25 ರಂದು ಆಲಮೇಲದಲ್ಲಿ 217 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
217 crore development works to be launched at Alamela on 25th
ಲೋಕದರ್ಶನ ವರದಿ
ಸಿಂದಗಿ 23 : ಆಲಮೇಲ ಪಟ್ಟಣದಕ್ಕೆ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೋಳಿ ಹಾಗೂ ಬೃಹತ್ ಕೈಗಾರಿಕೆ ಸಚಿವ ಡಾ.ಎಂ.ಬಿ.ಪಾಟೀಲ, ಮಾಜಿ ಸಚಿವ ಶಿವಾನಂದ ಪಾಟೀಲ ಅವರು ವಿವಿಧ ಕಾಮಗಾರಿಗಳ ಭೂಮಿ ಪೂಜೆ ನೇರವೇರಿಸಲು ಇದೇ 25 ರಂದು ಸಾಯಂಕಾಲ 4 ಗಂಟೆಗೆ ಆಗಮಿಸಲಿದ್ದಾರೆ. ಕಾರಣ ಪಕ್ಷದ ವಿವಿಧ ವಿಬಾಗಗಳ ಪದಾಧಿಕಾರಿಗಳು, ಮುಖಂಡರು, ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಶಾಸಕ ಅಸೋಕ ಮನಗೂಳಿ ಮನವಿ ಮಾಡಿಕೊಂಡರು. ನಗರದ ಶಾಸಕರ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2019ರಿಂದ ಮಂಜೂರಾದ ರೂ 145 ಕೋಟಿ ಅನುದಾನದಲ್ಲಿ ತೋಟಗಾರಿಕೆ ಕಾಲೇಜಿನ ಕಾಮಗಾರಿ ಭೂಮಿಪೂಜೆ, ರೂ. 44ಕೋಟಿ 50 ಲಕ್ಷ ವೆಚ್ಚದ ಕಡಣಿ ಬ್ರೀಜ್ ಕಾಮಗಾರಿಗೆ ಭೂಮಿಪೂಜೆ, ಕಡಣಿ ರಸ್ತೆಯಿಂದ ವೀರಕ್ತಮಠದವರೆಗಿನ ಸಿಸಿ ರಸ್ತೆ, ಚರಂಡಿ ಕಾಮಗಾರಿಯ ಭೂಮಿಪೂಜೆ, ಆಲಮೇಲ ದಿಂದ ದೇವಣಗಾಂವ ಗ್ರಾಮಕ್ಕೆ ಹೋಗುವ 1.8 ಕಿಮೀ ರೂ 20 ಕೋಟಿ ವೆಚ್ಚದ ರಸ್ತೆ ಲೋಕಾರೆ್ಣ, ರೂ 6ಕೋಟಿ 20 ಲಕ್ಷ ವೆಚ್ಚದ ಕ್ರೀಡಾಂಗಣ ಕಾಮಗಾರಿಯ ಭೂಮಿಪೂಜೆ ನೇರವೇರಿಸಲಿದ್ದಾರೆ.
ಆಲಮೇಲ ನೂತನ ತಾಲೂಕಿಗೆ ರೂ.217 ಕೋಟಿ ಅನುದಾನ ಮಂಜೂರಾಗಿದೆ. ಆದರೆ ಸಂಸದ ರಮೇಶ ಜಿಗಜೀಣಗಿ ಅವರು ಆಲಮೇಲಕ್ಕೆ ತೋಟಗಾರಿಕೆ ಕಾಲೇಜು ಬೇಡ ತಿಡಗುಂದಿಗೆ ಮಂಜೂರು ಮಾಡುವಂತೆ ಸರಕಾರಕ್ಕೆ ಪತ್ರ ಬರೆದಿದ್ದು ಅವರಿಗೆ ಈ ಕ್ಷೇತ್ರದ ಮೇಲೆ ಕಾಳಜಿ ಎಷ್ಟು ಎನ್ನುವುದು ಗೊತ್ತಾಗುತ್ತದೆ. ಒಳಾಂಗಣ ಕ್ರೀಡಾಂಗಣಕ್ಕಾಗಿ ಕೇಂದ್ರ ಸರಕಾರಕ್ಕೆ ಪತ್ರ ರವಾನಿಸಿದ್ದರಿಂದ ರಾಜ್ಯ ಸರಕಾರ ನೀಡಿದ ಜಿಎಸ್‌ಟಿ ಟ್ಯಾಕ್ಸನಿಂದ ರಾಜ್ಯದ ಎಲ್ಲ ಶಾಸಕರಿಗೆ ತಲಾ ರೂ 6 ಕೋಟಿ ಹಣ ಮಂಜೂರಾಗಿವೆ ಅದನ್ನು ನಾನು ಮಾಡಿದ್ದೇನೆ ಎಂದು ಕೇಳಿಕೊಳ್ಳುತ್ತಿರುವುದು 40 ವರ್ಷದ ರಾಜಕಾರಣಕ್ಕೆ ಶೋಭೆ ತರುವಂತದಲ್ಲ ಸಂಸದರಿಗೆ ನೇರವಾಗಿ ಚಾಟಿ ಬಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ಅದ್ಯಕ್ಷ ಕಲ್ಲಪ್ಪ ಬಿಸನಾಳ, ಆಲಮೇಲ ಅದ್ಯಕ್ಷ ಬಸವರಾಜ ಬಾಗೇವಾಡಿ, ಆಲಮೇಲ ಗ್ಯಾರೇಂಟಿ ಸಮೀತಿ ಅಧ್ಯಕ್ಷ ಅಶೋಕ ಕೋಳಾರಿ, ಜಿಲ್ಲಾ ಕೆಡಿಪಿ ಸದಸ್ಯ ನೂರಹ್ಮದ ಅತ್ತಾರ, ಆಲಮೇಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಾದಿಕ ಸುಂಬಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಣಮಂತ ಸುಣಗಾರ, ಸಂದೀಪ ಚೌರ, ಪ್ರವೀಣ ಕಂಠಿಗೊಂಡ, ಪ್ರಭೂ ವಾಲೀಕಾರ, ಭೀಮು ಬಮ್ಮನಳ್ಳಿ, ಜಯಶ್ರೀ ಹದನೂರ, ಸುನಂದಾ ಯಂಪೂರೆ ಸೇರಿದಂತೆ ಅನೇಕರಿದ್ದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 