ದೇವರಹಿಪ್ಪರಗಿ 28: ಮತಕ್ಷೇತ್ರದ ಕುದರಿ ಸಾಲವಾಡಗಿ ಗ್ರಾಮದ ಸೋಮೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸಿದ್ಧಿಕಾ ಬಂದೇನವಾಜ ಕತ್ನಳ್ಳಿ ಆರನೇ ತರಗತಿಯ ಜವಹರ್ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಆಲಮಟ್ಟಿಯ ಜವಹರ ನವೋದಯ ವಿದ್ಯಾಲಯಕ್ಕೆ ಆಯ್ಕೆ ಆಗಿರುತ್ತಾಳೆ. ವಿದ್ಯಾರ್ಥಿಯ ಅಮೋಘ ಸಾಧನೆಗೆ ಶಾಲೆಯ ಅಧ್ಯಕ್ಷರು, ಮುಖ್ಯಗುರುಗಳು, ಸಹಶಿಕ್ಷಕರು,ತಂದೆ ಹಾಗೂ ತಾಯಿ ಸೇರಿದಂತೆ ಗ್ರಾಮಸ್ಥರು ಹಾಗೂ ಅನೇಕರು ಸಂತಸವನ್ನು ವ್ಯಕ್ತಪಡಿಸಿರುತ್ತಾರೆ.