ಶೆಜ್ಜೇಶ್ವರ ದೇವಸ್ಥಾನದಲ್ಲಿ ಇಂದಿನಿಂದ ಶಿವರಾತ್ರಿ ಉತ್ಸವ

Shivratri festival from today at Shejjeshwar temple

ಶೆಜ್ಜೇಶ್ವರ ದೇವಸ್ಥಾನದಲ್ಲಿ ಇಂದಿನಿಂದ ಶಿವರಾತ್ರಿ ಉತ್ಸವ 

ಕಾರವಾರ 25: ತಾಲೂಕಿನ ಶೇಜವಾಡದ ಶೆಜ್ಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಇಂದಿನಿಂದ ಅದ್ಧೂರಿಯಾಗಿ ಆರಂಭಗೊಳ್ಳಲಿದೆ.ಮಹಾ ಶಿವರಾತ್ರಿ ನಿಮಿತ್ತ ಬುಧವಾರ ಬೆಳಿಗ್ಗೆಯಿಂದ ಸಂಜೆ 6 ಗಂಟೆಯವರೆಗೆ ದೇವರಿಗೆ ಪಂಚಾಮೃತ ಅಭಿಷೇಕ, ರಾತ್ರಿ 7 ಗಂಟೆಯಿಂದ ಲೋಕ ಕಲ್ಯಾಣರ್ಥಕ್ಕಾಗಿ ಶತರುದ್ರಾಭಿಷೇಕ ನಡೆಯಲಿದೆ. ಬಳಿಕ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದ್ದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆದೇಶದ ಪ್ರಕಾರ ಮಹಾ ಶಿವರಾತ್ರಿಯ ದಿನ ಪೂರ್ತಿ ರಾತ್ರಿ ದೇವಸ್ಥಾನವನ್ನು ತೆರೆದಿಟ್ಟು ಜಾಗರಣೆ ಮಾಡಲಾಗುತ್ತದೆ. 

ಫೆ.27 ರಂದು ಗುರುವಾರ ಬೆಳಿಗ್ಗೆ 7 ಗಂಟೆಗೆ ಸಮುದ್ರ ಸ್ನಾನಕ್ಕೆ ಪಲ್ಲಕ್ಕಿಯ ಮೂಲಕ ತೆರಳಿ ಮರಳಿದ ಬಳಿಕ ದೇವಾಲಯದಲ್ಲಿ ಮಧ್ಯಾಹ್ನ ಪೂಜೆ ರಾತ್ರಿ ದೇವರ ಪಲ್ಲಕ್ಕಿ ಮೆರವಣಿಗೆ, ರಂಗ ಪೂಜೆ, ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ ನಡೆಯಲಿವೆ.ಫೆ.28 ಶುಕ್ರವಾರ ದಂದು ಮಧ್ಯಾಹ್ನ 1:30 ಗಂಟೆಗೆ ಹೋಮ ಹವನ ಸಾಯಂಕಾಲ 5 ಘಂಟೆಗೆ ರಥಾರೋಹಣ ದೇವರಿಗೆ ಹಣ್ಣು ಕಾಯಿ ಸೇವೆ, ದರ್ಶನ, ಕಾಣಿಕೆ ಸಲ್ಲಿಸುವುದು, ಇತ್ಯಾದಿ ಸಾಯಂಕಾಲ 7:30 ರಿಂದ ಸಂಗೀತ ಕಾರ್ಯಕ್ರಮ ಸಂಕೇತ ಸಪ್ರೆ, ತಬಲಾ, ಸಿದ್ಧಾಂತ ಮಡಕೈಕರ, ಹಾರ್ಮೋನಿಯಮ್ ದೃಶಾಲ ಚಾರಿ ಗೋವಾ ಇವರಿಂದ, ರಾತ್ರಿ 10 ಗಂಟೆಗೆ ದೇವಸ್ಥಾನದ ಪಂಚವಾದ್ಯದೊಂದಿಗೆ ಹಿಲಾಮತಿ ಮೆರವಣಿಗೆ ನಂತರ ದೇವರ ಫಲಪುಷ್ಪ ಲೀಲಾವು ನಂತರ ನಾಟ್ಯ ರಾಣಿ ಭರತ ನಾಟ್ಯ ನೃತ್ಯ ಕಲಾ ಕೇಂದ್ರ, ಕಾರವಾರ ವಿದ್ಯಾರ್ಥಿಯವರಿಂದ ಭರತ ನಾಟ್ಯ ರಾತ್ರಿ 11:30 ಘಂಟೆಗೆ ಅಭಿನದ ನಾಟ್ಯ ಸಮಾಜ ಶೇಜವಾಡ ಇವರು ಅರ​‍್ಿಸುವ ಪ್ರದೀಪ್ ಗುರುನಾಥ ಕೋಠಾರಕರ, ಕಿನ್ನರ ವಿರಚಿತ ಸಾಮಾಜಿಕ ಕೊಂಕಣಿ ನಾಟಕ ಶಪಥ ತುಕಾ ಹ್ಯಾ ಮಂಗಳಸೂತ್ರಾಚೆ ಪ್ರದರ್ಶನಗೊಳ್ಳಲಿದೆ.  

ನಾಟಕ ಪ್ರದರ್ಶನ ಮುಗಿಯುತ್ತಿದ್ದಂತೆ ಮಾ.1 ಶನಿವಾರ ದಂದು ಬೆಳಿಗ್ಗೆ 4 ಗಂಟೆಗೆ ರಥೋತ್ಸವ ನಡೆಯಲಿದೆ. ಸಂಜೆ 4 ಗಂಟೆಗೆ ಶ್ರೀ ದೇವರ ಅವಭೃತ ಸ್ನಾನ (ಓಕುಳಿ), ಪಲ್ಲಕ್ಕಿ ಮೆರವಣಿಗೆ, ಪೂಜೆ, ಪ್ರಸಾದ ವಿತರಣೆ ನಡೆಯಲಿದ್ದು ರಾತ್ರಿ 9 ಗಂಟೆಗೆ ಓಎಚ್‌ಬಿ ಎವೆಂಟ್ಸ್‌ ಹೊನ್ನಾವರ ಇವರಿಂದ "ನೃತ್ಯ ಸಂಗಮ" ಕಾರ್ಯಕ್ರಮ ನಡೆಯಲಿದೆ.ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಎಲ್ಲಾ ಸದಸ್ಯರು, ಪ್ರಧಾನ ಅರ್ಚಕರು, ಒಳನೌಕರರು, ಹೊರನೌಕರರು ಹಾಗೂ ಊರ ನಾಗರಿಕರು ಕೋರಿದ್ದಾರೆ.