ನಿಧಾನಗತಿಯ ಬೌಲಿಂಗ್ ಭಾರತಕ್ಕೆ ದಂಡ

ನವದೆಹಲಿ, ಫೆ.3 :     ನ್ಯೂಜಿಲೆಂಡ್ ವಿರುದ್ಧದ ಐದನೇ ಟಿ-20 ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಪರಿಣಾಮ ದಂಡನೆಗೆ ಒಳಗಾಗಿದೆ.

ಕೊನೆಯ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ನಿಧಾನಗತಿಯ ಬೌಲಿಂಗ್ ಮಾಡಿದ್ದರಿಂದ ಪಂದ್ಯದ ಸಂಭಾವನೆಯ ಪ್ರತಿಷತ 20 ರಷ್ಟು ದಂಡ ತುಂಬ ಬೇಕಾಗಿದೆ. ಐಸಿಸಿ 2.22 ನಿಯಮದಂತೆ ಟೀಮ್ ಇಂಡಿಯಾ ಆಟಗಾರರ ಮೇಲೆ ಐಸಿಸಿ ಶಿಕ್ಷೆ ವಿಧಿಸಿದೆ. ಆಟಗಾರರು, ಸಹಾಯಕ ಸಿಬ್ಬಂದಿ, ಕೋಚ್ ಗಳ ಸಂಭಾವನೆಗೂ ಕತ್ತರಿ  ಬಿದ್ದಿದೆ.