ಹುಬ್ಬಳ್ಳಿ ಫೆ.20 : ಸಂತ ಕವಿ ಸರ್ವಜ್ಞರವರ ತ್ರಿಪದಿ ಪುಸ್ತಕದಲ್ಲಿ ಬರೆದಿರುವ ವಚನಗಳನ್ನು ಅಧ್ಯಯನ ಮಾಡಿ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಜೊತೆಗೆ ಮಕ್ಕಳಲ್ಲಿ ಸಂತ ಕವಿ ಸರ್ವಜ್ಞ ವಚನಗಳನ್ನು ಅಳವಡಿಸಿಕೊಳಬೇಕು ಎಂದು ಶಿಕ್ಷಕರಾದ ಎಲ್.ಸಿ. ಹೊಸಮನಿ ಮಾತನಾಡಿದರು.
ಇಂದು ತಾಲೂಕು ಆಡಳಿತ ಸೌಧದ ತಹಶೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ಹುಬ್ಬಳ್ಳಿ ತಾಲೂಕು ಆಡಳಿತದಿಂದ ಶ್ರೀ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದ ಉಪನ್ಯಾಸ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಸಮಾಜ ಮಾನವಿತೆ ಮೌಲ್ಯಗಳಿಂದ ಬಹಳಷ್ಟು ದೂರ ಆಗುತ್ತಿದೆ. ಶ್ರೀ ಸಂತ ಕವಿ ಸರ್ವಜ್ಞ ವಚನಗಳನ್ನು ಅಧ್ಯಯನ ಮಾಡಿ ನಮ್ಮ ಜೊತೆಗೆ ಮಕ್ಕಳಲ್ಲಿ ಸಹಭಾಗಿತ್ವವನ್ನು ಮತ್ತು ಸಂಸ್ಕೃತಿ ನೀಡಬೇಕು. ಸಮಾಜಕ್ಕೆ ನಮ್ಮದೆಯಾದ ನೈತಿಕ ಮೌಲ್ಯಗಳನ್ನು ಕೊಡುಗೆ ನೀಡಬೇಕು ಎಂದು ಹೇಳಿದರು.
ಕುಂಭಕಲ್ಪ ಸಮಾಜದ ಅಧ್ಯಕ್ಷರಾದ ಕೆ. ಬಸವರಾಜಪ್ಪ ಮಾತನಾಡಿ ಮಹಾನಾಯಕರ ಜಯಂತಿ ಮಾಡುವುದಲ್ಲದೆ . ಅವರ ನಡೆ, ನುಡಿ ತತ್ವ ,ಆದರ್ಶಗಳನ್ನು ದಿನ ನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಾಗೆ ಅದರ ಜೊತೆಗೆ ಶಿಕ್ಷಣ ಪಡೆದು ಮುಂದಿನ ಯುವ ಪಿಳಗಿಗೆ ಒಳ್ಳೆ ಶಿಕ್ಷಣ ನೀಡುವ ಕೆಲಸ ಮಾಡಬೇಕು. ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. . ಶ್ರೀ ಸಂತ ಕವಿ ಸರ್ವಜ್ಞ ಅವರ ಭಾವಚಿತ್ರಕ್ಕೆ ಪುಷ್ಾರೆ್ಪಣ ಅರ್ಿಸಿ, ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಕಂದಾಯ ಇಲಾಖೆಯ ಗಣೇಶ ಹುಬ್ಬಳ್ಳಿಕರ ಸಮಾಜದ ಮುಖಂಡರಾದ ಎಮ್.ಎಮ್. ಗೌಡ್ರ , ಪರುಶುರಾಮ ಸೋಮನಕೊಪ್ಪ, ಚಂದ್ರಶೇಖರ ಹುಡೆದರ, ಅಶೋಕ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಇನ್ನಿತರರು ಉಪಸ್ಥಿತರಿದ್ದರು. ಜ್ಯೋತಿ ಕುಂಬಾರ ನಿರೂಪಣೆ ಮಾಡಿದರು, ವಿನಾಯಕ ವಂದಿಸಿದರು.