ಫ್ರೆಂಚ್ ಓಪನ್: ಕ್ವಾರ್ಟರ್ ಫೈನಲ್ನಲ್ಲಿ ಎಡವಿದ ಸಿಂಧು

ಪ್ಯಾರಿಸ್, ಅ 26:       ವಿಶ್ವ ಚಾಂಪಿಯನ್ ಭಾರತದ ಪಿ.ವಿ ಸಿಂಧು ಅವರು ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋತು ನಿರ್ಗಮಿಸಿದ್ದಾರೆ. ವಿಶ್ವದ ಆರನೇ ಶ್ರೇಯಾಂಕಿತೆ ಪಿ.ವಿ ಸಿಂಧು ಅವರು ಶುಕ್ರವಾರ ತಡರಾತ್ರಿ ನಡೆದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಕಠಿಣ ಹೋರಾಟದ ಹೊರತಾಗಿಯೂ ಚೈನೀಸ್ ತೈಫೆಯ ಅಗ್ರ ಶ್ರೇಯಾಂಕಿತೆ ತಾಯ್ ಟಿಜು ಯಿಂಗ್ ವಿರುದ್ಧ 16-21, 26-24, 17-21 ಅಂತರದಲ್ಲಿ ಸೋಲು ಅನುಭವಿಸಿದರು. ಆ ಮೂಲಕ ಒಂದು ಗಂಟೆ 15 ನಿಮಿಷಗಳ ಕಾಲದ ಪಂದ್ಯವನ್ನು ಬಿಟ್ಟುಕೊಡುವ ಮೂಲಕ ಫ್ರೆಂಚ್ ಅಭಿಯಾನ ಅಂತ್ಯಗೊಳಿಸಿದರು. ಪಂದ್ಯದ ಮೊದಲನೇ ಸೆಟ್ ನ ಆರಂಭದಲ್ಲಿ ತಾಯ್ ಟಿಜು ಹಾಗೂ ಸಿಂಧು ಅವರ ನಡುವೆ ಹೋರಾಟ ಸಲಮಬಲದಿಂದ ಕೂಡಿತ್ತು. ಆದರೆ, ಅದ್ಭತ ಪ್ರದರ್ಶನದಿಂದ ಗಮನ ಸೆಳೆದ ಚೈನೀಸ್ ತೈಫೆ ಆಟಗಾರ್ತಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಆರಂಭಿಕ ಸೆಟ್ನಲ್ಲಿ ಮಧ್ಯೆಯಲ್ಲಿ ಸಿಂಧು ಕೇವಲ ಒಂದು ಅಂಕ ಅಂತರ ಕಾಯ್ದುಕೊಂಡಿದ್ದರು. ನಂತರ ಪುಟಿದೆದ್ದ ಯಿಂಗ್ ಮೊದಲನೇ ಸೆಟ್ ಅನ್ನು ತನ್ನದಾಗಿಸಿಕೊಂಡರು.  ಎರಡನೇ ಸೆಟ್ಗೆ ತೀವ್ರ ಒತ್ತಡದಲ್ಲಿ ಕಣಕ್ಕೆ ಇಳಿದ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ತೀವ್ರ ಪೈಪೋಟಿ ನಡೆಸಿದರು. ಮೊದಲನೇ ಸೆಟ್ನಲ್ಲಿ ಮಾಡಿದ ತಪ್ಪುಗಳನ್ನು ಅರಿತು ತೈಫೆಯ ಆಟಗಾರ್ತಿ ಮೇಲೆ ಪಾರಮ್ಯ ಸಾಧಿಸಿ 26-24 ಅಂತರದಲ್ಲಿ ಎರಡನೇ ಸೆಟ್ ಗೆದ್ದು ಸಮಬಲ ಸಾಧಿಸಿದರು.  ತೀವ್ರ ಕುತೂಹಲ ಕೆರಳಿಸಿದ ಮೂರನೇ ಹಾಗೂ ನಿರ್ಣಾಯಕ ಸೆಟ್ನಲ್ಲಿ ಚೈನೀಸ್ ತೈಫೆಯ ತಾಯ್ ಟಿಜು ಯಂಗ್ ಆರಂಭದಲ್ಲೇ ಮುನ್ನಡೆ ಸಾಧಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಮೂರನೇ ಗೇಮ್ನ ಮಧ್ಯೆದಲ್ಲಿ ಸಿಂಧು ಅವರು ಪುಟಿದೆದ್ದರು. ಅಂತಿಮವಾಗಿ 17-21 ಅಂತರದಲ್ಲಿ ಪಂದ್ಯವನ್ನು ಯಿಂಗ್ಗೆ ಬಿಟ್ಟುಕೊಟ್ಟರು. ಒಟ್ಟಾರೆ  ಪಿ.ವಿ ಸಿಂಧು ಅವರು ವೃತ್ತಿ ಜೀವನದಲ್ಲಿ ಚೈನೀಸ್ ತೈಫೆಯ ಆಟಗಾರ್ತಿ ಎದುರು ಆಡಿರುವ 16ರ ಮುಖಾಮುಖಿಯಲ್ಲಿ 11  ಬಾರಿ  ಸೋಲು ಅನುಭವಿಸಿದ್ದಾರೆ.