ಚೀನಾದಲ್ಲಿ ಆರು ಹೊಸ ಕೊರೊನಾ ಸೋಂಕು ಪ್ರಕರಣ

ಬೀಜಿಂಗ್, ಜೂನ್ 7 ,ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ ಆರು ಹೊಸ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು ಯಾವುದೇ ಸಾವಿನ ಪ್ರಕರಣಗಳು ವರದಿಯಾಗಿಲ್ಲ ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.ಆರು ಪ್ರಕರಣಗಳ ಪೈಕಿ ಐವರು ಇತರ ರಾಷ್ರಗಳಿಗೆ ಭೇಟಿ ನೀಡಿದವರಾಗಿದ್ದಾರೆ. ಕಳೆದೊಂದು ದಿನದಲ್ಲಿ ಮೂವರು ಗುಣಮುಖರಾಗಿದ್ದಾರೆ.  ಪ್ರಸ್ತುತ ಚೀನಾದಲ್ಲಿ ಒಟ್ಟು 83,036 ಕೊರೊನಾ ಸೋಂಕು ಪ್ರಕರಣಗಳಿದ್ದು 1,776 ಜನರು ಇತರ ದೇಶಗಳಿಗೆ ಭೇಟಿ ನೀಡಿದವರಾಗಿದ್ದಾರೆ. ಒಟ್ಟು 78,332 ಜನರು ಗುಣಮುಖರಾಗಿದ್ದು ಮೃತರ ಸಂಖ್ಯೆ 4,634 ರಷ್ಟಿದೆ.ಹಾಂಕಾಂಗ್ ನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1105 ರಷ್ಟಿದ್ದು ನಾಲ್ವರು ಮೃತಪಟ್ಟಿದ್ದು 1048 ಜನರು ಗುಣಮುಖರಾಗಿ ಮನೆಗೆ ವಾಪಸ್ಸಾಗಿದ್ದಾರೆ. ಮಕಾವೋದಲ್ಲಿ 45 ಜನರಲ್ಲಿ ಸೋಂಕು ಪತ್ತೆಯಾಗಿದ್ದು ಇದೀಗ ಎಲ್ಲರೂ ಚೇತರಿಸಿಕೊಂಡಿದ್ದಾರೆ. ತೈವಾನ ನಲ್ಲಿ 443 ಜನರಲ್ಲಿ ಸೋಂಕು ದೃಢಪಟ್ಟಿದ್ದು ಏಳು ಜನರು ಮೃತಪಟ್ಟಿದ್ದಾರೆ. ಇತರ 429 ಜನರು ಗುಣಮುಖರಾಗಿದ್ದಾರೆ.