ಶ್ರಾವಣ ಮಂಗಲ: ಜಡಿಮಠದಲ್ಲಿ ವಿಶೇಷ ಪೂಜೆ
Shravan Mangala: Special puja at Jadimath
ದೇವರಹಿಪ್ಪರಗಿ 23: ಪಟ್ಟಣ ಜಡಿಮಠದಲ್ಲಿ ಶನಿವಾರದಂದು ಶ್ರಾವಣ ಮಾಸದ ಅಭಿಷೇಕ ಮಂಗಲ ಸಮಾರೋಪ ಸಮಾರಂಭ ನಡೆಯಿತು.
ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳು ಪ್ರತಿನಿತ್ಯ ಬೆಳಗಿನ ಜಡಿ ಮಠದ ಜಡಿಸಿದ್ದೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಡೆ ಮಠದ ಜಡಿ ಸಿದ್ದೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ, ಪರದೇಶಿ ಮಠದ ಶಿವಯೋಗಿ ಮಹಾಸ್ವಾಮಿಗಳು ದೇವರಿಗೆ ಪೂಜೆ ಹಾಗೂ ಬಿಲ್ವಪತ್ರೆ ಸಮರೆ್ಣ ಮಾಡುವ ಮೂಲಕ ಕ್ಷೀರಾಭಿಷೇಕ ಮಾಡಿದರು.
ಬೆಳಗ್ಗೆಯಿಂದಲೇ ಭಕ್ತರು ಶ್ರೀಮಠಕ್ಕೆ ಆಗಮಿಸಿ ತೆಂಗು, ಪುಷ್ಪಮಾಲೆ, ಊದುಬತ್ತಿ, ಕಪೂರ ದೇವರಿಗೆ ಅರ್ಿಸುವ ಮೂಲಕ ಕ್ಷೀರಾಭಿಷೇಕದ ದರ್ಶನ ಪಡೆದರು ಹಾಗೂ ಶ್ರೀಮಠದಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪ.ಪಂ ಸದಸ್ಯರಾದ ಶಾಂತಯ್ಯ ಜಡಿಮಠ, ಮುಖಂಡರುಗಳಾದ ಚನ್ನವೀರ್ಪ ಕುದರಿ, ಬಂಡೆಪ್ಪ ಗೌಡ ದಿಂಡವಾರ, ಸಿದ್ದು ಆನಂದಿ, ಶಾಂತಗೌಡ ಯರನಾಳ, ಉಮಾಕಾಂತ ಸೊನ್ನಾದ, ಶಾಬಾದಿ ಸರ್, ಗಣೇಶ ಹಿರೇಮಠ, ಚಂದ್ರಕಾಂತ ನಂದಿ, ಶಿವಪ್ಪ ವಸ್ತ್ರದ,ಆನಂದ ಜಡಿಮಠ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು, ಮಹಿಳೆಯರು ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.
ಪತ್ರಕರ್ತ ಪಟ್ಟಣಶೆಟ್ಟಿಗೆ ಸ್ವಾಮೀಜಿಗಳಿಂದ ಸನ್ಮಾನ
ಪಟ್ಟಣದ ಜಡಿಮಠದ ಆವರಣದಲ್ಲಿ ಶನಿವಾರದಂದು ನಡೆದ ಶ್ರಾವಣ ಮಾಸದ ಅಭಿಷೇಕದ ಮಂಗಲ ಸಮಾರಂಭದಲ್ಲಿ ಜಡಿ ಸಿದ್ದೇಶ್ವರ ಶಿವಾಚಾರ್ಯರು ಹಾಗೂ ಪರದೇಶಿ ಮಠದ ಶಿವಯೋಗಿ ಮಹಾಸ್ವಾಮಿಗಳು ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಶಸ್ತಿ ಪಡೆದ ಪತ್ರಕರ್ತ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿ, ಆಶೀರ್ವದಿಸಿದರು. ಸಂದರ್ಭದಲ್ಲಿ ಪಟ್ಟಣದ ಪ್ರಮುಖರು, ಗಣ್ಯರು ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 