ಬೆಂಗಳೂರಿನಲ್ಲಿ ಸ್ಮಿತ್ ಶತಕ ಸಂಭ್ರಮ

ಬೆಂಗಳೂರು, ಜ.19 :   ಆಸ್ಟ್ರೇಲಿಯಾ ತಂಡದ ಭರವಸೆಯ ಆಟಗಾರ ಹಾಗೂ ವಿಶ್ವದ ಮಾಜಿ ನಂಬರ್ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್ ಬೆಂಗಳೂರಿನ ಎಂ.ಚಿನ್ನಸ್ವಾಮಿ ಅಂಗಳದಲ್ಲಿ ಅಭಿಮಾನಿಗಳಿಗೆ ಹಬ್ಬದೂಟ ಉಣ ಬಡಿಸಿದ್ದಾರೆ.

ಆಸೀಸ್ ಮೊದಲು ಬ್ಯಾಟಿಂಗ್ ಮಾಡಿತು. ತಂಡದ ಭರವಸೆಯ ಆಟಗಾರ ಸ್ಮಿತ್ ತಂಡಕ್ಕೆ ಸಂಕಷ್ಟದಲ್ಲಿ ನೆರವಾದರು. ಮಧ್ಯಮ ಕ್ರಮಾಂಕದಲ್ಲಿ ಮನರ್ಾಸ್ ಲಾಬುಶೇನ್ ಅವರೊಂದಿಗೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದ ಸ್ಮಿತ್, ಆಸೀಸ್ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. 

ಬ್ಯಾಟಿಂಗ್ ಸ್ವರ್ಗ ಎಂದೇ ಕರೆಯಲ್ಪಡುವ ಚಿನ್ನಸ್ವಾಮಿಯಲ್ಲಿ ಸ್ಮಿತ್, ಅಬ್ಬರಿಸಿದರು. ರಾಜ್ ಕೋಟ್ ನಲ್ಲಿ ಕೈಗೂಡದ ಆಸೆಯನ್ನು ಬೆಂಗಳೂರಿನಲ್ಲಿ ಈಡೇರಿಸಿಕೊಂಡರು. ಟೀಮ್ ಇಂಡಿಯಾದ ಯುವ ಹಾಗೂ ಅನುಭವಿ ಬೌಲರ್ ಗಳನ್ನು ಕೆಚ್ಚೆದೆಯಿಂದ ಎದುರಿಸಿದ ಸ್ಮಿತ್, ತಮ್ಮ ವೃತ್ತಿ ಜೀವನದಲ್ಲಿ 27ನೇ ಬಾರಿ ಮೂರಂಕಿ ಮುಟ್ಟಿ ಸಂಭ್ರಮಿಸಿದರು   

ಸ್ಟೀವನ್ ಸ್ಮಿತ್ 132 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ನೆರವಿನಿಂದ 131 ರನ್ ಬಾರಿಸಿ ತಂಡಕ್ಕೆ ನೆರವಾದರು.