ನವದೆಹಲಿ, ಅ 15: ವಿವಾದದಿಂದಾಗಿ ವೆಸ್ಟ್ ಇಂಡೀಸ್ ತಂಡದ ಮುಖ್ಯ ತರಬೇತುದಾರ ಸ್ಥಾನದಿಂದ ಕೆಳಗೆ ಇಳಿದಿದ್ದ ಫಿಲ್ ಸಿಮನ್ಸ್ ಮೂರು ವರ್ಷಗಳ ಬಳಿಕ ಮತ್ತೆ ತಂಡದ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದಾರೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಸ್ಪಷ್ಟಪಡಿಸಿದೆ. 2016ರ ಐಸಿಸಿ ಟಿ-20 ವಿಶ್ವಕಪ್ ಬಳಿಕ ಫಿಲ್ ಸಿಮನ್ಸ್ ಅವರು ಹಣ ಪಾವತಿ ವಿಚಾರದಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾದಿಂದಾಗಿ ತಂಡದ ಮುಖ್ಯ ಕೋಚ್ ಸ್ಥಾನದಿಂದ ಕೆಳಗೆ ಇಳಿದಿದ್ದರು. ಇದೀಗ ಅವರು ಮತ್ತೆ ತಂಡವನ್ನು ಸೇರಿಕೊಳ್ಳುತ್ತಿದ್ದು, ಮುಂದಿನ ನಾಲ್ಕು ವರ್ಷಗಳ ಕಾಲ ಅವರ ತಂಡದ ಕೋಚ್ ಸೇವೆ ಸಲ್ಲಿಸಲಿದ್ದಾರೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ತನ್ನ ಹೇಳಕೆಯಲ್ಲಿ ಸ್ಪಷ್ಟಪಡಿಸಿದೆ. ಸಿಮನ್ಸ್ ಅವರನ್ನು ಮತ್ತೆ ತಂಡಕ್ಕೆ ಮರಳಿ ಕರೆತಂದಿರುವುದು ಕೇವಲ ಹಿಂದಿನ ತಪ್ಪನ್ನು ಸರಿಪಡಿಸಲಿಕ್ಕಲ್ಲ. ಆದರೆ, ಕ್ರಿಕೆಟ್ ವೆಸ್ಟ್ ಇಂಡೀಸ್ ಸರಿಯಾದ ಸಮಯದಲ್ಲಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದೆ ಎಂಬ ವಿಶ್ವಾಸ ನನಗಿದೆ ಎಂದು ಸಿಡಬ್ಲ್ಯುಐನ ಅಧ್ಯಕ್ಷ ರಿಕಿ ಸ್ಕೆರಿಟ್ ಹೇಳಿದ್ದಾರೆ. 2016ರ ಸೆಪ್ಟಂಬರ್ನಲ್ಲಿ ವೆಸ್ಟ್ ಟಿ-20 ವಿಶ್ವಕಪ್ ಜಯ ಸಾಧಿಸಿದ ಹೊರತಾಗಿಯು "್ಠದ್ಠ್ಲಿೃ್ತಿ ಮತ್ತು ಕಾರ್ಯತಂತ್ರದ ವಿಧಾನದಲ್ಲಿನ ವ್ಯತ್ಯಾಸಗಳು" ಎಂಬ ಕಾರಣಕ್ಕಾಗಿ ಮಾಜಿ ವೆಸ್ಟ್ ಇಂಡೀಸ್ ಆಲ್ ರೌಂಡರ್ ಫಿಲ್ ಸಿಮನ್ಸ್ ಅವರನ್ನು ಕೋಚ್ ಸ್ಥಾನದಿಂದ ವಜಾಗೊಳಿಸಿತ್ತು. ಟಿ-20 ನಾಟಕೀಯ ಫೈನಲ್ ಹಣಾಹಣಿಯಲ್ಲಿ ಕೊನೆಯ ನಾಲ್ಕು ಓವರ್ನಲ್ಲಿ ಬ್ರಾಥ್ವೇಟ್ ನಾಲ್ಕು ಸಿಕ್ಸರ್ ಸಿಡಿಸುವ ಮೂಲಕ ಚುಟುಕು ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಮುಡಿಗೇರಿಸಿಕೊಂಡಿತ್ತು.