ಮಾನ‌ಮರ್ಯಾದೆ ಇಲ್ಲದ ಸರ್ಕಾರ: ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು, ಮಾ 23, ಸರ್ಕಾರಕ್ಕೆ ನಾಲ್ಕು  ತಿಂಗಳಿಗೆ ಮುಂಗಡ ಲೇಖಾನುದಾನ ತೆಗೆದುಕೊಂಡು ಮತ್ತೆ ಜೂನ್‌ನಲ್ಲಿ ಅಧಿವೇಶನ ಕರೆದು  ಪೂರ್ಣ ಪ್ರಮಾಣದಲ್ಲಿ ಬಜೆಟ್ ಒಪ್ಪಿಗೆ ಪಡೆಯಲು ಸೂಚಿಸಲಾಗಿತ್ತಾದಾರೆ ಸರ್ಕಾರ ಇದಕ್ಕೆ  ಒಪ್ಪಿಕೊಳ್ಳಲಿಲ್ಲ. ಇದೊಂದು ಮಾನಗೆಟ್ಟ ಸರ್ಕಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ  ಆರೋಪಿಸಿದ್ದಾರೆ.
ವಿಧಾನಸಭೆ ಸಭಾತ್ಯಾಗ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ಅವರು, ವಿಧಾನಸಭಾ ಅಧ್ಯಕ್ಷರು ರಾಜ್ಯ ಮತ್ತು ದೇಶದಲ್ಲಿ ಕೊರೊನಾ ವೇಗವಾಗಿ  ಹರಡುತ್ತಿರುವುದರಿಂದ ವಿಧಾನಸಭೆ ಮುಂದೂಡಬೇಕು. ಸಂಸತ್ತು ಕೂಡ ಮುಂದೂಡಲಾಗಿದೆ. ಹೀಗಾಗಿ  ಸದನ ಸಲಹಾ ಸಮಿತಿ ಸಭೆಯಲ್ಲಿ ಸರ್ಕಾರ ಮಾ ,27,28. ರ ವರೆಗೆ ನಡೆಸುವಂತೆ ಪ್ರಸ್ತಾಪ  ಮುಂದಿಟ್ಟಿದ್ದರು.  ಬಜೆಟ್ ಹಾಗೂ ಬೇಡಿಕೆ ಮೇಲೆ ಚರ್ಚೆಗೆ ಎರಡೂ ಒಂದೆ ಬಾರಿ ಇಟ್ಟಿದ್ದರು. ಅದಕ್ಕೆ  ಸಂಬಂಧ ಪಟ್ಟ ಸಚಿವರು ಉತ್ತರ ಕೊಡಬೇಕು. ಹೀಗಾಗಿ ಸಮಯ ಬಹಳ ಬೇಕು.  ಕೊರೊನಾ  ವೈರಸ್ ಹರಡುವಿಕೆ ಜೋರಾಗಿರುವುದರಿಂದ ಅಧಿವೇಶನವನ್ನು ನಡೆಸುವುದು ಸೂಕ್ತ ಅಲ್ಲ ಎನ್ನುವ  ಕಾರಣಕ್ಕೆ ಬಜೆಟ್ ಗೆ ಒಪ್ಪಿಗೆ ಕೊಡುತ್ತೇವೆ ಸದನ ಮುಂದೂಡಿ ಎಂದು ಸಲಹೆ  ನೀಡಿದೆವು. ಆದರೆ
ಅವರು ಅನೇಕ ಬಿಲ್ ಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ. ಇದು ಸರಿಯಲ್ಲ ಎಂದು ಖಡಕ್ ಆಗಿ‌ ಹೇಳಿದರು.
