ತಹಶೀಲ್ದಾರರಿಂದ ಸ್ಮಾರ್ಟ್ ಕ್ಲಾಸ್ ದೇಣಿಗೆ

ಲೋಕದರ್ಶನವರದಿ

ಶಿಗ್ಗಾವಿ : ಇಂದಿನ ತಂತ್ರಜ್ಞಾನದ ಯುಗದೊಂದಿಗೆ ವಿದ್ಯಾಥರ್ಿಗಳು ಹೆಜ್ಜೆ ಹಾಕುವ ಅವಶ್ಯಕತೆಯಿದೆ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೋರ ತರುವ ಉದ್ದೇಶದಿಂದ ಈ ಸಕರ್ಾರಿ ಶಾಲೆಗೆ ನಾನು ಒಂದು ಸ್ಮಾಟರ್್ಕ್ಲಾಸ್ ದೇಣಿಗೆಯಾಗಿ ನೀಡುವದಾಗಿ ಶಿಗ್ಗಾವಿ ತಹಶೀಲ್ದಾರ್ ಚಂದ್ರಶೇಖರ ಗಾಳಿ ಹೇಳಿದರು.

     ತಾಲೂಕಿನ ಇಬ್ರಾಹಿಂಪುರ ಸಕರ್ಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಸಮೂಹ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ಅವರು ಸಾಧಕರು, ಸಾಹಿತಿಗಳು ಹಾಗೂ ಮಹಾತ್ಮರು ಹೆಚ್ಚಾಗಿ ಗ್ರಾಮೀಣ ಪ್ರದೇಶದಿಂದಲೇ ಬಂದವರಾಗಿದ್ದಾರೆ. ಹಾಗಾಗಿ ಗ್ರಾಮಿಣ ಪ್ರದೇಶದ ಪ್ರತಿಭೆಗಳನ್ನು  ಇಂದು ನಾವು ನೀವೆಲ್ಲ ಪ್ರೋತ್ಸಾಹಿಸುವ ಅವಶ್ಯಕತೆಯಿದೆ ಎಂದು ಹೇಳಿದರು.

     ಪ್ರತಿ ಮಕ್ಕಳಲ್ಲಿ ಒಂದಿಲ್ಲೋಂದು ಪ್ರತಿಭೆ ಅಡಗಿರುತ್ತದೆ.  ಅದನ್ನು ನಾವು ಗುರುತಿಸಿ ಸೂಕ್ತ ಅವಕಾಶ ಕಲ್ಪಿಸಿ ಪ್ರೋತ್ಸಾಹಿಸಿದಾಗ ಅಂತಹ ಪ್ರತಿಭೆಗಳು ಅನಾವರಣಗೊಳ್ಳಲು ಸಾಧ್ಯವಿದೆ ಎಂದು ಹೇಳಿದರು.

     ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಅಂದಾನೆಪ್ಪ ವಡಗೇರಿ ಮಾತನಾಡಿ, ಮಕ್ಕಳ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳಲ್ಲಿ  ಭಾಗವಹಿಸುವುದು ಮುಖ್ಯವಾಗಿದೆ. ಪ್ರತಿಯೋಬ್ಬರಿಗೂ ಆರೋಗ್ಯ ಸಂಪತ್ತು ಅಮೂಲ್ಯವಾಗಿದ್ದು, ಭವಿಷ್ಯ ರೂಪಿಕೊಳ್ಳುವ ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಹೇಳಿದರು.

      ಕಾರ್ಯಕ್ರಮದಲ್ಲಿ ನಿವೃತ್ತ ಬಿಇಒ ಶಿವಾನಂದ ಹೆಳವರ, ದೈಹಿಕ ಶಿಕ್ಷಣಾಧಿಕಾರಿ ಬಿ.ಎಸ್.ಪಟ್ಟಣಶೆಟ್ಟರ, ನಾರಾಯಪುರ ಸಮೂಹ ಸಂಪನ್ಮೂಲ ವ್ಯಕ್ತಿ ವೈ.ಎಚ್.ಮೆಕಳಿ, ಚಕ್ರ ಎಸೆತದಲ್ಲಿ  ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ವಿದ್ಯಾಥರ್ಿನಿ ಸೃಷ್ಠಿ ಕಲಿವಾಳರವರನ್ನು ಸನ್ಮಾನಿಸಿ ಗೌರವಿಸಲಾಯಿತು.

     ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಐ.ಬೆನಕೊಪ್ಪ ಮಾತನಾಡಿದರು.  ತಾಲೂಕಾ ಪಂಚಾಯ್ತಿ ಇಒ ಪ್ರಶಾಂತ ತುರಕಾಣಿ, ಹಾಲಗಲ್ಲ ತಾಲೂಕಾ ಪಂಚಾಯ್ತಿ ಇಒ ಚನ್ನಪ್ಪ ಕುರಗೋಡಿ, ತಾಲೂಕಾ ಪಂಚಾಯ್ತಿ ಸದಸ್ಯ ಯಲ್ಲಪ್ಪ ನರಗುಂದ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಶಿಧರ ಹೊನ್ನಣ್ಣವರ, ಶಿಗ್ಗಾವಿ ಹೆಸ್ಕಾಂ ಅಧಿಕಾರಿ ವನಿತಾ, ಆರೋಗ್ಯ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಕನ್ನಕನವರ, ಅಶೋಕ ಅಮಾತನವರ, ಉಪತಹಶೀಲ್ದಾರ್ ಬಸವರಾಜ ಹೊಕ್ಕಳೆಪ್ಪನವರ, ನಾರಾಯಣಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ  ಗಂಗಾಧರ ಭಾವಿಕಟ್ಟಿ, ಉಪಾಧ್ಯಕ್ಷೆ ಫಾತಿಮಾ ಮುಲ್ಲಾ, ಸದಸ್ಯ ಸಹದೇವಪ್ಪ ಹೊನ್ನಣ್ಣವರ, ಪಿಡಿಒ ಗಾಣಿಗೇರ, ಎಸ್ಡಿಎಂಸಿ ಅಧ್ಯಕ್ಷ ಶಿವನಾಗಪ್ಪ ಲಕ್ಷ್ಮೇಶ್ವರ, ಸಕರ್ಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎನ್.ಮುಗಳಿ,  ಸಿ.ಎನ್.ಕಲಕೋಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.