ಕತೆಗಳಲ್ಲಿ ಸಾಮಾಜಿಕ ಸ್ವಾಸ್ಥ್ಯ, ಜಾನಪದ ಸೊಗಡು ಇರಲಿ: ಸಂಕನಗೌಡರ


ಧಾರವಾಡ 24:  ಗಾದೆ ಮಾತುಗಳನ್ನು ಆಧರಿಸಿದ ಕತೆಗಳು ಸಾಮಾಜಿಕ ಸ್ವಾಸ್ಥ್ಯವನ್ನು, ಜಾನಪದ ಸೊಗಡನ್ನು ಒಳಗೊಂಡಿರಬೇಕು. ಕತೆ ಅಬಾಲ ವೃದ್ಧರಿಗೆ ಮನರಂಜನೆ ನೀಡುವುದರ ಜೊತೆಗೆ ಬೌದ್ಧಿಕ ಬೆಳವಣಿಗೆಗೆ ಕಾರಣವಾಗಬೇಕು ಎಂದು ಡಾ. ವೀಣಾ ಸಂಕನಗೌಡರ ಅಭಿಪ್ರಾಯಪಟ್ಟರು. 

ಅವರು ಕನರ್ಾಟಕ ವಿದ್ಯಾವರ್ಧಕ ಸಂಘದಲ್ಲಿ ದಿ. ಆನಂದ ಚಿಗಟೇರಿ ಅವರ ಸ್ಮರಣೆಯಲ್ಲಿ ನಡೆದ ದತ್ತಿ ಕಾರ್ಯಕ್ರಮದಲ್ಲಿ ಗಾದೆ ಮಾತುಗಳನ್ನಾಧರಿಸಿ ಕತೆ ಹೇಳುವ ಸ್ಪಧರ್ಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 

ಕಥಾ ವಸ್ತುವನ್ನು ಆಯ್ಕೆ ಮಾಡಿಕೊಳ್ಳುವುದು ಹಾಗೂ ಪ್ರಸ್ತುತಪಡಿಸುವ ಶೈಲಿ ಕೇಳುಗರನ್ನು ಆಕಷರ್ಿಸುವ ರೀತಿ ಮುಖ್ಯವಾಗಿರಬೇಕು. ಸ್ವಂತದ ವಿಚಾರಗಳನ್ನು ಸೇರಿಸಿ ಪ್ರಚಲಿತ ವಾಸ್ತವ ಸ್ಥಿತಿಯನ್ನು ನಿರೂಪಿಸುವ ರೀತಿಯಲ್ಲಿ ಕತೆ ಹೇಳುವ ಕಲೆಯನ್ನು ರೂಢಿಸಿಕೊಳ್ಳಬೇಕೆಂದು  ಸಲಹೆ ನೀಡಿದರು. 

ಕತೆ ಹೇಳುವವರಿಗೆ ಗಾದೆ ಮಾತುಗಳನ್ನು ತಾವೇ ಆಯ್ಕೆ ಮಾಡಿಕೊಂಡು ಹೇಳುವಂತಾಗಬೇಕು. ಅಂದರೆ ಗಾದೆ ಮಾತುಗಳು ಪುನರಾವತರ್ಿಯಾಗಿ ಚವರ್ಿತ ಚರ್ವಣವಾಗುವ ಅಪಾಯ ತಪ್ಪುತ್ತದೆ. ಕಲೆಗಳು ವೈವಿಧ್ಯಮಯವಾಗಿ ಮೂಡಿ ಬರುತ್ತವೆ ಎಂದು ಅತಿಥಿಗಳಾಗಿ ಆಗಮಿಸಿದ್ದ ಡಯಟ್ನ ನಿವೃಕತೆ ಹೇಳುವವರಿಗೆ ಗಾದೆ ಮಾತುಗಳನ್ನು ತಾವೇ ಆಯ್ಕೆ ಮಾಡಿಕೊಂಡು ಹೇಳುವಂತಾಗಬೇಕು. ಅಂದರೆ ಗಾದೆ ಮಾತುಗಳು ಪುನರಾವತರ್ಿಯಾಗಿ ಚವರ್ಿತ ಚರ್ವಣವಾಗುವ ಅಪಾಯ ತಪ್ಪುತ್ತದೆ. ಕಲೆಗಳು ವೈವಿಧ್ಯಮಯವಾಗಿ ಮೂಡಿ ಬರುತ್ತವೆ ಎಂದು ಅತಿಥಿಗಳಾಗಿ ಆಗಮಿಸಿದ್ದ ಡಯಟ್ನ ನಿವೃತ್ತ ಉಪನ್ಯಾಸಕ ಪ್ರೊ. ರಾಮಚಂದ್ರ ಪಾಟೀಲ ಹೇಳಿದರು. 

