ನಿಧಾನಗತಿಯ ಬೌಲಿಂಗ್, ಭಾರತಕ್ಕೆ ದಂಡ

ಹ್ಯಾಮಿಲ್ಟನ್, ಫೆ.5 : ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ದಾಳಿ ನಡೆಸಿ ದಂಡನೆಗೆ ಒಳಗಾಗಿದೆ. ಪರಿಣಾಮ ಪಂದ್ಯದ ಸಂಭಾವನೆಯ ಪ್ರತಿಷತ 80 ರಷ್ಟು ದಂಡ ರೂಪದಲ್ಲಿ ಕಟ್ಟಬೇಕಿದೆ. ಮೊದಲ ಪಂದ್ಯದಲ್ಲಿ ಭಾರತ ಒಟ್ಟು 24 ವೈಡ್ ಬೌಲಗಳನ್ನು ಮಾಡಿದ್ದೇ ಇದಕ್ಕೆ ಕಾರಣವಾಗಿದೆ.  

ಸತತ ಮೂರನೇ ಬಾರಿಗೆ ಟೀಮ್ ಇಂಡಿಯಾದ ಮೇಲೆ ನಿಧಾನಗತಿಯ ಬೌಲಿಂಗ್ ದಂಡ ವಿಧಿಸಲಾಗುತ್ತಿದೆ. ಹ್ಯಾಮಿಲ್ಟನ್ ನಲ್ಲಿ ನಡೆದಿದ್ದ ನಾಲ್ಕನೇ ಟಿ-20 ಪಂದ್ಯದಲ್ಲೂ ವಿರಾಟ್ ಪಡೆ ಇದೇ ತಪ್ಪು ಮಾಡಿ, ಶೆಕಡಾ 40 ರಷ್ಟು ದಂಡ ವಿಧಿಸಿತ್ತು. ಇನ್ನು ಐದನೇ ಟಿ-20 ಪಂದ್ಯದಲ್ಲೂ ಇದೇ ತಪ್ಪು ಪುನರಾವರ್ತನೆ ಆಗಿದೆ. 

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ಅವರು ನಾಲ್ಕು ಓವರ್ ಕಡಿಮೆ ಮಾಡಿದಕ್ಕೆ ದಂಡ ವಿಧಿಸಿದ್ದಾರೆ. ಐಸಿಸಿ 2.22ರ ಅನುಸಾರ ದಂಡ ವಿಧಿಸಲಾಗಿದೆ. 

ಭಾರತ ನಿಧಾನಗತಿಯ ಬೌಲಿಂಗ್ ಮಾಡಲು 24 ವೈಡ್ ಮಾಡಿದ್ದು ದೊಡ್ಡ ಕಾರಣವಾಗಿದೆ. ಇದನ್ನು ನೋಡಿದಾಗ ವಿರಾಟ್ ಪಡೆ ನಾಲ್ಕು ಓವರ್ ಹೆಚ್ಚುವರಿಯಾಗಿ ಮಾಡಿದೆ. ಇದೇ ದಂಡನೆಗೆ ಗುರಿಯಾಗುವಂತೆ ಮಾಡಿದೆ.