ಲೋಕದರ್ಶನ ವರದಿ
ಸಿಂದಗಿ 22: ಹಳೆ ವೈಷಮ್ಯದ ಕಾರಣ ಒರ್ವ ವ್ಯಕ್ತಿ ಚಾಕುನಿಂದ ಒರ್ವ ವ್ಯಕ್ತಿಗೆ ಹಲ್ಲೆ ಮಾಡಿದ ಘಟನೆ ಸಿಂದಗಿ ಪಟ್ಟಣದ ಸಂಗಮ ಬಾರ ಹತ್ತಿರ ಸೋಮವಾರ ಸಾಯಂಕಾಲ 5:40 ಗಂಟೆ ಸುಮಾರಿಗೆ ನಡೆದಿದೆ.
ಹಳೆ ವೈಷಮ್ಯದ ಕಾರಣ ಪಟ್ಟಣದ ರೌಡಿಶಿಟರ್ ಸಮೀರ ಗುಂದಗಿಯು ತಾಲೂಕಿನ ಆಲಮೇಲ ಪಟ್ಟಣದ ಮತರ್ೂಜ ಮೈಬೂಬ ಬಳಗಾನೂರ ಇತನ ಮೇಲೆ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.
ಈ ಹಲ್ಲೆಯಿಂದ ಬಲ ಎದೆಯ ಭಾಗ, ಬಲ ಹೊಟ್ಟೆ ಭಾಗದಲ್ಲಿ ಗಾಯಗಳಾಗಿವೆ. ಗಾಯಾಳುವಿಗೆ ಸಿಂದಗಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.
ಹಲ್ಲೆ ಮಾಡಿದ ರೌಡಿಶಿಟರ್ ಸಮೀರ ಗುಂದಗಿಯು ಪರಾರಿಯಾಗಿದ್ದಾನೆ. ಪ್ರಕರಣ ಸಿಂದಗಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.