ದತ್ತಿ ದಾನಿಗಳು ಪರವಾಗಿ ಮಾತನಾಡಿದ ದಿ. ಆನಂದ ಚಿಗಟೇರಿ ಅವರ ಹಿರಿಯ ಸಹೋದರಿ ಡಾ. ವಿ. ಶಾರದಾ ಅವರು ನನ್ನ ತಮ್ಮ ಆನಂದ ಅಪರೂಪದ ಹಾಗೂ ವಿಶಿಷ್ಟ ವ್ಯಕ್ತಿಯಾಗಿದ್ದರು. ತಂದೆ-ತಾಯಿಗಳಿಂದ ಉತ್ತಮ ಸಂಸ್ಕಾರ ಪಡೆದ ಅವರು ಗುರುಭಕ್ತನಾಗಿ ಜೊತೆಗೆ ಶಿಷ್ಯವತ್ಸಲನಾಗುವ ಮೂಲಕ ಜನಾನುರಾಗಿ ಆಗಿದ್ದರು. ಅಕಾಲ ಮರಣಕ್ಕೆ ತುತ್ತಾದ ಆನಂದನ ಸ್ಮರಣೆ ನಿರಂತರವಾಗಿರಲಿ ಎಂಬ ಉದ್ದೇಶದಿಂದ ದತ್ತಿ ಇರಿಸಿದ್ದೇವೆ ಎಂದು ಹೇಳಿದರು. 

ಮಹಾನಗರದ ಬೇರೆ ಬೇರೆ ಭಾಗಗಳಿಂದ ಬಂದ 30 ಕ್ಕೂ ಹೆಚ್ಚು ಮಹಿಳಾ ಮಂಡಳಗಳ ಸದಸ್ಯರು "ಕಾಯಕವೇ ಕೈಲಾಸ' ಮತ್ತು 'ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂಬ ಎರಡು ಗಾದೆ ಮಾತುಗಳನ್ನು ಆಧರಿಸಿದ ಕತೆ ಹೇಳುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವುಗಳಲ್ಲಿ ರಾಧಾಕೃಷ್ಣ ಮಹಿಳಾ ಮಂಡಳದ ರೋಹಿಣಿ ಎಸ್. ರಾವ್ ಪ್ರಥಮ ಸ್ಥಾನ, ಯೋಗ ಮಿತ್ರ ಮಹಿಳಾ ಮಂಡಳದ ಸರಸ್ವತಿ ಭೋಸಲೆ ದ್ವಿತೀಯ ಸ್ಥಾನ ಹಾಗೂ ಬ್ರಹ್ಮಚೈತನ್ಯ ಮಹಿಳಾ ಮಂಡಳದ ಸಂಧ್ಯಾ  ದೀಕ್ಷಿತ ತೃತೀಯ ಸ್ಥಾನ ಪಡೆದರು. ಶಾರದಾ ಭಜನಾ ಮಂಡಳದ ಶ್ರೀದೇವಿ ದೇಶಪಾಂಡೆ, ಕದಳಿ ಮಹಿಳಾ ವೇದಿಕೆಯ ಜಯಶೀಲಾ ಹಿರೇಮಠ ಹಾಗೂ ಸ್ನೇಹ ಬಳಗದ ಸುಜಾತಾ ಹಾನಗಲ್ ಸಮಾಧಾನಕರ ಬಹುಮಾನ ಹಂಚಿಕೊಂಡರು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಯಿತು. 

ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿದರು. ಕೋಶಾಧ್ಯಕ್ಷ ಕೃಷ್ಣ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ನಿಂಗಣ್ಣ ಕುಂಟಿ(ಇಟಗಿ) ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.