ಲೋಕದರ್ಶನ ವರದಿ
ಸಿಂದಗಿ 15: ನಾನೊಬ್ಬ ಶಾಲಾ?ಶಿಕ್ಷಕ, ಸೀದಾ ಸಾದಾ ವ್ಯಕ್ತಿ. ಇವತ್ತಿಗೂ ನನಗೆ ಪುಸ್ತಕಗಳೇ ಸಂಪತ್ತು. ಶಾಲಾ?ವಿದ್ಯಾಥರ್ಿಗಳನ್ನು ನನ್ನ ಮಕ್ಕಳ ಸಮ ನೋಡಿಕೊಂಡಿದ್ದರ ಪ್ರತಿಫಲ ಪ್ರಶಸ್ತಿ ಎಂದು ವಯೋಶ್ರೇಷ್ಠ ಸಮ್ಮಾನ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ಈಶ್ವರಚಂದ್ರ ಚಿಂತಾಮಣಿ ಹೇಳಿದರು.
ಪಟ್ಟಣದ ಕ್ರಿಯೇಟಿವ್ ಕಿಡ್ಸ್ ಹೋಮ್ನಲ್ಲಿ ವಿದ್ಯಾಚೇತನ ಪ್ರಕಾಶ ಹಮ್ಮಿಕೊಂಡ 'ವಯೋಶ್ರೇಷ್ಠ ಸಮ್ಮಾನ' ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ಈಶ್ವರಚಂದ್ರ ಚಿಂತಾಮಣಿ ಅವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಸನ್ಮಾನೋತ್ತರವಾಗಿ ಮಾತನಾಡಿದರು.
ಇವತ್ತಿಗೂ ಪುಸ್ತಕಗಳೇ?ನನ್ನ ಸಂಪತ್ತು. ಶಿಕ್ಷಕ ವೃತ್ತಿ ಜೀವನ, ಶಾಲಾ ಮಕ್ಕಳ ಒಡನಾಟ, ಮಕ್ಕಳ ಸಾಹಿತಿಗಳ ಪ್ರೀತಿ ವಾತ್ಸಲ್ಯ, 1974ರಲ್ಲಿ ಅಂದಿನ ರಾಷ್ಟ್ರಪತಿ ಫಕ್ರುದ್ದಿನ್ ಅಲಿ ಅಹಮ್ಮದ್ ಅವರು ರಾಷ್ಟ್ರಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಿದ ಸಮಯ, 2007ರ ಜನವರಿ 26 ರಂದು ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ದೇಶದ 50 ಮಕ್ಕಳ ಸಾಹಿತಿಗಳಿಗೆ ಏರ್ಪಡಿಸಿದ ಔತಣಕೂಟದಲ್ಲಿ ಭಾಗಿಯಾಗಿರುವುದು, ಮಕ್ಕಳ ಸಾಹಿತಿಗಳೊಡನೆ ಒಡನಾಟ ಹೀಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
ನನ್ನ ಮಕ್ಕಳ ಸಾಹಿತಿಗಳ ಬಳಗದಲ್ಲೊಬ್ಬರಾದ ಮಕ್ಕಳ ಸಾಹಿತಿ ಹ.ಮ.ಪೂಜಾರ ಅವರಿಂದ ಸನ್ಮಾನಿಸಿ ಗೌರವಿಸಿಕೊಳ್ಳುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ. ಇದು ಹೃದಯಸ್ಪರ್ಶಿ ಸನ್ಮಾನವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸ್ಥಳಿಯ ವಿದ್ಯಾಚೇತನ ಪ್ರಕಾಶನದ ವತಿಯಿಂದ ಮಕ್ಕಳ ಸಾಹಿತಿ ಈಶ್ವರಚಂದ್ರ ಚಿಂತಾಮಣಿ ಅವರಿಗೆ ಹ.ಮ.ಪೂಜಾರ ಅವರು ಸನ್ಮಾನಿಸಿ ಗೌರವಿಸಿದರು.
ವಿಶ್ರಾಂತ ಪ್ರಾಚಾರ್ಯ ಎಸ್.ಸಿ.ಅವಟಿ, ಡಾ.ಎಂ.ಎಸ್.ಚಾಂದಕವಠೆ, ಕಜಾಪ ಜಿಲ್ಲಾಧ್ಯಕ್ಷ, ಪ್ರಾಧ್ಯಾಪಕ ಬಿ.ಎನ್.ಪಾಟೀಲ ಇಬ್ರಾಹಿಂಪೂರ, ಪ್ರಾಚಾರ್ಯ ಎಂ.ಎಸ್.ಹಯ್ಯಾಳಕರ, ಮಕ್ಕಳ ಸಾಹಿತಿ ರಾ.ಸಿ.ವಾಡೇದ, ಡಾ.ಸಂಗಮೇಶ ಪಾಟೀಲ, ಗ್ರಂಥಪಾಲಕ ಪಿ.ಎಸ್.ಕನಮಡಿ, ಎಂ.ಎಂ.ಹೂಗಾರ, ಸಿ.ಎಂ.ಪೂಜಾರ, ಡಾ.ಜಿ.ಎಸ್.ಭೂಸಗೊಂಡ, ಆಶಾ ಭೂಸಗೊಂಡ, ಚನ್ನು ಪಟ್ಟಣಶೆಟ್ಟಿ, ವಿಜಯಕುಮಾರ ಪೂಜಾರ, ರಾಜಶೇಖರ ಪೂಜಾರ, ರಮೇಶ ಪೂಜಾರ ಸೇರಿದಂತೆ ವಿದ್ಯಾಚೇತನ ಹಿರಿಯ ಪ್ರಾಥಮಿಕಶಾಲೆ ಹಾಗೂ ಕ್ರಿಯೇಟಿವ್ ಕಿಡ್ಸ್ ಹೋಮ್ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.