ಹಾರೂಗೇರಿ 07: ಶಿಕ್ಷಣ ಕ್ಷೇತ್ರಕ್ಕೆ ಶೇ.10ರಷ್ಟು ಆಯವ್ಯಯದಲ್ಲಿ ಕೊಡಮಾಡಿದ್ದು ಸ್ವಾಗತಾರ್ಹ. ಬಹುದಿನಗಳ ಬೇಡಿಕೆಯಾದ ಚಿಕ್ಕೋಡಿ ಜಿಲ್ಲೆ ಬಜೆಟ್‌ನಲ್ಲಿ ಘೋಷಣೆ ನೀರೀಕ್ಷಿಸಲಾಗಿತ್ತು. ಆದರೆ ಮುಖ್ಯಮಂತ್ರಿಗಳ ರಾಜಕೀಯ ಇಚ್ಛಾಶಕ್ತಿ ಕೊರತೆ ಬಜೆಟ್‌ನಲ್ಲಿ ಎದ್ದು ಕಾಣುತ್ತಿದೆ. ಅಭಿವೃದ್ಧಿ ಹೆಸರಲ್ಲಿ ಬಜೆಟ್ ಗಾತ್ರದ ಒಂದು ನಾಕಾಂಶದಷ್ಟು ಸಾಲಕ್ಕೆ ಮೊರೆಹೋದದ್ದು, ಭವಿಷ್ಯದ ಕರ್ನಾಟಕ ಆರ್ಥಿಕ ದೃಷ್ಠಿಯಿಂದ ಆತಂಕಕಾರಿಯಾಗಿದೆ.