ಸಿದ್ಧಗಂಗಾ ಮಠದ ಆವರಣದಲ್ಲಿ ಜೀವವೈವಿಧ್ಯ ಆಂದೋಲನಕ್ಕೆ ಚಾಲನೆ

ತುಮಕೂರು, ಮೇ 31, ಸಿದ್ಧಗಂಗಾ ಮಠದ ಆವರಣದಲ್ಲಿ ಅರಳಿ ಗಿಡ ನೆಡುವ ಮುಖಾಂತರ ಜೀವವೈವಿಧ್ಯ ಆಂದೋಲನಕ್ಕೆ ಇಂದು ಕರ್ನಾಟಕ ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ಅನಂತಕುಮಾರ್ ಹೆಗಡೆ ಆಶೀಶಿರ ಚಾಲನೆ ನೀಡಿದರು.ಅನಂತರ ಮಾತನಾಡಿದ ಅವರು, ಈ ಅಭಿಯಾನದ ಉದ್ದೇಶ ಬೆಟ್ಟಗಳನ್ನು ರಕ್ಷಣೆ ಮಾಡುವ ಪ್ರದೇಶಕ್ಕೆ ಭೇಟಿ ನೀಡುತ್ತೀದ್ದೇವೆ. ಕೋವಿಡ್-19ರ ಲಾಕ್‌ಡೌನ್ ಹಿನ್ನೆಲೆಯಲ್ಲಿ ದೊಡ್ಡ ಸಮಾರಂಭಗಳನ್ನು ನಡೆಸದೇ ಸಮಸ್ಯಾತ್ಮಕ ಸೂಕ್ಷ್ಮ ಪರಿಸರ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡುವುದು. ರಕ್ಷಣೆಗೆ ಸಮಾಲೋಚನೆ ನಡೆಸುವಂತಹ ಮತ್ತು ಕೆಲವು ಸಂದರ್ಭಗಳಲ್ಲಿ ಜೀವವೈವಿಧ್ಯ ದಾಖಲಾತಿಗಳನ್ನು ವರದಿ ಬಿಡುಗಡೆ ಮಾಡುವಂತಹ ಕಾರ್ಯಕ್ರಮಗಳನ್ನು ಈ ಅಭಿಯಾನದಲ್ಲಿ ಹಮ್ಮಿಕೊಳ್ಳುತ್ತೀದ್ದೇವೆ.

ಇಂದು ಸಿದ್ಧಗಂಗಾ ಮಠದಲ್ಲಿ ಪೂಜ್ಯರ ಸನ್ನಿಧಾನದಲ್ಲಿ ಅವರ ಮುಖಾಂತರ ವೃಕ್ಷಾರೋಪಣ ಮಾಡುವ ಮೂಲಕ ವಿಶೇಷವಾಗಿ ತುಮಕೂರು ಜಿಲ್ಲೆಯ ಕೆರೆ, ಬೆಟ್ಟಗಳನ್ನ ಕೃಷಿ, ತೋಟಗಾರಿಕಾ ವೈವಿದ್ಯವನ್ನ ಉಳಿಸಿ ಬೆಳೆಸೋ ದಿಕ್ಕಿನಲ್ಲಿ ಜಿಲ್ಲೆಯ ರೈತರಿಗೆ ಪ್ರೇರಣೆ ಮಾರ್ಗದರ್ಶನವನ್ನು ನೀಡುತ್ತಿದ್ದೇವೆ ಎಂದರು. ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಗ್ರಾಮ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಈ ಅಭಿಯಾನವನ್ನು ಆಂದೋಲನವನ್ನಾಗಿ ಮಾಡುವ ಮುಖಾಂತರವಾಗಿ ಪ್ರಭೇದ, ಜೀವ ವೈವಿದ್ಯ, ಕೆರೆ ಕಟ್ಟೆಗಳನ್ನು ಉಳಿಸುವಂತದ್ದು, ಅಲ್ಲದೇ ಹೊಸ ಚೈತನ್ಯವನ್ನು ಉಂಟು ಮಾಡುವ ರೀತಿಯಲ್ಲಿ ಜೀವ ಕಳೆಯನ್ನು ತುಂಬುವ ಕೆಲಸವನ್ನು ಜೀವವೈವಿದ್ಯ ಮಂಡಳಿ ಮಾಡುತ್ತೀರುವುದು ಸಂತೋಷದ ಸಂಗತಿ. ಇಂದು ಮನುಷ್ಯ ಆರೋಗ್ಯವಾಗಿ ಬದುಕಬೇಕೆಂದರೆ ಆಹಾರವಷ್ಟೆ ಸಾಲದು ಉತ್ತಮ ಪರಿಸರವೂ ಕೂಡ ಅಗತ್ಯವಾಗಿದೆ ಎಂದರು.ಉತ್ತಮವಾದ ಆರೋಗ್ಯವಂತ ಗಾಳಿಯನ್ನು ಸೇವನೆ ಮಾಡಬೇಕೆಂದರೆ ಒಳ್ಳೆಯ ವಾತಾವರಣ ನಿರ್ಮಾಣವಾಗಬೇಕು.  ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿದ್ದರೆ ಮಾತ್ರ ಬದುಕು ಚೆನ್ನಾಗಿರುತ್ತದೆ. ಅದಕ್ಕಾಗಿ ಸರ್ಕಾರ ಇಂದು ಆಂದೋಲನವಾಗಿ ಮಾಡಿದೆ. ಈ ಹಿಂದೆ ಪ್ರತಿ ಗ್ರಾಮದಲ್ಲಿಯೂ ಸಹ ಗೋಕಟ್ಟೆ, ಗೋಮಾಳ, ದೇವಸ್ಥಾನ ಇರುತ್ತೀತ್ತು. ಆದರೆ ಇಂದು ಅವೆಲ್ಲವೂ ನಾಶವಾಗಿ ಹೋಗಿದೆ. ಪ್ರತಿಯೊಬ್ಬ ನಾಗರೀಕನೂ ಈ ಆಂದೋಲನದಲ್ಲಿ ಪಾಲ್ಗೊಂಡು ಪರಿಸರಕ್ಕೆ ಕೊಡುಗೆಯನ್ನು ನೀಡಬೇಕು ಎಂದರು. ಇದೇ ವೇಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್‌ಬಾಬು ರೈ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಪ್ಪ, ತಿಪಟೂರಿನ ಸಹಾಯಕ ಅರಣ್ಯ ಅಧಿಕಾರಿ ಸಂತೋಷ ನಾಯಕ್, ಶಿರಾದ ಅರಣ್ಯ ಅಧಿಕಾರಿ ಅನೂಷಭಟ್, ಉಪವಲಯ ಅಧಿಕಾರಿ ರಬ್ಬಾನಿ ಸೇರಿದಂತೆ ಮತ್ತಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.