ಫಿಲಿಡೆಲ್ಫಿಯಾದಲ್ಲಿ ಗುಂಡಿನ ದಾಳಿ : 6 ಜನರಿಗೆ ಗಾಯ

 ಮಾಸ್ಕೋ, ಅ 14:    ಅಮೆರಿಕದ ಪೆನಿಸ್ಲೇವೆನಿಯಾದಲ್ಲಿನ ಫಿಲಿಡೆಲ್ಫಿಯಾದಲ್ಲಿ ಬಂದೂಕುಧಾರಿಯೊಬ್ಬರ ಗುಂಡು ಹಾರಿಸಿದ್ದು ಆರು ಜನ ಗಾಯಗೊಂಡಿದ್ದಾರೆ. ಭಾನುವಾರ ಸ್ಥಳೀಯ ಕಾಲಮಾನ 5.30  ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಿಲ್ಲ.