ಗ್ರಾಮೀಣಾಭಿವೃದ್ದಿ  ಪಂಚಾಯತ್ ರಾಜ್ ಬಿಲ್ ತಿದ್ದುಪಡಿ ಮಾಡಿ ದುರ್ಬಲಗೊಳಿಸಲು ತೀರ್ಮಾನಿಸಿದ್ದಾರೆ. ಐದು  ವರ್ಷ ಮೀಸಲಾತಿ ಮಾಡುವುದರಿಂದ ತಳ ವರ್ಗದ ನಾಯಕತ್ವ ಬೆಳೆಯುವುದಿಲ್ಲ. ಹಾಗಾಗಿ 10 ವರ್ಷ  ಇರಬೇಕು ಎನ್ನುವುದು ನಮ್ಮ ವಾದ. ಐದು ವರ್ಷಕ್ಕೆ ಇಳಿಸುವುದಕ್ಕೆ ನಮ್ಮ ವಿರೋಧ ಇದೆ.  ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಧಿ ಐದು ವರ್ಷ ಇರಬೇಕು ಎಂದು ತೀರ್ಮಾನ ಮಾಡಿದ್ದೆವು.  ಅದೆಲ್ಲವನ್ನೂ ಬದಲಾವಣೆ ಮಾಡಲು ಹೊರಟಿದ್ದಾರೆ. ನಾವು ಅದನ್ನು ವಿರೋಧ ಮಾಡುತ್ತೇವೆ.  ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ದುರ್ಬಲಗೊಳಿಸಲು ಹೊರಟಿದ್ದಾರೆ.  ನಾವು  ವಿಕೇಂದ್ರೀಕರಣದಲ್ಲಿ ನಂಬಿಕೆ ಇಟ್ಟಿದ್ದೇವೆ. ಗಾಂಧೀಜಿಯವರು ಅದನ್ನೇ ಹೇಳಿದ್ದರು.   ಅವರು ಕೇಂದ್ರೀಕೃತ ಅಧಿಕಾರದಲ್ಲಿ ನಂಬಿಕೆ ಇಟ್ಟಿದ್ದಾರೆ. ಬಿಜೆಪಿಯವರು  ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ ಅವರು ಸರ್ವಾಧಿಕಾರದ ಮೇಲೆ  ನಂಬಿಕೆ.ಇಟ್ಟಿದ್ದಾರೆ. ತೀರ ತುರ್ತು ವಿಧೆಯಕಗಳಿದ್ದರೆ ಸುಗ್ರೀವಾಜ್ಞೆ ಹೊರಡಿಸುವಂತೆ  ಸಲಹೆ ನೀಡಿದ್ದೆವು.  ಆದರೆ, ಕಾನೂನು ಸಚಿವರು ಸದನಕ್ಕಿಂತ ವಿಧೇಯಕ ಮಂಡಿಸಲು  ಮುಂದಾದರು ನಾವು ಅದನ್ನು ವಿರೋಧಿಸಿದೆವು. ಮುಖ್ಯಮಂತ್ರಿ ನಮ್ಮ ಮನವಿಗೆ ಒಪ್ಪಿದ್ದರು.  ಆದರೆ ಅವರು ಸದನದಲ್ಲಿ ಇರಲಿಲ್ಲ. ಅವರನ್ನು ಕರೆಯಿಸಿ ಎಂದರೆ ಅವರು ಕರೆಸಲಿಲ್ಲ.ಇದು ಮಾನ  ಗೆಟ್ಟ ಸರ್ಕಾರ ಅವರಿಗೆ ಮರ್ಯಾದೆಯಿಲ್ಲ ಎಂದು ಸಿದ್ದರಾಮಯ್ಯ ಸಿಡುಕಿದರು.
ಸ್ಪೀಕರ್  ನಿರ್ಧಾರವನ್ನು ಸದನದಲ್ಲಿ ಜಾರಿಗೆ ತರಬೇಕು. ಆದರೆ ಸ್ಪೀಕರ್ ಕಾಗೇರಿ ಅವರು  ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ.  ಪಕ್ಷಪಾತಿಯಾಗಿ ಕಾರ್ಯ  ನಿರ್ವಹಿಸುತ್ತಿದ್ದಾರೆ.
