ಸಿಂದಗಿ: ಪತ್ರಕರ್ತ ನಿಂಗರಾಜ್ ಕೊಲೆ ಸಂಚು: ದುಷ್ಕಮರ್ಿಗಳ ಬಂಧನಕ್ಕೆ ಆಗ್ರಹ

ಲೋಕದರ್ಶನ ವರದಿ

ಸಿಂದಗಿ 06: ಕ್ರಾಂತಿ ದಿನಪತ್ರಿಕೆ ವರದಿಗಾರ, ಕಾನಿಪ ತಾಲೂಕು ಕೋಶಾಧ್ಯಕ್ಷ ನಿಂಗರಾಜ್ ಅತನೂರ ಅವರಿಗೆ ಇತ್ತೀಚೆಗೆ ಕೊಲೆಗೆ ಸಂಚು ರೂಪಿಸಿ ಜೀವ ಬೇಧರಿಕೆ ಹಾಕಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕದ ವತಿಯಿಂದ ಪಟ್ಟಣದ ತಹಸೀಲ್ದಾರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ ಮುಖಾಂತರ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಟಿ.ಕೆ.ಮಲಗೊಂಡ, ಪಂಡಿತ ಯಂಪೂರೆ, ಆನಂದ ಶಾಬಾದಿ, ರಮೇಶ ಪೂಜಾರ ಮಾತನಾಡಿ, ಕ್ರಾಂತಿ ದಿನಪತ್ರಿಕೆಯ ತಾಲೂಕು ವರದಿಗಾರ ಹಾಗೂ ಕಾನಿಪ ಸಂಘದ ತಾಲೂಕು ಕೋಶಾಧ್ಯಕ್ಷ ನಿಂಗರಾಜ್ ಅತನೂರ ಅವರು ತಮ್ಮ ಕಾರಿನಲ್ಲಿ ದಿನಾಂಕ: 03-11-2019ರಂದು ಸಂಜೆ 7.30ರ ಸುಮಾರಿಗೆ ಸಿಂದಗಿಯಿಂದ ಚಾಂದಕವಠೆ ಗ್ರಾಮಕ್ಕೆ ಹೋಗುವ ಸಂದರ್ಭದಲ್ಲಿ ಯಾರೋ ದುಷ್ಕಮರ್ಿಗಳು ನಂಬರ್ಪ್ಲೇಟ್ ಇರದ ಇನ್ನೋರ್ವ ಕಾರಿನಲ್ಲಿ ಹಿಂಬಾಲಿಸಿ ಕಿಟಕಿಯಿಂದ ಮಚ್ಚು-ಲಾಂಗುಗಳನ್ನು ತೋರಿಸಿ ಕಾರಿನ ಮೇಲೆ ಮುಗಿಬೀಳುವ ಪ್ರಯತ್ನ ಮಾಡಿದ್ದು ಅದೃಷ್ಟವಶಾತ್ ಅವರ ಯತ್ನ ಫಲಿಸದೇ ನಿಂಗರಾಜ್ ಅತನೂರ ಅವರು ಅಪಾಯದಿಂದ ಪಾರಾಗಿದ್ದಾರೆ. ಈ ಕುರಿತು ದಿನಾಂಕ: 04-11-2019ರಂದು ಸಿಂದಗಿ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಸಮಾಜದಲ್ಲಿ ನಡೆಯುವ ದುಷ್ಕೃತ್ಯಗಳು, ರಾಜಕಾರಣಿಗಳ-ಅಧಿಕಾರಿಗಳ ಭ್ರಷ್ಟಾಚಾರವನ್ನು ತಮ್ಮ ಲೇಖನಿಯ ಮೂಲಕ ಜನಸಾಮಾನ್ಯರಿಗೆ ತಿಳಿಸುವಂತಹ ಪತ್ರಕರ್ತರ ಮೇಲೆ ಈ ರೀತಿಯ ಕೃತ್ಯಗಳು ಮೇಲಿಂದ ಮೇಲೆ ನಡೆಯುತ್ತಿದ್ದು, ನಿಷ್ಪಕ್ಷಪಾತ ಹಾಗೂ ನಿರ್ಭಿತ ವರದಿ ಮಾಡುವ ವರದಿಗಾರರ ಜೀವಕ್ಕೆ ಭದ್ರತೆ ಇಲ್ಲದಂತಾಗಿದೆ. ಆದರೆ, ಇಂತಹ ಗೊಡ್ಡು ಬೇಧರಿಕೆಗಳಿಗೆ ಪತ್ರಕರ್ತರು ಸೊಪ್ಪು ಹಾಕದೇ ಮತ್ತಷ್ಟು ನಿರ್ಭಯದಿಂದ  ವರದಿ ಮಾಡುತ್ತಾರೆ ಎನ್ನುವುದು ದುಷ್ಕರ್ಮಿಗಳಿಗೆ ಗೊತ್ತಿಲ್ಲ. ಈ ಕೂಡಲೇ ಪತ್ರಕರ್ತ ನಿಂಗರಾಜ್ ಅತನೂರ ಅವರಿಗೆ ತಾಲೂಕಾಡಳಿತವು ಅವರ ಭದ್ರತೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ನೀಡಬೇಕು. ಒಟ್ಟಾರೆ ಇಂತಹ ಪ್ರಕರಣಗಳು ಮರುಕಳಿಸದ ರೀತಿ ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆ ಮುಂಜಾಗೃತ ಕ್ರಮ ಕೈಗೊಳ್ಳಬೇಕು. ಮತ್ತು ತಪ್ಪಿತಸ್ಥ ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸಿ ಕಾನೂನಿನ ಅಡಿಯಲ್ಲಿ ಸೂಕ್ತ ಶಿಕ್ಷೆಗೊಳಪಡಿಸಬೇಕು. ಇಲ್ಲದಿದ್ದಲ್ಲಿ ಕಾನಿಪ ಸಂಘವು ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಪತ್ರಕರ್ತರಾದ ಮುರಗೇಶ ಹಿಟ್ಟಿ, ನಿಂಗರಾಜ್ ಅತನೂರ, ವಿಜಯಕುಮಾರ ಪತ್ತಾರ, ಮಲ್ಲಿಕಾಜರ್ುನ ಅಲ್ಲಾಪೂರ, ರವಿ ಮಲ್ಲೇದ, ಮಂಜುನಾಥ ಹಡಪದ, ಶಿವಕುಮಾರ ಬಿರಾದಾರ, ಗುಂಡು ಕುಲಕಣರ್ಿ, ಅಂಬರೀಷ್ ಸುಣಗಾರ, ಪ್ರಕಾಶ ಬಡಿಗೇರ, ಮಲ್ಲು ಪಟ್ಟಣಶೆಟ್ಟಿ, ಸಿದ್ದು ಪೂಜಾರಿ, ಮೈಬೂಬ ಮುಲ್ಲಾ, ರಾಹುಲ್ ಯಂಪೂರೆ, ಮಹ್ಮದಅಸ್ಫಾಕ್ ಕರ್ಜಗಿ, ಗಫೂರ್ ಮುಜಾವರ, ಪ್ರೇಮಕುಮಾರ ಹಜೇನವರ, ರಫೀಕ್ ಅರಳಗುಂಡಗಿ, ನಾಗೇಶ ತಳವಾರ, ಸಲಿಂ ಮರ್ತಿರ, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳಾದ ಸುದರ್ಶನ ಜಂಗಣ್ಣಿ, ಹರ್ಷವರ್ಧನ್ ಪೂಜಾರಿ, ಪ್ರವೀಣ ಸುಲ್ಪಿ, ಮಹಾವೀರ ಸುಲ್ಪಿ ಸೇರಿದಂತೆ ಅನೇಕರಿದ್ದರು.