲ್ಪಸಂಖ್ಯಾತ ಸಂಘಟನೆಗಳು ಪಾಲ್ಗೊಳ್ಳಲಿವೆ. ಇದೇ ಸಂದರ್ಭದಲ್ಲಿ ಸಿಎಎ, ಎನ್ಆರ್ಸಿ ಮತ್ತು ಎನ್ಆರ್ಪಿ ಕುರಿತಂತೆ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಬೆಳಗಾವಿ ಜಿಲ್ಲೆಯ ನಾಗರಿಕ ಜಾಗೃತಿ ವೇದಿಕೆ ಅಸ್ಥಿತ್ವಕ್ಕೆ ಬಂದಿದ್ದು, ಈ ವೇದಿಕೆ ಮೂಲಕ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಂವಿಧಾನ ವಿರೋಧಿ ಹಾಗೂ ಜನ ವಿರೋಧಿ ಕಾರ್ಯಕ್ರಮಗಳ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

ಇಂದಿನ ಪತ್ರಿಕಾಗೋಷ್ಠಿಯಲ್ಲಿ ವಕೀಲ ಆರ್.ಪಿ. ಪಾಟೀಲ, ಜಿ.ಎಸ್. ಗೋಕಾಕ, ಕಲ್ಯಾಣರಾವ ಮುಚಳಂಬಿ, ಮಲ್ಲೇಶ ಚೌಗುಲೆ, ಸಲೀಂ ಖತೀಬ, ಆಶ್ಫಾಕ್ ಮಡಕಿ, ಗಜು ಧರನಾಯ್ಕ, ಅನ್ನಪೂಣರ್ಾ ನಿವರ್ಾಣಿ, ಜಯಶ್ರೀ ಮಾಳಗೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.