ಬೆಂಗಳೂರು, ಫೆ 05 , ನಿಶಬ್ಧಕ್ಕೂ ಶಬ್ಧವಿದೆ ಎಂಬ ಟ್ಯಾಗ್ಲೈನ್ ಮೂಲಕ ಗಮನ ಸೆಳೆದಿರುವ ‘ಮೌನಂ’ ಚಿತ್ರ ಇದೇ 21ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಕಿರುತೆರೆ ನಟ ಬಾಲಾಜಿ ಶರ್ಮಾ, ನಟಿ ಮಯೂರಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ ಹಿರಿಯ ನಟ ಅವಿನಾಶ್ ಚಿತ್ರದ ಮುಖ್ಯ ಪಾತ್ರವೊಂದಕ್ಕೆ ಬಣ್ಣಹಚ್ಚಿದ್ದಾರೆ ಸೈಕಾಲಾಜಿಕಲ್ ಸಬ್ಜೆಕ್ಟ್ ಇರೋ ಈ ಚಿತ್ರಕ್ಕೆ ರಾಜ್ ಪಂಡಿತ್ ನಿರ್ದೇಶನ ಮಾಡಿದ್ದಾರೆ
ನಟ ಅವಿನಾಶ್ ತಮ್ಮ 35 ವರ್ಷಗಳ ವೃತ್ತಿ ಬದುಕಿನಲ್ಲಿ ಅತ್ಯಂತ ವಿಶಿಷ್ಟವಾದ 6 ಶೇಡ್‍ಗಳಿರುವ ಪಾತ್ರದಲಿ ಅಭಿನಯಿಸಿದ್ದಾರೆ “ತಾಯಿಯಿಲ್ಲದ ಮಗನನ್ನು ತಂದೆ, ತಾಯಿ ಎರಡೂ ಆಗಿ ಬೆಳೆಸಿರುತ್ತಾನೆ ಆದರೆ ಮಗ ತನ್ನ ಬಾಳ ಸಂಗಾತಿಯನ್ನು ಆಯ್ದುಕೊಂಡಾಗ ತಂದೆ ಹೇಗೆ ವರ್ತಿಸುತ್ತಾನೆ” ಎಂಬುದು ಚಿತ್ರದ ತಿರುಳು ತಂದೆ ಮಗನ ಬಾಂಧವ್ಯದ ಜತೆಗೆ ಮನುಷ್ಯನಿಗೆ ಮನುಷ್ಯನೇ ಶತ್ರು, ನಮ್ಮ ಹೊರಗಡೆ ಇರುವ ಶತ್ರುವನ್ನು ಮಟ್ಟಹಾಕುವ ಮೊದಲು ನಮ್ಮ ಒಳಗಡೆ ಇರುವ ಶತ್ರುವನ್ನು ಮಟ್ಟಹಾಕಬೇಕು ಎಂಬ ಸಂದೇಶವಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ರಿತೇಶ್, ಕಾಮಿಡಿ ಕಿಲಾಡಿ ಖ್ಯಾತಿಯ ನಯನ, ಸಿಂಚನ, ಕೆಂಪೇಗೌಡಸೇರಿದಂತೆ ಹಲವು ಕಲಾವಿದರು ‘ಮೌನಂ’ ಚಿತ್ರದಲ್ಲಿ ನಟಿಸಿದ್ದಾರೆ ಮಯೂರಿ ಅವರು ಹೋಮಿ ಮತ್ತು ಆಕ್ಷನ್ ಸೀಕ್ವೆನ್ಸ್‍ಗಳಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಆರವ್ ರಿಶೀಕ್ ಸಂಗೀತ ಸಂಯೋಜನೆಯಲ್ಲಿ ಚಿತ್ರ ಮೂಡಿ ಬಂದಿದೆ. ಶ್ರೀಹರಿ `ಮೌನಂ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.