ಉಗ್ರರ ದಾಳಿಗೆ ಹುತ್ಮಾತರಾದವರಿಗೆ ಸಂತಾಪ ಸಭೆಯಲ್ಲಿ ಮೌನಾಚರಣೆ
ಬಳ್ಳಾರಿ 25: ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾ ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರು, ವಿಧಾನ ಸಭಾಕ್ಷೇತ್ರ ಅಧ್ಯಕ್ಷರು, ಹೋಬಳಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮ ಶಾಖೆ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಸೇರಿದಂತೆ, ಜಿಲ್ಲಾಘಟಕದ ಸಭೆ ಇಂದು ನಡೆಯಿತು.
ಈ ಸಭೆಯಲ್ಲಿ ಜಮ್ಮು ಕಾಶ್ಮೀರದ ಪೆಹಲ್ಗಾಮನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿ 27 ಜನ ಅಮಾಯಕರ ಬಲಿ ಪಡೆದ ಉಗ್ರರ ಹೆಯಕೃತ್ಯ ಖಂಡಿಸಿ, ಹುತ್ಮಾತರಾದವರಿಗೆ ಒಂದು ನಿಮಿಷ ಮೌನ ಆಚರಣೆಯನ್ನು ಆಚರಿಸಲಾಯಿತು. ತದ ನಂತರ 68 ವರ್ಷಗಳ ನಂತರ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿ ಜಿಲ್ಲೆಗೆ ಒಲಿದು ಬಂದಿದ್ದು, ಅದರ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ನಿಷ್ಠಿ ರುದ್ರ್ಪರವರನ್ನು ಅಭಿನಂದಿಸಿ ಕರವೇವತಿಯಿಂದ ಸಮ್ಮೇಳನಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುವೆಂದು ತಿಳಿಸಲಾಯಿತು.
ತದ ನಂತರ ಕರವೇಗೆ ನೂತನವಾಗಿ ಯುವಕರು ಸೇರೆ್ಡಗೊಂಡಿರುತ್ತಾರೆ ಈ ಸಭೆಯಲ್ಲಿ ಬಳ್ಳಾರಿ ತಾಲ್ಲೂಕಿನ ನೂತನ ಅಧ್ಯಕ್ಷರನ್ನಾಗಿ ಸಿರಿವಾರ ದಿವಾಕರ್‌ರವರನ್ನು ನೇಮಕ ಮಾಡಲಾಯಿತು ಹಾಗೂ ಮುಂದಿನ ದಿನಗಳಲ್ಲಿ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ತಿಂಗಳಿಗೆ ಒಂದು ಬಾರಿ ಬೇಟಿ ನೀಡಿಕರವೇ ನೂತನ ಸದಸ್ಯತ್ವ ಅಭಿಯಾನವನ್ನು ನಡೆಸಲಾಗುವುದೆಂದು ತಿಳಿಸಲಾಯಿತು.
ಈ ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಉಪಾಧ್ಯಕ್ಷರಾದ ಚಾನಾಳ್ ಶೇಖರ್ ವಹಿಸಿದ್ದರು, ಸಭೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷರಾದ ಅಂಗಡಿ ಶಂಕ್ರ್ಪ ವಹಿಸಿದ್ದರು ಹಾಗೂ ಪದಾಧಿಕಾರಿಗಳಾದ ಶಿವಕುಮಾರ್.ಕೆ.ಎಂ, ಸಂಗನಕಲ್ಲು ಹನುಮಂತರೆಡ್ಡಿ, ವೇಣಿ ವೀರಾಪುರ ಕಿಶೋರ್, ಕೋಳೂರು ಜಿ.ತಿಪ್ಪಾರೆಡ್ಡಿ, ತೋಟದ ವಿರೇಶ್, ಶಬರಿ ರವಿಕುಮಾರ್, ವನ್ನನಗೌಡ, ಹುಬ್ಬಳಿ ರಾಜಶೇಖರ್, ಸೋಮಶೇಖರ್, ಆನಂದಗೌಡ, ಕುರುಗೋಡು ತಾಲ್ಲೂಕು ಅಧ್ಯಕ್ಷರಾದ ಗೆಣಿಕೆಹಾಳ್ ವಿರೇಶ್, ಕಂಪ್ಲಿತಾಲ್ಲೂಕುಅಧ್ಯಕ್ಷರಾದ ಮೆಟ್ರಿರಾಜಶೇಖರ್, ಕುಡತಿನಿ ಹೋಬಳಿ ಅಧ್ಯಕ್ಷರಾದ ಬಾವಿ ಶಿವಕುಮಾರ್, ಮಲ್ಲಿಕಾರ್ಜುನ ಚಾನಾಳ್, ಮಸ್ಕಿ ಮಹಾಂತೇಶ್, ಜಂಗ್ಲಿಸಾಬ್, ಶಂಕರ ಬಂಡೆ ರಾಜಶೇಖರ್, ಚಾಂದ್‌ಭಾಷ, ಕುರುಗೋಡಚನ್ನ, ಆಚಾರಿ, ಎಸ್.ಪಿ.ಸರ್ಕಲ್‌ರಾಜು, ಮುಂತಾದವರು ಉಪಸ್ಥಿತರಿದ್ದರು.