ಮಲೇಷ್ಯಾ ಮಾಸ್ಟರ್ಸ್ ಅಭಿಯಾನ ಮುಗಿಸಿದ ಸಿಂಧು, ಸೈನಾ

ಕೌಲಾಲಂಪುರ, ಜ 10             ಭಾರತ ಅನುಭವಿ ಬ್ಯಾಡ್ಮಿಂಟನ್ ಆಟಗಾರ್ತಿರಾದ ಪಿ.ವಿ ಸಿಂಧು ಹಾಗೂ ಸೈನಾ ನೆಹ್ವಾಲ್ ಅವರು ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಸೋತು ಹೊರ ನಡೆದಿದ್ದಾರೆ.ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿದ ಸಿಂಧು, 12-21, 16-21 ಅಂತರದಲ್ಲಿ ತೈವಾನ್ ನ ವಿಶ್ವದ ಎರಡನೇ ಶ್ರೇಯಾಂಕಿತೆ ಟಿಜು ಯಿಂಗ್ ಥೈ ವಿರುದ್ಧ ಸೋಲು ಅನುಭವಿಸಿದರು. ಆ ಮೂಲಕ 2020ರ ವರ್ಷದ ಮೊದಲನೇ ಟೂರ್ನಿಯ ಸೋಲು ಇದಾಯಿತು.ಎರಡನೇ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಸೈನಾ ನೆಹ್ವಾಲ್ ಅವರು 7-21, 7-21 ಅಂತರದಲ್ಲಿ ನೇರ ಸೆಟ್ ಗಳಿಂದ ಸ್ಪೇನ್ ಕರೋಲಿನ್ ಮರಿನ್ ಎದುರು ಹೀನಾಯ ಸೋಲು ಅನುಭವಿಸಿದರು. ಆ ಮೂಲಕ ಮಲೇಷ್ಯಾ ಮಾಸ್ಟರ್ಸ್ ಅಭಿಯಾನ ಮುಗಿಸಿದರು.ಪಂದ್ಯದ ಮೊದಲನೇ ಗೇಮ್ ನಲ್ಲಿ ತೈವಾನ್ ಆಟಗಾರ್ತಿ ಬಹುಬೇಗ ಮುನ್ನಡೆ ಪಡೆದಿದ್ದರು. ನಂತರ, ಪುಟಿದೆದ್ದ ಭಾರತದ ಆಟಗಾರ್ತಿ ಆಕ್ರಮಣಕಾರಿ ಪ್ರದರ್ಶನ ತೋರಿ 7-7 ಸಮಬಲ ಕಾಯ್ದುಕೊಂಡರು. ನಂತರ, ಪಂದ್ಯದ ಹಿಡಿತ ಸಾಧಿಸಿ ಅತ್ಯುತ್ತಮ ರ್ಯಾಲಿಗಳನ್ನು ಮಾಡಿದ ಟಿಜು 21-12 ಅಂತರದಲ್ಲಿ ಮೊದಲನೇ ಗೇಮ್ ಗೆದ್ದರು.ಮೊದಲ ಗೇಮ್ ಸೋಲಿನೊಂದಿಗೆ ತೀವ್ರ ಒತ್ತಡದಲ್ಲಿ ಕಣಕ್ಕೆ ಇಳಿದ ಪಿ.ವಿ ಸಿಂಧು ಅವರ ಆರಂಭದಲ್ಲಿ ಮುನ್ನಡೆ ಪಡೆದರು. ಆದರೂ, ಮಧ್ಯಂತರ ಅವಧಿಯಲ್ಲಿ ಟಿಜು 7 ಅಂಕಗಳನ್ನು ಮುನ್ನಡೆ ಪಡೆದಿದ್ದರು. ಅಂತಿಮವಾಗಿ ವಿಶ್ವ ಚಾಂಪಿಯನ್ ಶಿಪ್ ಕೇವಲ ಐದು ಮ್ಯಾಚ್ ಪಾಯಿಂಟ್ ಉಳಿಸಿಕೊಳ್ಳುವಲ್ಲಿ ಸಫಲರಾದರು. ಕೊನೆಗೂ ಸಿಂಧು ಪಂದ್ಯ ಉಳಿಸಿಕೊಳ್ಳಲು ಸಾಧ್ಯವಾಗದೇ ತೈವಾನ್ ಆಟಗಾರ್ತಿಗೆ ಮಣಿದರು.ಕಳೆದ ಆಗಸ್ಟ್ ತಿಂಗಳ ಬಳಿಕ ಸಿಂಧು ಅವರು ಟಿಜು ವಿರುದ್ಧ 12ನೇ ಸೋಲು ಇದಾಯಿತು.