ನಿಧಾನಗತಿಯ ಬೌಲಿಂಗ್: ಭಾರತ ತಂಡಕ್ಕೆೆ ಶೇ. 40ರಷ್ಟು ದಂಡ

team india

ದುಬೈ, ಫೆ 1-ವೆಲ್ಲಿಂಗ್ಟನ್‌ನಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಟಿ-20 ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ ಹಿನ್ನೆೆಲೆಯಲ್ಲಿ ಭಾರತ ತಂಡಕ್ಕೆೆ ಪಂದ್ಯದ ಸಂಭಾವನೆ ಶೇ. 40ರಷ್ಟು ದಂಡ ವಿಧಿಸಲಾಗಿದೆ.

ನ್ಯೂಜಿಲೆಂಡ್ ಇನಿಂಗ್ಸ್‌‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಎರಡು ಓವರ್ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿತ್ತು. ಈ ಹಿನ್ನೆೆಲೆಯಲ್ಲಿ ಐಸಿಸಿ ಎಲೈಟ್ ಪ್ಯಾನೆಲ್ ಮ್ಯಾಾಚ್ ರೆಫರಿ ಕ್ರಿಸ್ ಬ್ರಾಡ್ ಅವರು ತಂಡಕ್ಕೆೆ ದಂಡ ವಿಧಿಸಿದೆ. 

ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಯ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದೆ. ಆಟಗಾರರು ತಮ್ಮ ಪ್ರತಿ ಪಂದ್ಯದ ಶುಲ್ಕದ ಶೇಕಡಾ 20 ರಷ್ಟು ದಂಡವನ್ನು ನಿಗದಿಪಡಿಸಲಾಗಿದೆ.

ನಿಧಾನಗತಿಯ ಓವರ್ ರೇಟಿಂಗ್ ಬಗ್ಗೆೆ  ಆನ್‌ಫೀಲ್‌ಡ್‌ ತೀರ್ಪುಗಾರರಾದ ಕ್ರಿಸ್ ಬ್ರೌನ್ ಹಾಗೂ ಶಾನ್ ಹೈಗ್ ಹಾಗೂ ಮೂರನೇ ಅಂಪೈರ್ ಆ್ಯಶ್ಲೆೆ ಮೆಹ್ರೋತ್ರಾ ಅವರು  ದೂರು ನೀಡಿದ್ದರು. ನಿಧಾನಗತಿಯ ಓವರ್‌ಗಳಿಂದಾಗಿ ಐಸಿಸಿ ವಿಧಿಸಿದ ದಂಡವನ್ನು ನಾಯಕ ವಿರಾಟ್ ಕೊಹ್ಲಿ ಸ್ವೀಕರಿಸಿದ್ದಾರೆ. ಹಾಗಾಗಿ, ವಿಚಾರಣೆ ಅಗತ್ಯವಿಲ್ಲ. 

ಪಂದ್ಯ ನಿಗದಿತ ಓವರ್‌ಗಳಲ್ಲಿ ಟೈ ಆಗಿದ್ದರಿಂದ  ಸೂಪರ್ ಓವರ್‌ಗೆ ಮೊರೆ ಹೋಗಲಾಗಿತ್ತು. ಸೂಪರ್ ಓವರ್‌ನಲ್ಲಿ ನ್ಯೂಜಿಲೆಂಡ್ ಭಾರತಕ್ಕೆೆ 14 ರನ್ ಗುರಿ ನೀಡಿತ್ತು. ಗುರಿ ಹಿಂಬಾಲಿಸಿದ ಭಾರತ ಕೇವಲ ಐದು ಎಸೆತಗಳಲ್ಲಿ ಗುರಿ ಮುಟ್ಟಿತ್ತು. ಪಂದ್ಯದ ಗೆಲುವಿನೊಂದಿಗೆ ಭಾರತ ಐದು ಪಂದ್ಯಗಳ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದೆ.  ಐದನೇ ಹಾಗೂ ಅಂತಿಮ ಪಂದ್ಯ ನಾಳೆ ಮೌಂಟ್ ಮೌಂಗ್ನನುಯಿಯಲ್ಲಿ ಜರುಗಲಿದೆ.