ವೀರ ಮರಣ ಹೊಂದಿದ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಬೆಳಗಾವಿ 14: ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಬೆಳಗಾವಿ ವತಿಯಿಂದ ಫುಲ್ವಾಮ್ದಲ್ಲಿ ಉಗ್ರರ ದಾಳಿಗೆ ವೀರ ಮರಣ ಹೊಂದಿದ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನಗರದ ಎಸ್ಜಿಬಿಐಟಿ ಇಂಜೆನೇರಿಂಗ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. 

ಈ ಕಾರ್ಯಕ್ರಮವನ್ನು ಉದ್ದೇಶಿಸಿ ನಗರ ಸಂಘಟನಾ ಕಾರ್ಯದಶರ್ಿ ಸುರೇಶ ಜಂಗೋಣಿ ಮಾತನಾಡಿ, ದೇಹ ವೀರುವುದು ದೇಶ ಪ್ರೇಮಕ್ಕೆ ಹೋರತು ದೇಹ ಪ್ರೇಮಕ್ಕಲ್ಲ, ಇಂದಿನ ಯುವಕರಾದ ನಾವೆಲ್ಲ ದೇಶದ ಬಗ್ಗೆ ಚಿಂತನೆಯೊಂದಿಗೆ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಬೇಕಾಗಿದೆ. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಭಾರತ ದೇಶವನ್ನು ವಿಶ್ವ ಗುರುವನ್ನಾಗಿಸಲು ನಾವೇಲ್ಲರು ಕೈ ಜೋಡಿಸೋಣ ಎಂದು ಹೇಳಿದರು.  ಪ್ರಾಂಶುಪಾಲರಾದ ಎಸ್.ವಿ ಈಟಿ ಅವರು ಮಾತನಾಡಿ, ಫೆಬ್ರವರಿ 14 ಭಾರತ ದೇಶಕ್ಕೆ ಕರಾಳ ದಿನ. ಅಂದು 40ಕ್ಕು ಅಧಿಕ ಯೋಧರು ಮಡಿದರು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿ ವಿದ್ಯಾಥರ್ಿಗಳಿಗೆ ಪಠ್ಯದೊಂದಿಗೆ ಇಂತಹ ದೇಶ ಭಕ್ತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಎಂದರು. ಜಿಲ್ಲಾ ಸಹ ಸಂಚಾಲಕ ಶಿವಾನಂದ ಕಾಂಬ್ಳೆ, ಅಶ್ವಿನ ಉಮನಾಬಾದಿಮಠ, ಗುರು, ಭುಷಣ, ಬನ್ನೆಪ್ಫ, ಐಶ್ವರ್ಯ ಸೇರಿದಂತೆ ಕಾಲೇಜಿನ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.