ಸಿದ್ದೇಶ್ವರ ಕೋ- ಆಪರೇಟಿವ್ ಬ್ಯಾಂಕ್ ಚುನಾವಣೆ: ಅರಕೇರಿ ಗುಂಪಿಗೆ ಜಯ

Siddeshwar Co-operative Bank Election: Victory for Arakeri Group

ಸಿದ್ದೇಶ್ವರ ಕೋ- ಆಪರೇಟಿವ್ ಬ್ಯಾಂಕ್ ಚುನಾವಣೆ:  ಅರಕೇರಿ ಗುಂಪಿಗೆ ಜಯ

ರಾಣೆಬೆನ್ನೂರು 05 :  ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದ್ಧ, ಇಲ್ಲಿನ ಎ.ಪಿ.ಎಂ.ಸಿ. ಯಾರ್ಡಿನಲ್ಲಿರುವ, ಪ್ರತಿಷ್ಠಿತ, ಸಿದ್ದೇಶ್ವರ ಕೋ -ಆಪರೇಟಿವ್ ಬ್ಯಾಂಕ್ ಲಿ. ಇದರ ಆಡಳಿತ ಮಂಡಳಿಯ ನಿರ್ದೇಶಕರ 2025- ಚುನಾವಣೆಯು ರವಿವಾರ ನಡೆಯಿತು. 1996ರಲ್ಲಿ ಪ್ರಥಮವಾಗಿ ಆರಂಭವಾದ ಈ ಸಹಕಾರಿ ತತ್ವದ ಕೋ ಆಪರೇಟಿವ್ ಬ್ಯಾಂಕ್ ಮೊದಲ ಅಧ್ಯಕ್ಷರಾಗಿ ಮಾಜಿ ಶಾಸಕ ದಿ. ವಿ. ಎಸ್‌. ಕರ್ಜಗಿ  ಅವರು, 5 ವರ್ಷ ಆಡಳಿತ ನಡೆಸಿ, ಬ್ಯಾಂಕಿನ ಭದ್ರಬುನಾದಿಗೆ ಕಾರಣಿಭೂತರಾಗಿದ್ದರು. ನಂತರ, ಅಲ್ಲಿಂದ ಈ ಚುನಾವಣೆ ಪೂರ್ವದ ವರೆಗೂ, ನಗರದ ಗಣ್ಯ ವರ್ತಕ, ಲಯನ್ಸ್‌ ಎಂ.ಜಿ.ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದ ಮಲ್ಲೇಶಪ್ಪ ಎಸ್‌. ಅರಕೇರಿ  ಅವರು, ಅವಿರೋಧ ಪರಂಪರೆಯ ಹಾದಿಯಲ್ಲಿ ಸಾಗಿ  ಇಂದಿನವರೆಗೂ  ನಿರಂತರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.  ಸ್ಪರ್ಧೆ ಸಹಜವೆಂಬಂತೆ, ಈ ಬಾರಿ ಚುನಾವಣೆ ಏರ​‍್ಪಟಟು. ಸಾಮಾನ್ಯ ಸ್ಥಾನದಲ್ಲಿ ಪುನ: ಅರಕೇರಿ ಮಲ್ಲೇಶಪ್ಪ ಶಿವಪ್ಪ ಅವರು ಸ್ಪರ್ಧಿಸಿ ಅಧಿಕ ಮತಗಳನ್ನು ಗಳಿಸಿ, ಗುಂಪಿನ ಅಧ್ಯಕ್ಷರಾಗಿ ಗೆಲುವು ಸಾಧಿಸಿದ್ದಾರೆ. ಒಟ್ಟು 13 ಸ್ಥಾನಗಳು ಹೊಂದಿರುವ ಬ್ಯಾಂಕ್, ಹಾವನೂರು ಗಂಗಮ್ಮ ಈಶ್ವರ​‍್ಪ (ಪ. ಜಾ.) ತಳವಾರ ಅಜ್ಜಪ್ಪ ಸಿದ್ದಪ್ಪ(ಪ. ಪಂ.) ಬಾಗಲರ ಭರಮಪ್ಪ ಖಂಡೆಪ್ಪ (ಹಿಂ. ಪ್ರವರ್ಗ ’ಎ ’ ಮೀಸಲು) ಹಾಗೂ ಕೆಂಡದಮಠ ಬಸವರಾಜ ಶಿವರುದ್ರಯ್ಯ   (ಹಿಂ. ಪ್ರವರ್ಗ "ಬ " ಮೀಸಲು) ಅವಿರೋಧವಾಗಿ ಆಯ್ಕೆಗೊಂಡಿದ್ದರು. ಇನ್ನುಳಿದಂತೆ 9  ಜನರ ಸದಸ್ಯರ ಸ್ಥಾನಗಳಿಗೆ  ಚುನಾವಣೆ ನಡೆದು, ಹೊನ್ನಾಳಿ ಸುಧಾ ಉಮಾಪತಿ ಮತ್ತು ಗಂಗನಗೌಡರ ವನಜಾಕ್ಷಿ ಅಶೋಕ( ಮಹಿಳಾ ಮೀಸಲು ) ಅರಕೇರಿ ಮಲ್ಲೇಶಪ್ಪ ಶಿವಪ್ಪ, ಕರೇಗೌಡರ ಜಟ್ಟೇಪ್ಪ ಸಿದ್ದನಗೌಡ, ಗೂಳಣ್ಣನವರ ಪರಮೇಶಪ್ಪ ಬಸಪ್ಪ, ಕರ್ಜಗಿ ರವಿ ವೀರ​‍್ಪ, ಚನ್ನಬಸಪ್ಪ ಸದಾಶಿವಪ್ಪ ಕಲ್ಯಾಣಿ, ಹೊಟ್ಟಿಗೌಡ್ರ ಪರಮೇಶ್ವರ​‍್ಪ ಶಂಕ್ರ​‍್ಪ ಹಾಗೂ ಬುರುಡಿಕಟ್ಟಿ ಬೂದೆಪ್ಪ ಹಾಲಪ್ಪ ಇವರುಗಳು, ಬ್ಯಾಂಕಿನ 5 ವರ್ಷಗಳ  ಆಡಳಿತ ಅವಧಿಗಾಗಿ ಗೆಲುವು ಸಾಧಿಸಿ, ವಿಜಯದ ಮಾಲೆ ಧರಿಸಿದ್ದಾರೆ. ಚುನಾವಣಾಧಿಕಾರಿ ಯಾಗಿ ಕಾರ್ಯನಿರ್ವಹಿಸಿದ, ಜಿಲ್ಲಾ ಸಹಾಯಕ ನಿಬಂಧಕರಾದ, ವಿಕ್ರಂ ಕುಲಕರ್ಣಿ  ಅವರು, ಇಂದು ಮುಂಜಾನೆ 9: ಗಂಟೆಯಿಂದ ಸಂಜೆ 4 ರವರೆಗೆ ಮತದಾನ ಪ್ರಕ್ರಿಯೆ ನಡೆದು, 592  ಸದಸ್ಯರ ಪೈಕಿ, 490 ಸದಸ್ಯರು ಮತಚಲಾಯಿಸಿದ್ದಾರೆ.ಚುನಾವಣೆ ಅತ್ಯಂತ ಸರಳ ಮತ್ತು ಶಾಂತ ರೀತಿಯಿಂದ ನಡೆದಿದ್ದು, ಮತಗಳ ಎಣಿಕೆ ನಂತರ, ಗೆಲುವು ಸಾಧಿಸಿದ ಸದಸ್ಯರ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿದರು.        ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಇತ್ತ ಹೊರಗಡೆ ಜಮಾಯಿಸಿದ್ಧ, ನೂರಾರು ವರ್ತಕರು ಗಣ್ಯರು, ಸಂಘ ಸಂಸ್ಥೆಗಳ ಮುಖಂಡರು, ಪರಸ್ಪರ ಅಭಿನಂದಿಸಿ, ಹೂಮಾಲೆ ಸಮರ​‍್ಿಸಿ ಗುಲಾಲು ಎರಚಿ ಸಂಭ್ರಮಿಸಿದರು.