ಸಿಂದಗಿ: ಆರೋಗ್ಯ ಸಂಪತ್ತಿಗಿಂತ ಮಿಗಿಲಾದ ಸಂಪತ್ತಿಲ್ಲ

ಲೋಕದರ್ಶನ ವರದಿ

ಸಿಂದಗಿ 15: ಆರೋಗ್ಯ ಸಂಪತ್ತಿಗಿಂತ ಮಿಗಿಲಾದ ಸಂಪತ್ತಿಲ್ಲ ಎಂದು ವಿಶ್ರಾಂತ ತಾಲೂಕಾ ವೈದ್ಯಾಧಿಕಾರಿ ಡಾ.ಎ.ಆರ್.ಪಾಟೀಲ ಹೇಳಿದರು.

ಪಟ್ಟಣದ ಜ್ಯೋತಿ ನಗರದಲ್ಲಿನ ಶ್ರೀ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಸ್ಥಳಿಯ ರೋಟರಿ ಸಂಸ್ಥೆ ಕಲ್ಯಾಣ ನಗರ ಹಾಗೂ ರಾಜಸ್ಥಾನದ ಆರೋಗ್ಯ ಜೀವನ ಸಂಸ್ಥಾನದ ಡಾ.ರಾಮಮನೋಹರ ಲೋಹಿಯಾ ಅವರ ಸಹಯೋಗದಲ್ಲಿ ಹಮ್ಮಿಕೊಂಡ ಮೊಣಕಾಲು ಹಾಗೂ ಸೋಂಟ್ ನೋವು ಚಿಕಿತ್ಸೆ ಶಿಭಿರ ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕತೆಗೆ ಮಾರುಹೋಗಿ ನಮ್ಮ ಜೀವನ ಶೈಲಿ ಬದಲಾವಣೆಯಾಗಿ ಯಾಂತ್ರಿಕ ಜೀವನ ನಡೆಸುತ್ತಿದ್ದೇವೆ. ಆರೋಗ್ಯಕ್ಕಾಗಿ ನಮ್ಮ ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳಬೇಕು. ಆದಷ್ಟು ಹಿತಮಿತವಾದ ಆಹಾರ ಸೇವನೆ, ಸರಳ ವ್ಯಾಯಾಮ, ಧ್ಯಾನವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು ಎಂದು ಹೇಳಿದರು.

ಸ್ಥಳಿಯ ರೋಟರಿ ಸಂಸ್ಥೆ ಕಲ್ಯಾಣ ನಗರ ಘಟಕವು ಅತ್ಯಂತ ಕ್ರೀಯಾಶೀಲವಾಗಿದೆ. ವರ್ಷದಲ್ಲಿ ಮೇಲಿಂದ ಮೇಲೆ ಸಾರ್ವಜನಿಕರಿಗೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಶಿಭಿರಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕರಿಗೆ ಚಿಕಿತ್ಸೆ ನೀಡಿಸುವ ಜೊತೆಗೆ ಆರೋಗ್ಯದ ಕುರಿತು ಜಾಗೃತಿ ಮುಡಿಸುವ ಕಾರ್ಯ ಮಾಡುತ್ತಿದ್ದಾರೆ. ಅವರ ಕಾರ್ಯ ಇಥರ ಸಂಘ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ರೋಟರಿ ಸಂಸ್ಥೆ ಕಲ್ಯಾಣ ನಗರದ ಅಧ್ಯಕ್ಷ ಕೃಷ್ಣಾ ಈಳಗೇರ ಮಾತನಾಡಿ, ತಾಲೂಕಿನಲ್ಲಿ ರೋಟರಿ ಕ್ಲಬ್ ಅಸ್ತಿತ್ವಕ್ಕೆ ಬಂದು 13ನೇ ವರ್ಷ ನಡೆದಿದೆ. ಅನಾಥ ಮಕ್ಕಳಿಗೆ, ಶೈಕ್ಷಣಿಕ ಕಿಟ್, ಶಾಲಾ ವಿದ್ಯಾಥರ್ಿಗಳಿಗೆ ಶುದ್ಧ ಕುಡಿಯುವ ನೀರಿನ ಕಿಟ್, ಉಚಿತ ಆರೋಗ್ಯ ತಪಾಸಣೆ, ಸಾರಿಗೆ ಸಂಸ್ಥೆ ಸಿಬ್ಬಂದಿಗಳಿಗೆ ಉಚಿತ ನೇತ್ರ ತಪಾಸಣೆ ಹೀಗೆ ಹತ್ತು ಹಲವು ಸಾಮಾಜಿಕ ಉಪಯುಕ್ತ ಕಾರ್ಯಕ್ರಮಗಳನ್ನು ಈ ಸಂಸ್ಥೆ ಮೂಲಕ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಡಾ.ಭುಪೇಂದ್ರ ಚೌಧರಿ, ಡಾ.ವಿಕ್ರಂ ಮಶಾಲ ಅವರು ಮೊಣಕಾಲು ಹಾಗೂ ಸೋಂಟ್ ನೋವು ರೋಗಿಗಳಿಗೆ ಚಿಕಿತ್ಸೆ ನೀಡಿದರು. ವಿಶ್ರಾಂತ ಪ್ರಾಚಾರ್ಯರಾದ ಎಸ್.ಸಿ.ಅಟವಿ, ಎನ್.ವಿ.ಸಜ್ಜನ, ಕಾರ್ಯದರ್ಶಿ  ಬಸವರಾಜ ಹಳ್ಳಿ, ಡಾ.ಸಂಗಮೇಶ ಪಾಟೀಲ, ಡಾ.ಚಂದ್ರಶೇಖರ ಹಿರೇಗೌಡರ, ಡಾ.ಮಹೇಶ ಕುಲಕಣರ್ಿ, ಡಾ.ಮಹಾಂತೇಶ ಹಿರೇಮಠ, ಭಸವಂತ್ರಾಯ ಮಲಘಾಣ, ಎಸ್.ಎ.ಬಿರಾದಾರ ಉಪಸ್ಥಿತರಿದ್ದರು.