ಸಿಂದಗಿ: ದೇಶದ ಅಭಿವೃದ್ಧಿಗೆ ಮಾನವ ಸಂಪತ್ತು ಅವಶ್ಯ
ಲೋಕದರ್ಶನ ವರದಿ
ಸಿಂದಗಿ 26: ದೇಶದ ಅಭಿವೃದ್ಧಿಯಾಗಬೇಕಾದರೆ ಮಾನವ ಸಂಪತ್ತು ಅತ್ಯವಶ್ಯಕ ಎಂದು ಸ್ಥಳಿಯ ಸಿ.ಎಂ.ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರೊ. ಬಿ.ಎ.ಪಾಟೀಲ ಹೇಳಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಸಭಾಭವನದಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ತಾಲೂಕಾ ಶಾಖೆ ಮತ್ತು ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯತಿಥಿಗಳಾಗಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಸ್.ಮೋರಟಗಿ ಅವರು ಮಾತನಾಡಿ, ದೇಶದ ಜನಸಂಖ್ಯೆಯನ್ನು ನೈಸಗರ್ಿಕ ಸಂಪನ್ಮೂಲಗಳಿಗೆ ಹೊಂದಾಣಿಕೆ ಆಗುವ ಹಾಗೆ ಇರಬೇಕು ಎಂದರು. ಪ್ರೊ.ಡಿ.ಆರ್.ಮಠಪತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆ ತಾಲೂಕಾ ಶಾಖೆಯ ಕಾರ್ಯಕಾರಿ ಸಮೀತಿ ಸದಸ್ಯ ರಮೇಶ ಪೂಜಾರ, ಕಾರ್ಯದಶರ್ಿ ರಮೇಶ ಯಂಕಂಚಿಕರ ವೇದಿಕೆ ಮೇಲೆ ಇದ್ದರು.
ಉಪನ್ಯಾಸಕರಾದ ಬಿ.ಎನ್.ಪಾಟೀಲ, ಎ.ಜಿ.ಮುದ್ದೇಬಿಹಾಳ, ಎಂ.ಕೆ.ಹಿಪ್ಪರಗಿ, ಅತಿಥಿ ಉಪನ್ಯಾಸಕರಾದ ಸುಧಾಕರ ಚವ್ಹಾಣ, ಅನೀಲ ರಜಪೂತ, ಟಿ.ಎನ್.ಲಮಾಣಿ ಹಾಗೂ ವಿದ್ಯಾಥರ್ಿಗಳು ಕಾರ್ಯಕ್ರದಲ್ಲಿ ಇದ್ದರು.
ವಿದ್ಯಾಥರ್ಿನಿ ಐಶ್ವರ್ಯ ಗೋಗಿ ಪ್ರಾರ್ಥನಾ ಗೀತೆ ಹಾಡಿದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆ ತಾಲೂಕಾ ಶಾಖೆಯ ವೈಸ್ಚೇರಮನ್ ಎಸ್.ಎಂ.ಕುಂಬಾರ ನಿರೂಪಿಸಿದರು. ಪ್ರೊ.ಎಸ್.ಎಸ್.ಸುರಪೂರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 