ಸಿಡ್ನಿ ಸಿಕ್ಸರ್ಸ್ ಪರ ಬಿಬಿಎಲ್ ಆಡಲಿರುವ ಸ್ಮಿತ್, ಹೇಜಲ್ ವುಡ್

ಮೆಲ್ಬೋರ್ನ್, ಜ 17 :         ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರರಾದ ಸ್ಟೀವನ್ ಸ್ಮಿತ್ ಹಾಗೂ ವೇಗಿ ಜೋಶ್ ಹೇಜಲ್ ವುಡ್ ಅವರು ಪ್ರಸ್ತುತ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಸಿಡ್ನಿ ಸಿಕ್ಸರ್ಸ್ ತಂಡದ ಪರ ಮುಂದಿನ ವಾರದ ಪಂದ್ಯಗಳಿಗೆ ಕಣಕ್ಕೆ ಇಳಿಯುತ್ತಿದ್ದಾರೆ. ಇದರೊಂದಿಗೆ ಸಿಡ್ನಿ ಸಿಕ್ಸರ್ಸ್ ತಂಡಕ್ಕೆ ಇನ್ನಷ್ಟು ಬಲ ಬಂದಾಗುತ್ತದೆ.ಟೂರ್ನಿಯ ಅಂಕಪಟ್ಟಿಯಲ್ಲಿ ಸಿಡ್ನಿ ಸಿಕ್ಸರ್ಸ್ ಎರಡನೇ ಸ್ಥಾನದಲ್ಲಿದೆ. ಶನಿವಾರ ಸಿಡ್ನಿ ಥಂಡರ್ಸ್ ತಂಡದ ವಿರುದ್ಧದ ಪಂದ್ಯಕ್ಕೆ ಹಿರಿಯ ಸ್ಪಿನ್ನರ್ ನಥಾನ್ ಲಿಯಾನ್  ಅವರು ಸಿಡ್ನಿ ಸಿಕ್ಸರ್ಸ್ ತಂಡಕ್ಕೆ ಲಭ್ಯರಾಗಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ವೆಬ್ ಸೈಟ್ ತಿಳಿಸಿದೆ.

ಸ್ಟೀವನ್ ಸ್ಮಿತ್ ಹಾಗೂ ಜೋಶ್ ಹೇಜಲ್ ವುಡ್ ಕೂಡ 23 ರಂದು ಬ್ರಿಸ್ಬೇನ್ ಹೀಟ್ ವಿರುದ್ಧ ಕಣಕ್ಕೆ ಇಳಿಯಬಹುದು. ಈ ಇಬ್ಬರೂ ಆಟಗಾರರು ಪ್ರಸ್ತುತ ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿದ್ದಾರೆ.ನ್ಯೂ ಸೌಥ್ ವೇಲ್ಸ್ ಬ್ಯಾಟ್ಸ್ ಮನ್ ಸ್ಮಿತ್ ನಾಯಕತ್ವದ ಸಿಡ್ನಿ ಸಿಕ್ಸರ್ಸ್ ತಂಡ ಬಿಬಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಆಗಿತ್ತು. ಆದರೆ, ಕಳೆದ ಆರು ವರ್ಷಗಳಿಂದ ಅವರು ಈ ಟೂರ್ನಿಯಲ್ಲಿ ಆಡಿರಲಿಲ್ಲ. ಪ್ರಸ್ತುತ ಆವೃತ್ತಿಯಲ್ಲಿ ಜೋಶ್ ಹೇಜಲ್ ವುಡ್ ಎರಡು ಪಂದ್ಯಗಳಲ್ಲಿ ಆಡಿದ್ದಾರೆ.ಇವರಿಬ್ಬರ ಜ.23ರ ಬ್ರಿಸ್ಬೇನ್ ಹೀಟ್ ವಿರುದ್ಧದ ಪಂದ್ಯಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಒಪ್ಪಿಗೆ ಸೂಚಿಸುವ ಅಗತ್ಯವಿದೆ.