ಗುಳೇದಗುಡ್ಡ 12: ಪ್ರಸಕ್ತ ಸಾಲಿನ ಬಜಟ್ ಅಧಿವೇಶನ ಆರಂಭವಾಗುವುದಕ್ಕಿಂತ ಮುಂಚಿತವಾಗಿಯೇ ರಾಜ್ಯದ ಮಾಜಿ ಸಿಎಂ, ಬಾದಾಮಿ ಮತಕ್ಷೇತ್ರದ ಶಾಸಕರೂ ಆಗಿರುವ ಸಿದ್ದರಾಮಯ್ಯ 2020-21 ರ ರಾಜ್ಯ ಬಜಟ್ನಲ್ಲಿ ತಮ್ಮ ಕ್ಷೇತ್ರ್ರಾಭಿವೃದ್ಧಿಗೆ ಅನುದಾನ ತೆಗೆದಿರಿಸುವಂತೆ ಆಹ್ರಹಿಸಿ ಸಿಎಂ ಯಡಿಯೂರಪ್ಪ ಅವರಿಗೆ ಸುಮಾರು 17 ಪತ್ರಗಳನ್ನು ಬರೆದು ಪತ್ರ ಕ್ರಾಂತಿಯೇ ಮಾಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ತಾವು ಆಯ್ಕೆಯಾದ ಬಾದಾಮಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಈ ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ಬರೆದಿದ್ದೂ ಅವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸುಮಾರು 17 ಪತ್ರಗಳು ಕೋಟ್ಯಾಂತರ ರೂ. ಅನುದಾನ ಬಾದಾಮಿ ಮತಕ್ಷೇತ್ರದ ಅಭಿವೃದ್ಧಿಗೆ ಪ್ರಸಕ್ತ ಸಾಲಿನ ಬಜಟ್ನಲ್ಲಿ ಘೋಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಇಷ್ಟೊಂದು ಅನುದಾನ ಕೇಳಿ ಪತ್ರ ಬರೆದವರೆಂದರೆ ಸಿದ್ದರಾಮಯ್ಯರೊಬ್ಬರೇ ಎಂದು ಮತಕ್ಷೇತ್ರದ ಜನ ಹೇಳುತ್ತಾರೆ.
ಪತ್ರಗಳ ಪಟ್ಟಿ: ಬಾದಾಮಿ ನಗರಕ್ಕೆ ಸರ್ಕಾರಿ ತಾಂತ್ರಿಕ ಕಾಲೇಜು ಸ್ಥಾಪನೆ, ಗುಳೇದಗುಡ್ಡ ನಗರಕ್ಕೆ ಹೈನು ವಿಜ್ಞಾನ ಮಹಾವಿದ್ಯಾಲಯ, ಕೆರೂರ ನಗರಕ್ಕೆ ಸಿಟಿಸರ್ವೆ ಕಚೇರಿ ತೆರೆಯಲು, ಬಾದಾಮಿ ನಗರಕ್ಕೆ ವಾಣಿಜ್ಯ ಬಹುಮಹಡಿ ಕಟ್ಟಡ ಸ್ಥಾಪಿಸಲು, ಗುಳೇದಗುಡ್ಡದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪಿಸಲು, ಕೆರೂರ ನಗರಕ್ಕೆ ಒಳಚರಂಡಿ ನಿರ್ಮಣ, ಕೆರೂರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ 525 ಕೋಟಿ ಅನುದಾನ ಮೀಸಲಿರಿಸಲು, ಬಾದಾಮಿ ಕ್ಷೇತ್ರದಲ್ಲಿ ಬ್ರಿಡ್ಜ ಕಂ ಬ್ಯಾರೇಜ್ ಹಾಗೂ ಕೆರೆ ತುಂಬಿಸುವ ಯೋಜನೆ ಅನುಷ್ಠಾನಕ್ಕೆ 90 ಕೋಟಿ ರೂ. ಅನುದಾನ ಘೋಷಿಸಲು, ಗುಳೇದಗುಡ್ಡ ನಗರಕ್ಕೆ ಜವಳಿ ಪಾರ್ಕ ಸ್ಥಾಪಿಸಲು 50 ಕೋಟಿ ರೂ. ಅನುದಾನ ಮೀಸಲಿರಿಸಲು, ಬಾದಮಿ, ಗುಳೇದಗುಡ್ಡ, ಮಹಾಕೂಟ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಟ್ರೀ ಪಾರ್ಕ ಸ್ಥಾಪಿಸಲು 100 ಕೋಟಿ ರೂ. ಅನುದಾನ ಘೋಷಿಸಲು, ಬಾದಾಮಿ ಕ್ಷೇತ್ರದ ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರದ ಕಾರ್ಯರೂಪಕ್ಕೆ 25 ಕೋಟಿ ರೂ. ಅನುದಾನ ಮೀಸಲಿರಿಸಲು, ಬಾದಾಮಿ, ಪಟ್ಟದಕಲ್, ಬನಶಂಕರಿ, ಮಹಾಕೂಟ ಐತಿಹಾಸಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ 1000 ಕೋಟಿ ರೂ. ಅನುದಾನ ಮೀಸಲಿರಿಸಲು, ಗುಳೇದಗುಡ್ಡದಲ್ಲಿ ಕೈಗಾರಿಕಾ ಕೇಂದ್ರ ಸ್ಥಾಪಿಸಲು, ಬಾದಾಮಿ ನಗರಕ್ಕೆ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಹಾಗೂ ಗುಳೇದಗುಡ್ಡ ನಗರಕ್ಕೆ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಘಟಕ ಸ್ಥಾಪಿಸಲು ಹೀಗೆ ಸುಮಾರು 17 ಪತ್ರಗಳನ್ನು ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಬರೆದು ಬಜೆಟ್ದಲ್ಲಿ ಅನುದಾನ ಘೋಷಣೆಗೆ ಆಗ್ರಹಿಸಿದ್ದಾರೆ.
ಇಷ್ಟು ಅನುದಾನ ಅನುಮಾನ! ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಮತಕ್ಷೇತ್ರದ ಅಭಿವೃದ್ಧಿಗೆ ಸಹಸ್ರ ಕೋಟಿ ಅನುದಾನ ಕೇಳಿದ್ದಾರಾದರೂ ಅದನ್ನು ಪ್ರಸಕ್ತ ಸಾಲಿನಲ್ಲಿ ಘೋಷಿಸುವುದು ಅನುಮಾನವೇ ಎಂದು ಜನ ಹೇಳುತ್ತಾರೆ. ಬಿಜೆಪಿ ಸಕರ್ಾರ ಕಾಂಗ್ರೇಸ್ನ ಮಾಜಿ ಸಿಎಂ ಅವರ ಮಾತು ಕೇಳುವುದು ಹಾಗೂ ಅಷ್ಟು ಗಜ ಗಾತ್ರದ ಅನುದಾನ ಒಂದೇ ಕ್ಷೇತ್ರಕ್ಕೆ ನೀಡುವುದು ಅಸಂಭವ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿವೆ. ಮಾಜಿ ಸಿಎಂ ಕೇಳಿದಷ್ಟು ಅನುದಾನ ಪ್ರಸಕ್ತ ಸಾಲನ ಬಜೆಟ್ನಲ್ಲಿ ಸಿಎಂ ಯಡಿಯೂರಪ್ಪ ತೆಗೆದಿರಿಸುವರೆಂಬುದು ಅನುಮನವಾದರೂ ಕಾದು ನೋಡಬೇಕಷ್ಟೇ!