ವಚನದ ಪರ್ಯಾಯ ಪದವೇ ಸಾಮಾಜಿಕ ಚಿಂತನೆ: ವೀರೇಶ ಸ್ವಾಮಿ
Social thought is an alternative to vachana: Veeresh Swamy
ಬಳ್ಳಾರಿ, ಆ.21: ಮಾನವ ಸಮಾಜ ಜೀವಿ. ಸಮಾಜದ ಸಂಪರ್ಕವಿಲ್ಲದೇ ಮಾನವ ಬದುಕಲಾರ. ಸಮಾಜದಿಂದಲೇ ಬದುಕನ್ನು ಕಟ್ಟಿಕೊಂಡ ಮಾನವ ಸಮಾಜಕ್ಕೆ ಋಣಿಯಾಗಿರಬೇಕು. ಈ ತತ್ವವನ್ನು ಮೊಟ್ಟ ಮೊದಲಿಗೆ ಆಚರಿಸಿ ಜಗತ್ತಿಗೆ ತೋರಿಸಿದವರೇ ಶರಣರು. ಶರಣರ ಪ್ರತಿ ಮಾತು ವಚನವಾಗಿದ್ದು, ವಚನಗಳಲ್ಲಿ ಸಂಪೂರ್ಣವಾಗಿ ಸಾಮಾಜಿಕ ಚಿಂತನೆ ಅಡಗಿದೆ ಎಂದು ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎ.ಎಂ.ಪಿ. ವೀರೇಶ ಸ್ವಾಮಿ ನುಡಿದರು.
ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಹಂದಿಹಾಳು ಗ್ರಾಮದ ಶಿವಶರಣ ಮಠದ ಆವರಣದಲ್ಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 318ನೇ ಮಹಾಮನೆ ಗುರು ಹಿರಿಯರ ದತ್ತಿ ಕಾರ್ಯಕ್ರಮದಲ್ಲಿ ಶರಣರ ವಚನಗಳಲ್ಲಿ ಸಾಮಾಜಿಕ ಚಿಂತನೆ ವಿಷಯ ಕುರಿತು ಮಾತನಾಡುತ್ತಾ, ಪ್ರತಿಯೊಬ್ಬ ಶರಣರು ತಮ್ಮ ಸ್ವಂತ ಬದುಕಿನ ಆಲೋಚನೆಗಿಂತ ಸಾಮಾಜಿಕ ಚಿಂತನೆಯನ್ನು ಹೆಚ್ಚಾಗಿ ಮಾಡಿದ್ದಾರೆ ಎಂದರು.
ಶಿವಶರಣ ಮಠದ ಧರ್ಮದರ್ಶಿಗಳಾದ ಹೆಚ್. ಶಿವಪ್ರಸನ್ನ ಕುಮಾರ ಅನುಪಸ್ಥಿತಿಯಲ್ಲಿ ವಿದ್ಯಾರ್ಥಿಗಳು ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು. ಶರಣ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ಸಿದ್ಧರಾಮ ಕಲ್ಮಠರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ವಿಜೇತ ಡಾ. ಕೆ. ಶಿವಲಿಂಗಪ್ಪ ಹಂದಿಹಾಳರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಮುಖ್ಯಗುರುಗಳಾದ ಕವಿತ .ವೈ ಯವರು ಅತಿಥಿಗಳಾಗಿ ಭಾಗವಹಿಸಿದ್ದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಬಿ. ಸಿದ್ಧಲಿಂಗಪ್ಪ ದತ್ತಿಯ ಆಶಯವನ್ನು ಸಭೆಗೆ ತಿಳಿಸಿದರು. ವಿದ್ಯಾರ್ಥಿನಿಯರು ವಚನ ಪ್ರಾರ್ಥನೆ ಮಾಡಿದರು. ಶಿಕ್ಷಕರಾದ ಶಿವಲೀಲಾ ಸ್ವಾಗತ ಕೋರಿದರು. ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಜೋಳದರಾಶಿ ಪಂಪನಗೌಡ, ವನಜ ಶಿಕ್ಷಕಿ ವರ್ಗ ಉಪಸ್ಥಿತರಿದ್ದರು. ಧರ್ಮದರ್ಶಿ ಹೆಚ್.ಪ್ರಸನ್ನ ಕುಮಾರರು ವಿದ್ಯಾರ್ಥಿಗಳಿಗೆ ಜ್ಯಾಮಿತಿ ಪೆಟ್ಟಿಗೆ, ನೋಟ್ ಪುಸ್ತಕಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮ ಮಂಗಲವಾಯಿತು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 