ಶಾಕಿಂಗ್ ನ್ಯೂಸ್, ಒಂದೇ ಬಾವಿಯಿಂದ 9 ಮೃತದೇಹ ಪತ್ತೆ

ಹೈದರಾಬಾದ್ , ಮೇ 23,  ತೆಲಂಗಾಣದ ವಾರಂಗಲ್ ನಲ್ಲಿ ಒಂದೇ ಬಾವಿಯಿಂದ  ಬರೋಬ್ಬರಿ 9  ಮಂದಿಯ ಮೃತದೇಹಗಳು ಪತ್ತೆಯಾಗಿರುವ ಅಪರೂಪದ ವಿಚಿತ್ರ  ,  ಶಾಕಿಂಗ್ ಸುದ್ದಿ ತಡವಾಗಿ  ಬೆಳಕಿಗೆ ಬಂದಿದೆ. ವಾರಂಗಲ್ ಜಿಲ್ಲೆಯ ಗೋರ್ರೆಕುಂಟಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗುರುವಾರ ಬಾವಿಯಲ್ಲಿ ನಾಲ್ಕು ಮೃತದೇಹಗಳು ಪತ್ತೆಯಾಗಿದ್ದವು.ಶುಕ್ರವಾರ ಮತ್ತೊಂದು ಮೃತದೇಹ ಪತ್ತೆಯಾಗಿತ್ತು. ಬಳಿಕ ಪೊಲೀಸರು ಬಾವಿಯಿಂದ ನೀರು ಹೊರಹಾಕಿದಾಗ ಮತ್ತೆ ನಾಲ್ಕು ಮೃತದೇಹಗಳು ಪತ್ತೆಯಾಗಿದ್ದು ಈ ಮೂಲಕ ಒಂದೇ ದಿನ 9 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸ್ಥಳೀಯ  ಜನರು ಈ ಘಟನೆಯ ಬಗ್ಗೆ ಬೆಚ್ಚಿ ಬಿದ್ದಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ಮರಣೋತ್ತರ  ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸ್  ಮೂಲಗಳು ಹೇಳಿವೆ .