ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ನಡೆಸದಂತೆ ಸಿದ್ದರಾಮಯ್ಯ ಮನವಿ

ಬೆಂಗಳೂರು, ಮೇ 25,ರಾಜ್ಯದಲ್ಲಿ ಕೊರೊನಾ ಸೋಂಕು ಗಂಭೀರ ಪ್ರಮಾಣದಲ್ಲಿ ಏರಿಕೆಯಾಗಿರುವ ಸದ್ಯದ  ಪರಿಸ್ಥಿತಿಯಲ್ಲಿ  ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳನ್ನು ನಡೆಸದಂತೆ ಕನ್ನಡ  ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ‌ಸಿದ್ದರಾಮಯ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ  ಸಚಿವ ಸುರೇಶ್‌ಕುಮಾರ್ ಪತ್ರ ಬರೆದು ಮನವಿ ಮಾಡಿದ್ದಾರೆ. ವೇಗವಾಗಿ ಕೊರೊನಾ  ಹರಡುತ್ತಿರುವುದರಿಂದ ಜೀವ ಹಾನಿ‌ಯಾಗುತ್ತಿವೆ. ಈ ಹಿಂದೆ ನಾನು ನಿಮ್ಮ ಜೊತೆ ಮಾತನಾಡಿದಾಗ  ಪರಿಸ್ಥಿತಿ ಇಷ್ಟು ಕೆಟ್ಟದಾಗಿರಲಿಲ್ಲ. ಆದರೀಗ ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದು,  ಪರೀಕ್ಷೆ ನಡೆಸುವುದು ಸೂಕ್ತ ವಲ್ಲ.ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸದ್ಯ ಪರೀಕ್ಷೆ  ನಡೆಸುವುದು ಸೂಕ್ತವಲ್ಲ.  ಹೀಗಾಗಿ ಪರೀಕ್ಷೆ ತೀರ್ಮಾನವನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ.