ಹುಬ್ಬಳ್ಳಿ 19: ಸಿದ್ಧಾರೂಢರ ಬಾಲ್ಯ, ಸಾಧಕ ಅವಸ್ಥೆ ಮತ್ತು ಸಿದ್ಧಾವಸ್ಥೆಗಳೆಲ್ಲವೂ ಸಮಚಿತ್ತ ಭಾವಗಳಿಂದ ಕೂಡಿದ್ದು “ಸಂಭವಾಮಿ ಯುಗೆ ಯುಗೇ” ಎಂಬ ಗೀತಾಚಾರ‌್ಯರ ನುಡಿಯಂತೆ ಅವತರಿಸಿ ಬಂದ ಸದ್ಗುರು ಸಿದ್ಧಾರೂಢರು ಸದಾ ಬಡವರ, ದೀನದಲಿತರ ಕಲ್ಯಾಣವನ್ನೇ ಬಯಸುತ್ತ ಇಡೀ ದೇಶ ಸುತ್ತಿದವರು. ಕೆಲ ಮತ್ಸರ ಬುದ್ಧಿಯ ಜನ ಲಿಂಗವಿಲ್ಲದ ಭವಿಯ ಮಠಕ್ಕೆ ಹೋಗಬಾರದೆಂದು ತಡೆದರೂ ಅನೇಕ ಮುಗ್ಧ, ಸರಳ ಮನಸ್ಸಿನ ಶಿಷ್ಯವೃಂದದವರು ಬಂದಾಗ ಅವರಿಗೆಲ್ಲ ಅದ್ವೈತ ಸಿದ್ಧಾಂತದ ತತ್ವವನ್ನು ಬೋಧಿಸಿ ಮುಕ್ತಿ ಮಾರ್ಗ ತೋರಿಸುತ್ತಿದ್ದುದು ಇವರ ವೈಶಿಷ್ಟ್ಯವಾಗಿತ್ತು ಹೀಗೆ ಬಂದ ಭಕ್ತರಿಗೆಲ್ಲ ಅವರು ಭಗವಂತನಾಗಿದ್ದರು ಎಂದು ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಡಾಽಽ ಅಮೃತ ಯಾರ್ದಿ ಅಭಿಪ್ರಾಯ ವ್ಯಕ್ತಪಡಿಸಿದರು.
ಧಾರವಾಡದ ಸಾಹಿತ್ಯಿಕ ಸಂಘಟನೆ “ಅನ್ವೇಷಣಕೂಟ”ವು ಸಾಧನಕೇರಿಯ ಚೈತ್ರದ ಸಭಾಂಗಣದಲ್ಲಿ ದಿ. 18ರಂದು ಹಮ್ಮಿಕೊಂಡಿದ್ದ “ಕಾರುಣ್ಯಸಿಂಧು ಸದ್ಗುರು ಶ್ರೀ ಸಿದ್ಧಾರೂಢರ ಜೀವನಲೀಲೆಗಳು” ಎಂಬ ವಿಷಯ ಕುರಿತ ಕಾರ‌್ಯಕ್ರಮದಲ್ಲಿ ಡಾ. ಅಮೃತ ಯಾರ್ದಿಯವರು ಮುಖ್ಯ ಅತಿಥಿಗಳಾಗಿ ಬಂದು ಮಾತನಾಡುತ್ತಿದ್ದರು. ಅವರು ಮುಂದುವರಿದು ಮಾತನಾಡಿ ಕೆಲ ದುರಾಭಿಮಾನಿಗಳು ಮೈಮೇಲೆ ಜನಿವಾರವಿಲ್ಲ, ಲಿಂಗವಿಲ್ಲವೆಂದೆಲ್ಲ ಹಂಗಿಸುತ್ತ ಕಲ್ಲುಗಳಿಂದ ಹೊಡೆದರೂ ಕೂಡ ವಿಚಲಿತರಾಗದೇ ಸ್ತಿತ ಪ್ರಜ್ಞರಾಗಿದ್ದ “ಓಂ ನಮಃ ಶಿವಾಯ” ಎಂಬ ಮಂತ್ರವನ್ನು ಉಚ್ಚ-ನೀಚ ಭಾವವಿಲ್ಲದೇ ಸಕಲರಿಗೂ ಬೋಧಿಸುತ್ತಿದ್ದುದು ಹಾಗೂ ಶಿಷ್ಯವೃಂದದ ಅಂತಃಕರಣ ಶುದ್ಧಿ ಮಾಡುತ್ತಿದುದು ಇವರ ತತ್ವ ಪ್ರಚಾರದ ಮಾರ್ಗವಾಗಿತ್ತು ಎಂದು ಡಾಽಽ ಅಮೃತ ಯಾರ್ದಿಯವರು ಸಿದ್ಧಾರೂಢರ ವಿವಿಧ ಜೀವನಲೀಲೆಗಳನ್ನು ಸ್ಮರಿಸಿಕೊಂಡರು.
ಕಾರ‌್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಆಡಳಿತಾತ್ಮಕ ಕುಲಸಚಿವ ಡಾಽಽ ಮಹಾದೇವ ಎನ್. ಜೋಶಿಯವರು ಮಾತನಾಡಿ ಪೂರ್ವಜನ್ಮದ ಸುಕೃತಗಳಿಂದಾಗಿ, ಅವತಾರಿಗಳಾಗಿ ಬಂದ ಸಂತ ಮಹಾಂತರನ್ನು ಪರೀಕ್ಷಿಸಬಾರದು. ಜೀವನದಲ್ಲಿ ಯಾವುದೂ ಪುಕ್ಕಟೆ ಸಿಗುವದಿಲ್ಲವೆಂಬುದನ್ನು ಮನಗಂಡು ಸೂಕ್ತ ಅರ್ಹತೆ ಪಡೆದು ಸಾರ್ಥಕ ಜೀವಿಗಳಾಗುವದೇ ನಿಮ್ಮ ಜೀವನದ ಗುರಿಯಾಗಬೇಕು ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಇತ್ತೀಚೆಗೆ ನಿಧನರಾದ ವಿದ್ಯಾವಾಚಸ್ಪತಿ, ಬಹುಭಾಷಾ ಪರಿಣಿತ, ಹಿರಿಯ ಸಾಹಿತಿ ಡಾಽಽ ಪಂಚಾಕ್ಷರಿ ಹಿರೇಮಠ ಅವರ ಸ್ಮರಣೆಯಲ್ಲಿ ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ ಶ್ರದ್ಧಾಂಜಲಿ ಗೊತ್ತುವಳಿ ಮಂಡಿಸಿದರು. ಎರಡು ನಿಮಿಷ ಮೌನ ಆಚರಿಸಲಾಯಿತು.
ಐಶ್ವರಾ್ಯ ಯಾರ್ದಿ-ನವಲಗುಂದ ಪ್ರಾರ್ಥಿಸಿದರು. ನರಸಿಂಹ ಪರಾಂಜಪೆ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ವೆಂಕಟೇಶ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ರಾಜೀವ ಪಾಟೀಲ ಕುಲಕರ್ಣಿ ವಂದಿಸಿದರು.
ಗಣ್ಯರಾದ ಡಾಽಽ ರುದ್ರಣ್ಣ ಚಿಲುಮಿ, ಡಾಽಽ ಬಾಳಣ್ಣ ಶೀಗಿಹಳ್ಳಿ, ರಾಜಶೇಖರ ಜಾಡರ, ಶ್ರೀನಿವಾಸ ವಾಡಪ್ಪಿ, ರಮೇಶ ಇಟ್ನಾಳ, ಎಸ್.ಬಿ. ದ್ವಾರಪಾಲಕ, ಕೆ.ಎಮ್. ಅಂಗಡಿ, ಮಹಾಬಲೇಶ್ವರ ಸಿಂದಗಿ, ಅವಿನಾಶ ರಸಾಳಕರ, ವೆಂಕಟೇಶ ಕಳಸಾಪುರ, ಎಸ್.ಎಸ್. ಬಂಗಾರಿಮಠ, ಶ್ರೀನಿವಾಸ ಹುದ್ದಾರ, ಅನಂತ ಸಿದ್ಧೇಶ್ವರ, ಜಿ.ಆರ್. ಭಟ್ಟ, ಡಾಽಽ ಕೃಷ್ಣ ಕಟ್ಟಿ, ನಿರಂಜನ ನವಲಗುಂದ, ಕೆ.ಸಿ. ಪುರಾಣಿಕಮಠ, ಜಿ.ಎಸ್. ಜೋಶಿ, ಬದರೀ ವಿಶಾಲ ಪರ‌್ವತೀಕರ, ತಾ.ಭ. ಚವ್ಹಾಣ, ಮನೋಹರ ಮೇಗಾಡಿ, ಪರಮೇಶ್ವರ ಎಂ.ಎಸ್. ಡಿ.ವಿ. ಭಂಡಿವಾಡ, ಮಾನಸಿ ಯಾರ್ದಿ, ಸರೋಜಾ ಕುಲಕರ್ಣಿ, ಸೀಮಾ ಪರಾಂಜಪೆ, ಶಾರದಾ ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು.