ಕತಾರ್ ಏರ್ವೇಸ್ನೊಂದಿಗೆ ಇಂಡಿಗೊ ಕೋಡ್ಶೇರ್ ಒಪ್ಪಂದಕ್ಕೆ ಸಹಿ

ಮುಂಬೈ, ನ 7:   ಕಡಿಮೆ ಪ್ರಯಾಣದರದ ವಿಮಾನಯಾನ ಸಂಸ್ಥೆ ಇಂಡಿಗೊ, ಭಾರತ ಮತ್ತು ಕತಾರ್ ನಡುವಿನ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕತಾರ್ ಏರ್ವೇಸ್ನೊಂದಿಗೆ ಕೋಡ್ಶೇರ್ ಒಪ್ಪಂದಕ್ಕೆ ಗುರುವಾರ ಸಹಿ ಹಾಕಿದೆ.    ಇಂದಿನಿಂದ ವಾರ್ಷಿಕ ಕಡಿಮೆ ದರದ ಟಿಕೆಟ್ಗಳ ಮಾರಾಟ ಆರಂಭವಾಗುವುದರೊಂದಿಗೆ, ಕೋಡ್ಶೇರ್ ಒಪ್ಪಂದಕ್ಕೆ ಎರಡೂ ಸಂಸ್ಥೆಗಳು ಸಹಿ ಹಾಕಿವೆ. ಈ ಒಪ್ಪಂದವು ಕತಾರ್ ಏರ್ವೇಸ್ಗೆ ದೋಹಾ ಮತ್ತು ದೆಹಲಿ, ಮುಂಬೈ, ಹೈದರಾಬಾದ್ ನಡುವಿನ ಇಂಡಿಗೊ ವಿಮಾನಗಳಲ್ಲಿ ತನ್ನ ಕೋಡ್ ಅನ್ನು ಇರಿಸಲು ಅನುವು ಮಾಡಿಕೊಡುತ್ತದೆ.  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ಪ್ರಗತಿ ಕಾರ್ಯತಂತ್ರದ ಭಾಗವಾಗಿ ಇಂಡಿಗೊ ಸಂಸ್ಥೆಯ ಎರಡನೇ ಕೋಡ್ಶೇರ್ ಒಪ್ಪಂದ ಇದಾಗಿದೆ. ಕತಾರ್ ಏರ್ ವೇಸ್ ಕೂಡ ತನ್ನ ಕೋಡ್ 'ಕ್ಯೂಆರ್' ಅನ್ನು ಇಂಡಿಗೊ ಚಾಲಿತ ವಿಮಾನಗಳಲ್ಲಿ ನಿರ್ದಿಷ್ಟಪಡಿಸಿದ ಸ್ಥಳಗಳ ನಡುವೆ ಇರಿಸುತ್ತದೆ.    'ವಿಶ್ವದ ಅತ್ಯುತ್ತಮ ವಿಮಾನಯಾನ ಸಂಸ್ಥೆಯಾದ ಕತಾರ್ ಏರ್ ವೇಸ್ನೊಂದಿಗೆ ಕೋಡ್ಶೇರ್ ಒಪ್ಪಂದಕ್ಕೆ ಸಹಿ ಹಾಕುತ್ತಿರುವುದು ನಮಗೆ ಒಂದು ಮಹತ್ವದ ಸಂದರ್ಭವಾಗಿದೆ. ಈ ಕಾರ್ಯತಂತ್ರದ ಮೈತ್ರಿ ನಮ್ಮ ಅಂತಾರಾಷ್ಟ್ರೀಯ ಕಾರ್ಯಾಚರಣೆಯನ್ನು ಬಲಪಡಿಸುವುದಲ್ಲದೆ, ಉತ್ತೇಜನ ನೀಡುತ್ತದೆ ಎಂದು  ಇಂಡಿಗೊ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೊನೋಜೋಯ್ ದತ್ತಾ ತಿಳಿಸಿದ್ದಾರೆ.