ಕೊರೊನಾ ಇರುವಾಗ ಚುನಾವಣೆ ನಡೆಸಬಾರದು ಎಂದು ಹೇಳಿದ್ದೆವು  ಅದಕ್ಕೆ ಅವರು ಒಪ್ಪಿಕೊಂಡಿದ್ದರು. ಆದರೆ ಈಗ ಅದಕ್ಕೆ ವಿರುದ್ಧವಾಗಿ  ನಡೆದುಕೊಳ್ಳುತ್ತಿದೆ. ಇವರಿಗೆ ಮಾನ ಮರ್ಯಾದೆ ಇಲ್ಲ. ಭಂಡತನದಿಂದ  ನಡೆದುಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರಿಗೆ ವಿರೋಧ  ಪಕ್ಷಗಳಿಗೆ ಬೆಂಬಲ ಕೊಡುತ್ತಾರೆ. ಅವರು ಇದೆ ಭಂಡತನ ಪ್ರದರ್ಶನ ಮಾಡಿದರೆ ನಾವು ಜನರ  ಮುಂದೆ ಈ ವಿಷಯಗಳನ್ನು ತೆಗೆದುಕೊಂಡು ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು.ಯುಗಾದಿ ಹಬ್ಬಕ್ಕೆ ಜನರು ಹೂ ಹಣ್ಣು ತರಕಾರಿ ಹಬ್ಬದ ದಿನಸಿ ತರಲು ಹೋದವರಿಗೆ ಲಾಠಿ ಚಾರ್ಜ್ ಮಾಡುತ್ತಿದ್ದಾರೆ. ಕಾನೂನು  ಸುವ್ಯವಸ್ಥೆ ಕಾಪಾಡಲು 144 ಹಾಕುವುದು ಬೇರೆ, ಕೊರೊನಾ ಸಲುವಾಗಿ 144 ಹಾಕಿದಾಗ ಜನರಿಗೆ  ಮನವರಿಕೆ ಮಾಡಿಕೊಡಬೇಕು. ಈ ಬಗ್ಗೆ ಡಿಜಿಪಿ. ಸಿಎಸ್ ಗೆ ಫೋನ್ ಮಾಡಿ ಮಾತನಾಡಿದ್ದೇನೆ.  ವ್ಯಾಪಾರ ಮಾಡಲು ಸಮಯ ನೀಡಬೇಕು. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. 15  ಹಣಕಾಸು ಆಯೋಗದ ಶಿಫಾರಸ್ಸಿನಲ್ಲಿ ರಾಜ್ಯಕ್ಕೆ ಬರುವ ಅನುದಾನ ಕಡಿಮೆಯಾಗಿದೆ.  ಮೂರು  ವರ್ಷದಲ್ಲಿ ಮತ್ತೆ ಹತ್ತು ವರ್ಷ ಹಿಂದೆ ಹೋಗುತ್ತದೆ ಎಂದು ಭವಿಷ್ಯ ನುಡಿದರು. ಕೊರೊನಾ  ನಿಯಂತ್ರಿಸಲು ಯಾವುದೇ ಮುಂಜಾಗ್ರತೆ ಕೈಗೊಂಡಿಲ್ಲ. ಸ್ಯಾನಿಟೈಸರ್,  ವೆಂಟಿಲೇಟರ್ ,  ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪೋಲೀಸರು ಕುರಿ ಕಾಯೊ ತೋಳ ಅಂದರೆ ಸಂಬಳವೇ ಬೇಡ ಎನ್ನುವಂತೆ ಮಾಡುತ್ತಿದ್ದಾರೆ ಎಂದು ಮಾರ್ಮಿಕವಾಗಿ ಸಿದ್ದರಾಮಯ್ಯ ಟೀಕಿಸಿದರು.